ಮಕ್ಕಳಲ್ಲಿನ ಆಂತರಿಕ ಶಕ್ತಿಯನ್ನು ಜಾಗೃತಿಗೊಳಿಸಿ

ಕಿನ್ನಿಗೋಳಿ: ಮಕ್ಕಳಲ್ಲಿನ ಸುಪ್ತ ಶಕ್ತಿಯನ್ನು ಜಾಗೃತಿಗೊಳಿಸಿ, ಅವರಲ್ಲಿನ ಪ್ರತಿಭೆ ಆಸಕ್ತಿ ಪ್ರಕಾರ ಪ್ರೊತ್ಸಾಹ ತರಬೇತಿ ನೀಡಬೇಕು. ಎಂದು ಮುಂಬಾಯಿ ಕಲಾ ಅಕಾಡೆಮಿಯ ಮುಖ್ಯ ಸಲಹೆಗಾರ ಡಾ. ಸುಧಾಕರ್ ಡಿ. ಅಮೀನ್ ಹಳೆಯಂಗಡಿ ಹೇಳಿದರು.
ಮಂಗಳೂರು ನೆಹರು ಯುವ ಕೇಂದ್ರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಳೆಯಂಗಡಿ ಶ್ರಿ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲ ಸಂಸ್ಥೆಗಳ ಸಂಯೋಜನೆಯಲ್ಲಿ ಶ್ರಿ ನಾರಾಯಣ ಸನಿಲ್ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆಯ ವಿವಿಧ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಕಾಲೇಜು ಪ್ರಿನ್ಸಿಪಾಲ್ ಜಯಶ್ರಿ ಪಿ. ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಸಂಯುಕ್ತವಾಗಿ ಸಂಘಟಿಸಿತ್ತು.
ದ.ಕ. ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಚ್. ರಾಮಚಂದ್ರ ಶೆಣೈ, ಶ್ರಿ ವಿದ್ಯಾ ವಿನಾಯಕ ಯುವಕ ಸಂಘದ ಸಲಹಾ ಸಮಿತಿ ಅಧ್ಯಕ್ಷ ಸದಾಶಿವ ಅಂಚನ್ ಚಿಲಿಂಬಿ, ರಜತ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಟ್ಯಾನಿ ಡಿಕೋಸ್ತ ಮತ್ತಿತರರು ಉಪಸ್ಥಿತರಿದ್ದರು.
ಶ್ರಿ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್ ಸ್ವಾಗತಿಸಿದರು, ರಶ್ಮಿ ರಾಮನಗರ ಬಹುಮಾನಿತರ ಪಟ್ಟಿ ವಾಚಿಸಿದರು, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜತಾ ವಾಸುದೇವ್ ವಂದಿಸಿದರು, ಯುವತಿ ಮಂಡಲದ ಅಧ್ಯಕ್ಷೆ ದಿವ್ಯಶ್ರಿ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ :
ಸ್ಲೋಸೈಕಲ್ ರೇಸ್ : ಬಾಲಕರು ; ಮಂಜುನಾಥ (ಪ್ರ), ರಿತೇಶ್ ಮಿಶ್ರ (ದ್ವಿ).
ಬಾಲಕಿಯರು ; ಸುಮಿತ್ರಾ (ಪ್ರ), ಮಂಜುಳಾ (ದ್ವಿ).
ಸಮೂಹ ಗೀತೆ : ಮಂಜುಳಾ ಮತ್ತು ಬಳಗ(ಪ್ರ), ಲಿಖಿತ ಮತ್ತು ಬಳಗ (ದ್ವಿ).
ಛದ್ಮ ವೇಷ : ಕಿಶನ್ ಮತ್ತು ಬಳಗ (ಪ್ರ), ವಿನಾಯಕ ಮತ್ತು ಬಳಗ (ದ್ವಿ).

Kinnigoli-28111802

Comments

comments

Comments are closed.

Read previous post:
ನ.29 ಶ್ರೀ ಅರಸು ಕುಂಜಿರಾಯ ತಾಂಬೂಲ ಪ್ರಶ್ನೆ

ಕಿನ್ನಿಗೋಳಿ: ಕೊಡೆತ್ತೂರು ಮಾಗಣೆಯ ಪ್ರಧಾನ ದ್ಯೆವವಾದ ಶ್ರೀ ಅರಸು ಕುಂಜಿರಾಯ ದ್ಯೆವಸ್ಥಾನದ ಭಂಡಾರ ಸ್ಥಾನವನ್ನು ಜೀರ್ಣೋಧ್ದಾರ ಮಾಡುವ ನಿಟ್ಟಿನಲ್ಲಿ ದ್ಯೆವಗಳ ಸೂಚನೆಯಂತೆ ನವಂಬರ್ 29ರ ಗುರುವಾರ ಬೆಳಿಗ್ಗೆ 10...

Close