ಕಿರೆಂ ಚರ್ಚ್ ವಾರ್ಷಿಕ ಹಬ್ಬ

ಕಿನ್ನಿಗೋಳಿ: ದಾಮಸ್‌ಕಟ್ಟೆ ಕಿರೆಂ ರೆಮದಿ ಅಮ್ಮನವರ ಚರ್ಚ್‌ನಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಲ್ಲಿ ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತು ಮನೆತನದವರಿಗೆ ಅಡಿಕೆ , ವೀಳ್ಯ ಹಾಗೂ ಬಾಳೆಗೊನೆ ಸಂಪ್ರದಾಯದಂತೆ ನೀಡಲಾಯಿತು.
ಐಕಳಬಾವದ ಜಯಪಾಲ ಶೆಟ್ಟಿ, ತಾಳಿಪಾಡಿಗುತ್ತುವಿನ ದಿನೇಶ್ ಶೆಟ್ಟಿ, ಸುಕುಮಾರ್ ಶೆಟ್ಟಿ ಹಾಗೂ ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ ಗೌರವ ಸ್ವೀಕರಿಸಿದರು.
ಈ ಸಂದರ್ಭ ಮಂಗಳೂರು ಕಥೋಲಿಕ್ ಧರ್ಮ ಪ್ರಾಂಥ್ಯದ ಧಮಾಧ್ಯಕ್ಷರಾದ ಬಿಷಪ್ ರೆ. ಡಾ. ಪೀಟರ್ ಪೌಲ್ ಸಲ್ಡಾನಾ, ದಾಮಸ್ಕಟ್ಟೆ ಕಿರೆಂ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ, ಕಿರೆಂ ಚರ್ಚ್ ಸಹಾಯಕ ಧರ್ಮಗುರು ರೆ.ಫಾ. ಜಯಪ್ರಕಾಶ್, ಚರ್ಚ್‌ಪಾಲನ ಮಂಡಳಿ ಉಪಾಧ್ಯಕ್ಷ ಬರ್ಟನ್ ಸಿಕ್ವೇರಾ, ಕಾರ್ಯದರ್ಶಿ ಅನಿತಾ ಡಿಸೋಜ, ಸಂತಾನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-29111804

Comments

comments

Comments are closed.

Read previous post:
Kinnigoli-29111803
ಕಿನ್ನಿಗೋಳಿ ಮನೆ ಮನೆ ಬೇಟಿ ಕಾರ್ಯಕ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗುತ್ತಕಾಡುವಿನಲ್ಲಿ ಸ್ವಚ್ಚ ಗ್ರಾಮ ಯೋಜನೆಯಡಿಯಲ್ಲಿ ಮನೆ ಮನೆ ಭೇಟಿಯ ಸ್ವಚ್ಚತೆಯ ಅರಿವು ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ ಗ್ರಾಮ...

Close