ಗುತ್ತಕಾಡು ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ : ವಿದ್ಯಾರ್ಥಿಗಳ ಸರ್ವೊತೋಮುಖ ಬೆಳವಣಿಗೆಗೆ ಶಿಕ್ಷಕರು ಹಾಗೂ ಫೋಷಕರು ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಬೇಕು. ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು.
ಗುತ್ತಕಾಡು ದ.ಕ. ಜಿಲ್ಲಾ ಪಂಚಾಯಿತಿ ಸರಕಾರಿ ಶಾಲೆಯಲ್ಲಿ ಬುಧವಾರ ನಡೆದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ಯುಗಪುರುಷ ಪ್ರಧಾನ ಕೆ. ಭುವನಾಭಿರಾಮ ಉಡುಪ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ. ಎಚ್ . ಮಯ್ಯದ್ದಿ, ಶ್ಯಾಮಲ ಪಿ. ಹೆಗ್ಡೆ, ವಾಣಿ, ಶಾಲಾ ಸಮಿತಿಯ ಚಂದ್ರಶೇಖರ್ , ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಹೆಗ್ಡೆ, ಉದ್ಯಮಿ ಸ್ಟ್ಯಾನಿ ಪಿಂಟೋ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ರೀಟಾ ಡೇಸಾ ವರದಿ ವಾಚಿಸಿದರು. ಸಹ ಶಿಕ್ಷಕಿ ಅನುರಾಧ ಸಿ. ವಂದಿಸಿದರು. ಯಶೋದಾ ಕಾರ್ಯಕ್ರಮ ನಿರೂಪಿಸಿದರು.

Kinnigoli29111801

Comments

comments

Comments are closed.

Read previous post:
Kinnigoli-29111805
ಲಿಟ್ಲ್ ಫ್ಲವರ್ ಶಾಲೆ : ಉಚಿತ ಸೈಕಲ್‌ಗಳ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲೆಯಲ್ಲಿ ಸರಕಾರದಿಂದ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ಗಳ ವಿತರಣೆಯನ್ನು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು,...

Close