ಹಳೆಯಂಗಡಿ ಮಕ್ಕಳ ಗ್ರಾಮ ಸಭೆ

ಕಿನ್ನಿಗೋಳಿ: ಹಳೆಯಂಗಡಿ ಗ್ರಾಮ ಪಂಚಾಯಿತಿ ವತಿಯಿಂದ ಹಳೆಯಂಗಡಿ ಇಂದಿರಾನಗರದ ಬೊಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆನಡೆಯಿತು.
ನಮ್ಮ ಶಾಲೆಯ ಶಾಲಾ ಕೊಠಡಿಗಳಿಗೆ ಕಿಟಕಿಗಳಿಲ್ಲ, ಶಾಲಾ ಬದಿಯಲ್ಲಿ ಸುರಿಯುವ ಕಸತ್ಯಾಜ್ಯ ಚರಂಡಿಯಲ್ಲಿ ಕೊಳಚೆ ನೀರಿನಿಂದಾಗಿ ಕೆಟ್ಟ ವಾಸನೆ ಬರುತ್ತಿದೆ, ಆಟಕ್ಕೆ ಮೈದಾನ ಇಲ್ಲ, ಶಾಲೆಯಲ್ಲಿ ಖಾಯಂ ಶಿಕ್ಷಕರು ಬೇಕು ಮುಂತಾದ ಸಮಸ್ಯೆಗಳನ್ನು ಹೇಳಿ ಪರಿಹಾರಕ್ಕೆ ಆಗ್ರಹಿಸಿದರು.
ಮಕ್ಕಳ ಗ್ರಾಮ ಸಭೆಯನ್ನು ಕಟೀಲು ಪದವಿ ಪೂರ್ವ ಕಾಲೇಜಿನ ಉಮೇಶ್ ಉದ್ಘಾಟಿಸಿದರು.
ಹಳೆಯಂಗಡಿ ಯುಬಿಎಂಸಿ ಶಾಲೆಯ ನಿತ್ಯಾನಂದ ಮಾತನಾಡಿ ಮಕ್ಕಳ ಸಂರಕ್ಷಣಾ ಸಮಿತಿಯ ಕೇಂದ್ರ ಮೂಲ್ಕಿ ಹೋಬಳಿಯಲ್ಲಿಯೂ ಸ್ಥಾಪನೆಯಾಗಬೇಕು ಎಂದರು.
ಪಿಡಿಒ ಅನಿತಾ ಕ್ಯಾಥರಿನ್ ಉತ್ತರಿಸಿ ಮಳೆ ನೀರು ಹರಿಯಲು ಇರುವ ಚರಂಡಿಯಲ್ಲಿ ಮನೆಯ ಕೊಳಚೆ ನೀರು ಹರಿಯಬಾರದು, ಇಂಗು ಗುಂಡಿ ರಚಿಸಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶ ಇದೆ. ಶಾಲೆಯ ಪರಿಸರವನ್ನು ಸ್ವಚ್ಚವಾಗಿಡಲು ಮಕ್ಕಳಿಗೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು, ಶಾಲಾ ಮೈದಾನದ ಬಗ್ಗೆ ಸ್ಥಳೀಯ ಮಸೀದಿ ಸಮಿತಿಯವರಲ್ಲಿ ಚರ್ಚಿಸಲಾಗುವುದು, ಯುಬಿಎಂಸಿ ಶಾಲಾ ಶಿಕ್ಷಕರ ಬಗ್ಗೆ ಇಲಾಖೆಯೊಂದಿಗೆ ಮಾತನಾಡಲಾಗುವುದು ಎಂದರು.
ಶಾಲೆಯ ವಿದ್ಯಾರ್ಥಿ ನಾಯಕ ಸನತ್ ಅಧ್ಯಕ್ಷತೆ ವಹಿಸಿದ್ದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಅಬ್ದುಲ್ ಅಜೀಜ್, ಚಂದ್ರಕುಮಾರ್ ಸಸಿಹಿತ್ಲು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಶೋಧಾ, ಮಂಗಳೂರು ಚೈಲ್ಡ್ ಲೈನ್‌ನ ದೀಕ್ಷಿತ್, ಆರೋಗ್ಯ ಸಹಾಯಕಿ ಗೀತಾ, ಮೂಲ್ಕಿ ಪೊಲೀಸ್ ಸಿಬ್ಬಂದಿ ಸಿದ್ದು ಎಸ್. ಬಿ., ಶಾಲಾ ಮುಖ್ಯ ಶಿಕ್ಷಕ ಜಯರಾಂ, ಪಂಚಾಯಿತಿ ಪ್ರಭಾರ ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಶ್ರೀಶೈಲಾ, ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್, ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಕಾವ್ಯ, ಜೋಯ್ಲಿನ್, ಹಳೆಯಂಗಡಿ ಶಾಲೆಯ ಧನುಶ್, ಉರ್ದು ಶಾಲೆಯ ಬೀಪಾತುಮ್ಮಾ, ಯುಬಿಎಂಸಿಯ ಜನ್‌ಸಿನ್ ಮಿರೋಲ್, ಸಿಎಸ್‌ಐನ ದಿಶಾ, ಸಸಿಹಿತ್ಲುವಿನ ಪ್ರಣಮ್ಯ ಇದ್ದರು.
ಬೊಳ್ಳೂರು ಶಾಲೆಯ ಸಬ್ರಿನಾ ಕಾರ್ಯಕ್ರಮ ನಿರೂಪಿಸಿದರು.
ಜಾಥ, ಸಾಂಸ್ಕೃತಿಕ ಕಾರ್ಯಕ್ರಮ
ಮಕ್ಕಳಿಂದ ಶಾಲಾ ವಠಾರದಲ್ಲಿ ವಿವಿಧ ಘೋಷಣಾ ಫಲಕಗಳೊಂದಿಗೆ ಜಾಥಾ ನಡೆಯಿತು. ಆಶಯ ಗೀತೆಗಳು, ನೃತ್ಯ, ಜಾಗೃತಿ ಕಿರು ನಾಟಕವನ್ನು ಮಕ್ಕಳು ಪ್ರದರ್ಶಿಸಿದರು.

Kinnigoli-29111801

Comments

comments

Comments are closed.

Read previous post:
Kinnigoli-28111808
ಅತ್ತೂರು ಬೈಲು ಗಣಪತಿ ಉಡುಪರ ಶ್ರದ್ದಾಂಜಲಿ ಸಭೆ

ಕಿನ್ನಿಗೋಳಿ: ಅತ್ತೂರು ಬೈಲು ಗಣಪತಿ ಉಡುಪರು ಮೂಲ್ಕಿ ಅರಸು ಮನೆತನದ ರಾಜ ಪುರೋಹಿತರಾಗಿದ್ದು ಅರಮನೆಗೆ ಹತ್ತಿರದ ಸಂಬಂಧ ಹೊಂದಿದ್ದರು ಎಂದು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು...

Close