ಕಿನ್ನಿಗೋಳಿ ಅಂಚೆ ಕಚೇರಿ : ವಿದಾಯ ಕೂಟ

ಕಿನ್ನಿಗೋಳಿ: ತಾನು ಮಾಡಿದ ಕೆಲಸದ ಅನುಭವವನ್ನು ಇತರರಿಗೂ ನೀಡಿ ಸಮಾಜ ಸೇವೆಯ ಮನೋಭಾವ ಬೆಳಸಿಕೊಂಡರೆ ಜೀವನದಲ್ಲಿ ಸಾರ್ಥಕತೆ ಪಡೆಯಬಹುದು ಎಂದು ಅಂಚೆ ಇಲಾಖೆಯ ಮಂಗಳೂರು ಅಂಚೆ ವಲಯದ ಪೂರ್ವ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಮ್ಯಾಕ್ಸಿ ಜಿ. ಪಿಂಟೋ ಹೇಳಿದರು.
ಶುಕ್ರವಾರ ಕಿನ್ನಿಗೋಳಿ ಸ್ವಾಗತ್ ಸಭಾಭವನದಲ್ಲಿ ಕಿನ್ನಿಗೋಳಿ ಸಹಿತ ವಿವಿಧ ಅಂಚೆ ಕಛೇರಿಯಲ್ಲಿ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಲಿಯಾಸ್ ಡಿಸೋಜ ಅವರ ವಿದಾಯ ಕೂಟದಲ್ಲಿ ಮಾತನಾಡಿದರು.
ಕಟೀಲು ಚರ್ಚ್‌ನ ಫಾ. ರೋನಾಲ್ಡ್ ಕುಟಿನ್ನೋ ಮಾತನಾಡಿ ಸರಕಾರಿ ಕೆಲಸ ಇದೆ ಎಂದು ಬೀಗಬಾರದು ಕೆಲಸದ ಬಗ್ಗೆ ಕಾಳಜಿ, ಜನರಿಗೆ ಸೇವೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭ ಎಲಿಯಾಸ್ ಡಿಸೋಜ ದಂಪತಿಯನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಿನ್ನಿಗೋಳಿ ಅಂಚೆ ಕಚೇರಿಯ ಅಂಚೆ ಪಾಲಕ ಭಾಸ್ಕರ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಎಪಿಎಂಸಿಯ ಪ್ರಮೋದ್ ಕುಮಾರ್, ಯೂನಿಯನ್‌ನ ಹಿರಿಯ ನಾಯಕರಾದ ಶೈಲೇಶ್, ಚಂದ್ರಕಾಂತ್ ದೇವಾಡಿಗ ಮತ್ತಿತರರು ಉಪಸ್ಥಿರಿದ್ದರು.
ಗಣಪತಿ ನಾಯಕ್ ಕರ್ಪೆ ಅಭಿನಂದನಾ ಭಾಷಣಗೈದರು. ಕಚೇರಿ ಸಿಬಂದಿ ರೇಖಾ ಶೆಣೈ ಸನ್ಮಾನ ಪತ್ರ ವಾಚಿಸಿದರು. ನಿವೃತ್ತ ಅಂಚೆಪಾಲಕ ಅನಂತಕೃಷ್ಣ ಭಟ್, ಪುರುಷೋತ್ತಮ ಶೆಟ್ಟಿ ನಿವೃತ್ತರ ಬಗ್ಗೆ ಮಾತನಾಡಿದರು. ಕಿನ್ನಿಗೋಳಿ ಅಂಚೆ ಕಚೇರಿಯ ಸಿಬಂದಿ ಬಿ. ರಾಮಚಂದ್ರ ಕಾಮತ್ ಸ್ವಾಗತಿಸಿದರು. ರಘುನಾಥ ಕಾಮತ್ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.

Kinnigoli-01121804

Comments

comments

Comments are closed.

Read previous post:
Kinnigoli-01121803
ರಮ್ಯ ರವಿಜೇಜ್ ಅವರಿಗೆ ಪಿಎಚ್.ಡಿ

ಕಿನ್ನಿಗೋಳಿ: ರಮ್ಯ ರವಿತೇಜ್ ಅವರು ಕೆಎಂಸಿ ಜನರಲ್ ಮೆಡಿಸಿನ್ ವಿಭಗಾದ ಮಾಜಿ ಪ್ರೊಫಸರ್ ಡಾ. ಪ್ರಭಾ ಅಽಕಾರಿ ಹಾಗೂ ಅಸೋಸಿಯೇಟ್ ಡೀನ್ ಮತ್ತು ಸರ್ಜರಿ ವಿಭಾಗದ ಪ್ರೊ. ಡಾ....

Close