ರಾಮಣ್ಣ ಶೆಟ್ಟಿ : ವಾರ್ಷಿಕ ಕ್ರೀಡಾಕೂಟ

ಕಿನ್ನಿಗೋಳಿ: ಸ್ವಸ್ಥ ಶರೀರ ಸ್ವಸ್ಥ ಮನಸ್ಸು ಇರಬೇಕಾದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ದೈಹಿಕ, ಮಾನಸಿಕ ಬೆಳವಣಿಗೆಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ದೈಹಿಕ ಶಿಕ್ಷಣ ಅಗತ್ಯ ತಮ್ಮ ಗುರಿಸಾಧನೆಗೆ, ಉತ್ತಮ ಆರೋಗ್ಯಕ್ಕೆ ಕ್ರೀಡೆ ಅತಿ ಮುಖ್ಯ ಎಂದು ಶಾಲಾ ಹಳೆ ವಿದ್ಯಾರ್ಥಿ ಪ್ರಸ್ತುತ ಎಂಆರ್‌ಪಿಎಲ್ ಇನ್ಸ್‌ಟ್ರುಮೆಂಟೇಶನ್ ವಿಭಾಗದ ಒಎನ್‌ಜಿಸಿಯ ಡೆಪ್ಯುಟಿ ಮ್ಯಾನೇಜರ್ ರೊಯ್ ಸ್ಟನ್ ರೋಹನ್ ಮಸ್ಕರೇನ್ಹಸ್ ಹೇಳಿದರು.
ತೋಕೂರು ಡಾ, ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ೨೦೧೮-೧೯ನೆಯ ಸಾಲಿನ ವಾರ್ಷಿಕ ಕ್ರೀಡಾಕೂಟ ಉಧ್ಘಾಟಿಸಿ ಮಾತನಾಡಿದರು.
ಶಾಲಾ ಕ್ರೀಡಾ ಕಾರ್ಯದರ್ಶಿ ನೀಹಾಲ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಂಜೆ ನಡೆದ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾರ್ಷೆಲ್ ಆಟ್ಸ್ ನಲ್ಲಿ ಅಪ್ರತಿಮ ಸಾಧನೆಗೈದ ಶಾಲಾ ಹಳೆ ವಿದ್ಯಾರ್ಥಿ ನಿತೇಶ್ ಕುಮಾರ್ ಆಚಾರ್ಯ ಕ್ರೀಡಾ ಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಶಾಲಾ ಪ್ರಿನ್ಸಿಪಾಲ್ ಶ್ರೀಲತಾ ರಾವ್, ಶಿಕ್ಷಕ- ರಕ್ಷಕ ಸಂಘದ ಆಧ್ಯಕ್ಷ ದೇವಿದಾಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಪ್ರಿನ್ಸಿಪಾಲ್ ಶ್ರೀಲತಾ ರಾವ್ ಸ್ವಾಗತಿಸಿದರು. ಸಾಕ್ಷಿ ಕುಂದರ್ ವಂದಿಸಿದರು.. ಧ್ರುವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-01121802

Comments

comments

Comments are closed.

Read previous post:
Kinnigoli-01121801
ಶ್ರಮಜೀವಿಗಳಾಗಿ ಬದುಕಲು ಕಲಿಯೋಣ

ಕಿನ್ನಿಗೋಳಿ : ದೇಶಪ್ರೇಮ ಬೆಳೆಸುವ ಶಿಕ್ಷಣ ನೀಡಿದರೆ ಸಮಾಜದಲ್ಲಿ ಶ್ರಮ ಜೀವಿಗಳಾಗಿ ಬೆಳೆಯುತ್ತಾರೆ. ಎಂದು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಹಳೆಯಂಗಡಿ ಶ್ರೀ ನಾರಾಯಣ ಸನಿಲ್...

Close