ಮೂಲ್ಕಿ ಶ್ರೀವ್ಯಾಸ ಮಹರ್ಷಿ ವಾರ್ಷಿಕೋತ್ಸವ

ಮೂಲ್ಕಿ: ಮಕ್ಕಳಿಗೆ ಎಳವೆಯಲ್ಲಿಯೇ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಮೂಡಿಸಿದರೆ ಉನ್ನತ ವ್ಯಾಸಂಗದ ಸಮಯ ಅವರಿಗೆ ಬಹಳ ಸಹಕಾರಿಯಾಗುತ್ತದೆ ಎಂದು ಉದ್ಯಮಿ ಶೃದ್ಧಾ ಎಸ್. ಪೈ ಹೇಳಿದರು.
ಮೂಲ್ಕಿ ಶ್ರೀವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ಶ್ರೀ ರಾಧಾಕೃಷ್ಣ ಸಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವದ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಕ್ಕಳ ಚಿತ್ತಾಕರ್ಷಣೆಯ ಮೂಲವಾದ ಚಿತ್ರಕಥೆಗಳನ್ನು ಓದಿಸಿ ಅವರಿಗೆ ಅದಗಳ ಅರ್ಥ ಹೇಳುವ ಮೂಲಕ ಜ್ಞಾನವಂತರಾಗಿಸಬೇಕು ಮುಂದೆ ನಿಯತಕಾಲಿಕೆಗಳು ಜ್ಞಾನ ಕೋಶಗಳನ್ನು ಓದಿಸುವ ಮೂಲಕ ಮಕ್ಕಳ ಜ್ಞಾನ ಅಭಿವೃದ್ಧಿಗೆ ಹೆತ್ತವರು ಸಹಕರಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕೆ.ಎನ್.ಶೆಣೈ ವಹಿಸಿ ಶುಭ ಹಾರೈಸಿದರು.
ಅತಿಥಿಗಳಾಗಿ ಪದ್ಮಜಾ ವಾಸುದೇವ ಕುಡ್ವ, ಶಾಲಾ ಸಂಚಾಲಕ ಜಿ.ಜಿ.ಕಾಮತ್, ಕಾರ್ಯದರ್ಶಿ ದೇವಣ್ಣ ನಾಯಕ್,ಶಾಲಾಡಳಿತ ಮಂಡಳಿ ಸದಸ್ಯರಾದ ಎಚ್.ರಾಮದಾಸ್ ಕಾಮತ್, ಮೋಹನ್‌ದಾಸ್ ಪ್ರಭು, ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ ಉಪಸ್ಥಿತರಿದ್ದರು. ಸವಿತಾ ಶೆಣೈ ಸ್ವಾಗತಿಸಿದರು.ಮುಕ್ತಾ ಶೆಣೈ ವರದಿ ಮಂಡಿಸಿದರು, ಚಂದ್ರಿಕಾ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು. ಅಕ್ಷರ್ ಎಸ್ ರಾವ್, ಆದಿತ್ಯ ಭಟ್,ಹನ್ಸಿಫ್, ಆದಿತ್ಯ ಎಚ್.ಎ, ಸನತ್ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಅನಿತಾ,ವೀಣಾ, ಕವಿತಾ ನಿರೂಪಿಸಿದರು. ಅನುರಾಧಾ ಗೋಪಾಲ್ ವಂದಿಸಿದರು.

Mulki-02121801

Comments

comments

Comments are closed.