ಪದ್ಮನೂರು ಈದ್ ಮಿಲಾದ್ ಕಾರ್ಯಕ್ರಮ

ಕಿನ್ನಿಗೋಳಿ: ಪ್ರಪಂಚದ ಎಲ್ಲಾ ಧರ್ಮಗಳ ಸಾರ ಒಂದೇ ಆಗಿದೆ. ಸ್ನೇಹ ಸೌಹಾರ್ದತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲಸಲು ಸಾಧ್ಯ ಎಂದು ಓರಿಯಂಟಲ್ ವಿಮಾ ಕಂಪನಿಯ ಸುರತ್ಕಲ್ ಶಾಖೆಯ ಪ್ರಬಂಧಕ ಯಾದವ ದೇವಾಡಿಗ ಹೇಳಿದರು.
ಕಿನ್ನಿಗೋಳಿಯ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಭಾಂಗಣದಲ್ಲಿ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಪದ್ಮನೂರು- ಕಿನ್ನಿಗೋಳಿ ಇದರ ಆಶ್ರಯದಲ್ಲಿ ನಡೆದ ದಶಮಾನೋತ್ಸವ ಸಾರ್ವಜನಿಕ ಈದ್ ಮಿಲಾದ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರವಾದಿಯವರ ಸಂದೇಶ ಹಾಗೂ ಅವರ ತತ್ವ ಸಿದ್ಧಾಂತಕ್ಕೆ ಬದ್ದರಾಗಿ ಬದುಕಿ ಜೀವನವನ್ನು ಸಾಥ್ಯಕ್ಯ ಗೊಳಿಸುವಲ್ಲಿ ನಾವು ಮನಸ್ಸು ಮಾಡಬೇಕು ಎಂದು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಹೇಳಿದರು.
ಸಮಿತಿಯ ಅಧ್ಯಕ್ಷ ಪಿ. ಸತೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಅಬ್ದುಲ್ ರಹೆಮಾನ್ ಪದ್ಮನೂರು ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ. ರೂಪೇಶ್ ತಾವ್ರೋ ಉಪಸ್ಥಿತರಿದ್ದರು. ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಉಪಾಧ್ಯಕ್ಷ ಕೆ. ಎ. ಖಾದರ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು. ಕೆ. ಎ. ಅಬ್ದುಲ್ಲಾ ಕಾರ್ಯಕ್ರಮ ನಿರೂಪಿಸಿದರು.
ದಫ್ ಸ್ಪರ್ಧೆ ವಿಜೇತರು: ಪ್ರಥಮ – ರಫ್ರಿರಿಯಾ ಧಫ್ ಕಮಿಟಿ ಪಂಜಿಮೊಗರು, – ದ್ವಿತೀಯ – ಇಬ್ರಾಹಿಂ ಬಾದಷಹ ಕಮಿಟಿ ತೃತೀಯ – ಸಿ. ಎಮ್ . ಧಫ್ ಕಮಿಟಿ ಬೊಂದೆಲ್.

Kinnigoli-04121802

Comments

comments

Comments are closed.

Read previous post:
Kinnigoli-04121801
ಸಂತೆಕಟ್ಟೆ : ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಪ್ರತಿಭಾ ಕಾರಂಜಿಗಳು ಪೂರಕ ಎಂದು ಹೊಸಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಎಂ. ಅಬ್ದುಲ್ ರಹಿಮಾನ್ ಫೈಝಿ ಹೇಳಿದರು. ಹಳೆಯಂಗಡಿಯ...

Close