ಸಂತೆಕಟ್ಟೆ : ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಪ್ರತಿಭಾ ಕಾರಂಜಿಗಳು ಪೂರಕ ಎಂದು ಹೊಸಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಎಂ. ಅಬ್ದುಲ್ ರಹಿಮಾನ್ ಫೈಝಿ ಹೇಳಿದರು.
ಹಳೆಯಂಗಡಿಯ ಹೊಸಂಗಡಿ ಕದಿಕೆ ಜುಮಾ ಮಸೀದಿಯ ಆಡಳಿತಕ್ಕೊಳಪಡುವ ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಮದರಸದ ವತಿಯಿಂದ ಭಾನುವಾರ ಜುಮಾ ಮಸೀದಿಯ ವಠಾರದಲ್ಲಿ ನಡೆದ ವಿಶ್ವ ಪ್ರವಾದಿ ಮುಹಮ್ಮದ್ (ಸ.ಅ.) ಅವರ ೧೪೯೩ನೇ ಜನ್ಮದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಕಾರ್ಯಕ್ರಮ ಉದ್ಘಾಟಿಸಿದರು.
ಮಕ್ಕಳು ಪಠ್ಯ ಚಟುವಟಿಕೆಗಳ ಜೊತೆಗೆ ಪ್ರತಿಭಾ ಕಾರಂಜಿಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬಹುದು. ಎಂದು ಶೈಖುನಾ ಅಲ್ಹಾಜ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್ ದುವಾ ಆಶೀರ್ವಚನ ನೀಡಿದರು.
ಹಿಮಾಯತುಲ್ ಇಸ್ಲಾಂ ಮದರಸ ಕಮಿಟಿಯ ಅಧ್ಯಕ್ಷ ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್ ಕದಿಕೆ, ಕಾರ್ಯದರ್ಶಿ ಫಕ್ರುದ್ದೀನ್, ಸಂತೆಕಟ್ಟೆ ಮದರಸದ ಗೌರವಾಧ್ಯಕ್ಷ ಸಾಹುಲ್ ಹಮೀದ್ ಸಂತೆಕಟ್ಟೆ, ಹಾಜೀ ಇಕ್ಬಾಲ್ ಅಹ್ಮದ್ ಮಂಗಳೂರು, ಉರೂಸ್ ಸಮಿತಿಯ ಅಧ್ಯಕ್ಷ ಬಶೀರ್ ಕಲ್ಲಾಪು, ಮಿರ್ಜಾ ಅಹ್ಮದ್ ಗುಂಡು, ಇಂದಿರಾನಗರ ಖೀಲ್ರಿಯಾ ಮದರಸದ ಸದರ್ ಮುಅಲ್ಲಿಂ ಜಿ.ಎಂ. ಹನೀಫ್ ದಾರಿಮಿ, ಅಬ್ದುಲ್ ರಶೀದ್ ಮುಸ್ಲಿಯಾರ್, ಮೌಲಾನಾ ಮುಹಮ್ಮದ್ ಹನೀಫ್ ಝಿಯಾಹಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-04121801

Comments

comments

Comments are closed.

Read previous post:
Kinnigoli-01121804
ಕಿನ್ನಿಗೋಳಿ ಅಂಚೆ ಕಚೇರಿ : ವಿದಾಯ ಕೂಟ

ಕಿನ್ನಿಗೋಳಿ: ತಾನು ಮಾಡಿದ ಕೆಲಸದ ಅನುಭವವನ್ನು ಇತರರಿಗೂ ನೀಡಿ ಸಮಾಜ ಸೇವೆಯ ಮನೋಭಾವ ಬೆಳಸಿಕೊಂಡರೆ ಜೀವನದಲ್ಲಿ ಸಾರ್ಥಕತೆ ಪಡೆಯಬಹುದು ಎಂದು ಅಂಚೆ ಇಲಾಖೆಯ ಮಂಗಳೂರು ಅಂಚೆ ವಲಯದ ಪೂರ್ವ...

Close