ಮೂಲ್ಕಿ: ಮುಂಡಾಳ(ಪ.ಜಾ) ವಾರ್ಷಿಕ ಮಹಾಸಭೆ

ಮೂಲ್ಕಿ: ಸಮಾಜದ ಉನ್ನತಿಯಾಗಲು ಹಾಗೂ ನಮ್ಮ ಯುವ ಪೀಳಿಗೆಗೆ ಜೀವನದಲ್ಲಿ ಉನ್ನತ ಅವಕಾಶಗಳು ಲಭ್ಯವಾಗಲು ನಾವು ಸಂಘಟಿತರಾಗಿ ಶ್ರಮಿಸಬೇಕು ಎಂದು ಬಾರ್ಕೂರು ಕಚ್ಚೂರು ಬಬ್ಬು ಸ್ವಾಮಿ ಮೂಲ ಕ್ಷೇತ್ರದ ಶ್ರೀ ಮಾಲ್ದಿ ದೇವಿ ದೇವಸ್ಥಾನದ ಗೌರವ ಅಧ್ಯಕ್ಷ ಚೆನ್ನಪ್ಪ ಬಿಎಸ್ ಹೇಳಿದರು.
ಮೂಲ್ಕಿ ಗೇರುಕಟ್ಟೆ ಒಂಬತ್ತು ಮಾಗಣೆಯ ಮುಂಡಾಳ(ಪ.ಜಾ) ಶಿವ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಧೂವರರ ಅನ್ವೇಷಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಪರಿಶಿಷ್ಟ ಜಾತಿಗೆ ಶೇ18ರಲ್ಲಿ ಮೀಸಲಾತಿ ಇದೆ ಎಂದು ಸರಕಾರ ಘೋಷಿಸುತ್ತದೆ ಆದರೆ ಪರಿಶಿಷ್ಟರಲ್ಲಿ ನೂರಕ್ಕೂ ಅಧಿಕ ಜಾತಿಗಳು ಬರುವುದರಿಂದ ಅರ್ಹರು ವಂಚಿತರಾಗುತ್ತಾರೆ. ರಾಜಕಾರಣಿಗಳ ಧೋರಣೆಗಳು ಹಾಗೂ ಇನ್ನಿತರ ಸಮಸ್ಯೆಗಳಿಂದ ಸೌಲಭ್ಯಗಳು ಪರಿಶಿಷ್ಟರಲ್ಲಿ ಸಿರಿವಂತರ ಪಾಲಾಗುತ್ತಿದೆ. ಆದುದರಿಂದ ನಾವು ಸಂಘಟಿತರಾಗಿ ಹೋರಾಟ ನಡೆಸುವುದು ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಬಹಳ ಅಗತ್ಯವಾಗಿದೆ ಎಂದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಿಯ ನೂತನ ಸ್ವರ್ಣ ಪಲ್ಲಕಿಗೆ ಮರ ಸಮರ್ಪಿಸುವ ಭಾಗ್ಯ ನಮ್ಮ ಸಮಾಜಕ್ಕೆ ಲಭ್ಯವಾಗಿದೆ. ಬಹ್ಮ ಕಲಶೋತ್ಸವ ಸಂದರ್ಭ ನಮ್ಮ ಸಮಾಜ ಭಾಂದವರು ನೀಡಿದ ಉತ್ತಮ ಸೇವೆಯ ಪ್ರತೀಕವಾಗಿ ಈ ಭಾಗ್ಯವನ್ನು ದೇವಿ ನಮ್ಮ ಸಮಾಜಕ್ಕೆ ನೀಡಿದ್ದಾಳೆ ಎಂದು ನಂಬಿದ್ದೇನೆ ಮುಂದೆಯೂ ನಮ್ಮ ಸಮಾಜದ ಯುವ ಜನತೆ ಶ್ರೀದೇವಿಯ ಹಾಗೂ ಕಚೂರು ಕ್ಷೇತ್ರದ ಸೇವೆಯಲ್ಲಿ ಮುಕ್ತವಾಗಿ ಭಾಗವಹಿಸಬೇಕು ಎಂದರು.
ಸಮುದಾಯ ಭವನ ನಿರ್ಮಾಣ ಸಮಿತಿಯ ಗೌ.ಪ್ರದಾನ ಕಾರ್ಯದರ್ಶಿ ಸಚ್ಚಿದಾನಂದರವರು ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಬಹಳಷ್ಟು ಮಂದಿ ಈ ಪ್ರದೇಶದವರಿದ್ದಾರೆ ಅಂದು ಅವರು ಸಂಘಟಿತರಾದ ಗುರುತಿಗೆ ಈ ಸಂಘ ಸ್ಥಾಪನೆಯಾಗಿದೆ. ಆದರೆ ಅಂದಿನ ಬಡತನದ ಕಾರಣ ಸ್ವಾತಂತ್ರ್ಯ ಹೋರಾಟಗಾರರ ಹೆಸರು ನೀಡಲಾಗದೆ ಅವರು ಮೂಲೆಗುಂಪಾಗಿದ್ದಾರೆ ಆದರೆ ಅವರು ನಿರ್ಮಿಸಿದ ಸಂಘ ಇಂದಿಗೂ ಇದೆ ಈ ಬಾರಿ ಸರಕಾರದ ೪ಕೋಟಿ ಅನುದಾನದಲ್ಲಿ ಉತ್ತಮ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ ಇದಕ್ಕೆ ಸರ್ವರ ಸಹಕಾರ ಬಹಳ ಅಗತ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯಶವಂತ ಎ ವಹಿಸಿದ್ದರು.
ಪ್ರತಿಭಾ ಪುರಸ್ಕಾರ: ಹತ್ತನೇ ತರಗತಿಯ ದೀಕ್ಷಿತ್ ಮತ್ತು ದೀಕ್ಷಿತಾ, ಪದವಿ ಪೂರ್ವ ವಿಭಾಗದ ಭರತೇಶ್ ,ವರ್ಷಾ ಅಂಚನ್, ಅಶ್ವಿನಿ ಎಂ. ಪದವಿ ವಿಭಾಗದ ವಿಜೇತಾ.ವಿಕೆ,ರಕ್ಷಿತಾ,ರಷ್ಮಿ ರವರನ್ನು ಪ್ರತಿಭಾ ಪುರಸ್ಕಾರ ಸಹಿತ ಗೌರವಿಸಲಾಯಿತು.
ಸಾಧಕರ ಸನ್ಮಾನ: ಸಮಾಜದ ಸಾಧಕರ ನೆಲೆಯಲ್ಲಿ ಚೆನ್ನಪ್ಪ ಬಿಎಸ್ ಹಾಗೂ ಕರ್ನಾಟಕ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ವಿಜೇತ ಶಂಕರ ಮಾಸ್ಟರ್ ರವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಸಂಘದ ಗೌ.ಅಧ್ಯಕ್ಷ ಶ್ರೀಧರ ಪಕ್ಷಿಕೆರೆ,ಕಾರ್ಯದರ್ಶಿ ಸುಕುಮಾರ್ ಬಿ.ಗೇರುಕಟ್ಟೆ,ಕೋಶಾಧಿಕಾರಿ ದಿವ್ಯರಾಜ್ ಕೆ. ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಪ್ರಕಾಶ್,ಯುವಕ ಮಂಡಲದ ಅಧ್ಯಕ್ಷ ತಿಲಕ್ ಉಪಸ್ಥಿತರಿದ್ದರು.
ಸಿಂಡ್ ಸ್ವಉದ್ಯೋಗ ತರಬೇತಿ ಸಂಸ್ಥೆಯ ಮಂಜುನಾಥ ಆರ್ ನಾಯಕ್ ಸ್ವ ಉದ್ಯೋಗ ತರಬೇತಿಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಸುಕುಮಾರ್ ಬಿ. ಗೇರುಕಟ್ಟೆ ಸ್ವಾಗತಿಸಿದರು ರವೀಂದ್ರ ಕುಮಾರ್ ನಿರೂಪಿಸಿ ವಂದಿಸಿದರು.Mulki-05121801

Comments

comments

Comments are closed.

Read previous post:
Kinnigoli-04121804
ದಿ. ಮುಲ್ಕಿ ರಾಮಕೃಷ್ಣ ಪೂಂಜಾ ಸಂಸ್ಮರಣೆ

ಕಿನ್ನಿಗೋಳಿ:  ತೋಕೂರು ತಪೋವನ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ದಿ| ಮುಲ್ಕಿ ರಾಮಕೃಷ್ಣ ಪೂಂಜರವರ 67ನೇ ಪುಣ್ಯತಿಥಿಯ ಸಂಸ್ಮರಣಾ ಕಾರ್ಯಕ್ರಮ ಜರಗಿತು. ಸಂಸ್ಥೆಯ ಪ್ರಿನಿಪಾಲ್ ವೈ. ಎನ್.ಸಾಲಿಯನ್...

Close