ಕಿನ್ನಿಗೋಳಿ ಕೋಳಿ ಮೊಟ್ಟೆ ರಾದ್ಧಾಂತ

ಕಿನ್ನಿಗೋಳಿ: ಪುನರೂರು ದೇವಳದ ಸಭಾಂಗಣದಲ್ಲಿ ಕಿನ್ನಿಗೋಳಿ ಪರಿಸರದ ಕೋಳಿ ಸಾಕಾಣಿಕೆ ಉದ್ಯಮದಾರರು ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಅಧಿಕಾರಿಗಳ ಮಧ್ಯೆ ಶುಕ್ರವಾರ ಉದ್ಯಮದ ಎಡವಟ್ಟುಗಳ ಬಗ್ಗೆ ಪರಸ್ಪರ ವಾಗ್ವಾದ ನಡೆಯಿತು.
ಇತ್ತೀಚಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ತಮ್ಮ ಸ್ವಸಹಾಯ ಸಂಘಗಳ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಕೋಳಿ ಸಾಕಾಣಿಕೆ ಉದ್ಯಮ ಯೋಜನೆ ಹಮ್ಮಿಕೊಂಡಿದ್ದು ಯೋಜನೆಯು ಯಶಸ್ವಿಯಾಗಿ ನಡೆಯುತ್ತಿತ್ತು.
ಕೇರಳದಲ್ಲಿ ಯಶಸ್ಸು ಕಂಡಂತಹ ಬಿವಿ 380 ತಳಿಯ ಮೊಟ್ಟೆ ಇಡುವ ಕೋಳಿಯನ್ನು ಪರಿಚಯಿಸಲಾಗಿದ್ದು ಅದರಂತೆ ಮೂಲ್ಕಿ ಮತ್ತು ಕಿನ್ನಿಗೋಳಿ ಪರಿಸರದಲ್ಲಿ ಸುಮಾರು 200 ಸದಸ್ಯರಿಗೆ ತಲಾ 50 ಕೋಳಿಗಳಂತೆ ಕೋಳಿ ಸಾಕಾಣಿಕೆ ಘಟಕ ಪ್ರಾರಂಭಿಸಲು ಯೋಜನೆ ವತಿಯಿಂದ 35 ಸಾವಿರ ಸಾಲ ಸೌಲಭ್ಯವನ್ನು ನೀಡಲಾಗಿತ್ತು. ಒಂದು ದೊಡ್ಡ ಕೋಳಿ ಗೂಡಿನ ಜೊತೆಗೆ 50 ಕೋಳಿಗಳನ್ನು ನೀಡಲಾಗಿತ್ತು
ಕೋಳಿ ಗೂಡು ಮತ್ತು ಕೋಳಿಯನ್ನು ಹಸ್ತಾಂತರಿಸುವ ಜವಾಬ್ದಾರಿಯನ್ನು ಕಿನ್ನಿಗೋಳಿಯ ನವ್ಯಶ್ರೀ ಎಗ್ ಪಾರ್ಮ್ ನ ನವೀನ್ ಪೂಜಾರಿಯವರಿಗೆ ವಹಿಸಲಾಗಿತ್ತು. ಕೋಳಿ ಘಟಕದವರಿಂದ ಕೋಳಿ ಮೊಟ್ಟೆಯನ್ನು ನವೀನ್ ಪೂಜಾರಿ ಅವರು ಖರೀದಿಸುತ್ತಿದ್ದರು. ಪ್ರಾರಂಭದಲ್ಲಿ ಘಟಕಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಯೋಜನೆಯ ಸದಸ್ಯರಿಂದ ಉತ್ತಮ ಪ್ರತಿಕ್ರಿಯೆಯೂ ದೊರಕ್ಕಿತ್ತು. ಇತ್ತೀಚಿಗೆ ಘಟಕ ನಡೆಸುತ್ತಿದ್ದವರಿಗೆ ಕೋಳಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಪೂರೈಕೆ ಸಿಗದೆ ಘಟಕದಲ್ಲಿ ಮೊಟ್ಟೆಯ ಇಳುವರಿ ಪ್ರಮಾಣ ಕಡಿಮೆಯಾಗತೊಡಗಿತ್ತು. ಒಂದು ಘಟಕದಲ್ಲಿ 50 ಕೋಳಿಗಳಿದ್ದು ಸರಾಸರಿ 50 ಮೊಟ್ಟೆಗಳು ಸಿಗಬೇಕಾದಲ್ಲಿ ಕೇವಲ್ಲ 25 ರಿಂದ 30 ಕ್ಕೆ ಮೊಟ್ಟೆಯ ಪ್ರಮಾಣ ಇಳಿದಿದೆ. ಇದರಿಂದ ಘಟಕದಾರರಿಗೆ ನಷ್ಟ ಉಂಟಾಗಿ, ಅಲ್ಲದೆ ಕೆಲ ಕೋಳಿಗಳು ಕೂಡ ಸತ್ತು ಹೋಗಿದೆ.
ನವ್ಯಶ್ರೀ ಪಾರ್ಮ್ ನ ನವೀನ್ ಪೂಜಾರಿ ಘಟಕದಾರರಿಗೆ ಸರಿಯಾದ ಸೇವೆ ಒದಗಿಸಿದ್ದರೂ, ಆಹಾರ ಪೂರೈಕೆ ಜವಬ್ದಾರಿ ವಹಿಸಿದ್ದ ಅಧಿಕಾರಿಗಳು ತ್ವರಿತ ಸಮರ್ಪಕ ರೀತಿಯಲ್ಲಿ ಅಹಾರ ಪೂರೈಕೆ ಮಾಡಿಲ್ಲದ ಕಾರಣ ಉದ್ಯಮದಾರರು ರೊಚ್ಚಿಗೆದ್ದು ಅಧಿಕಾರಿಗಳ ಸಭೆ ನಡೆಸಿದರು. ಒಂದು ಹಂತದಲ್ಲಿ ಯೋಜನೆ ಅಧಿಕಾರಿಗಳ ಮತ್ತು ಘಟಕದ ಉದ್ಯಮಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಮಗೆ ಈ ಘಟಕವೇ ಬೇಡ ನಮ್ಮ ಸಾಲ ಮನ್ನಾ ಮಾಡಿ ಎಂದು ಪಟ್ಟು ಹಿಡಿದರು. ಕೊನೆಗೆ ಒಂದು ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಅರ್ಗ್ ಬ್ರಾಂಡ್ ನ ನಕಲಿ ಬ್ರಾಂಡ್ ಮೊಟ್ಟೆ
ಘಟಕದ ಸದಸ್ಯರಿಂದ ಖರೀದಿಸಿದ ಮೊಟ್ಟೆಯನ್ನು ನವ್ಯಶ್ರೀ ಎಗ್ ಮಾರ್ಟ್ ವತಿಯಿಂದ ಆರ್ಗ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದರು. ಗ್ರಾಹಕರಿಂದ ಉತ್ತಮ ಬೆಂಬಲ ಪ್ರತಿಕ್ರಿಯೆ ದೊರಕಿತ್ತು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಉಮರಬ್ಬ ಅವರು ಮಂಗಳೂರಿನ ತೊಕ್ಕೊಟ್ಟು ನಿವಾಸಿ ಫಾರೂಕ್ ಎಂಬುವವರನ್ನು ನವೀನ್ ಅವರಿಗೆ ಪರಿಚಯಿಸಿ ಮೊಟ್ಟೆಗಳ ವಿತರಣೆಯನ್ನು ಫಾರೂಕ್ ಅವರ ಏಜನ್ಸಿಗೆ ನೀಡುವಂತೆ ನೋಡಿಕೊಂಡರು. ನಂತರದ ದಿನದಲ್ಲಿ ಫಾರೂಕ್ ಅವರು ಮಾರುಕಟ್ಟೆಗೆ ಮೊಟ್ಟೆಗಳನ್ನು ಸರಬರಾಜು ಮಾಡುತ್ತಿದ್ದರು ಈ ಮಧ್ಯೆ ಕಡಿಮೆ ದರದಲ್ಲಿ ಮೊಟ್ಟೆನ್ನು ನೀಡುವಂತೆ ನವೀನ್ ಅವರ ಬಳಿ ಕೇಳಿಕೊಂಡರು ಇದಕ್ಕೆ ನವೀನ್ ಪೂಜಾರಿ ಒಪ್ಪಲಿಲ್ಲ, ಆಗ ಫಾರೂಕ್ ನವೀನ್ ಪೂಜಾರಿ ಅವರ ಮೊಟ್ಟೆಯ ಬ್ರಾಂಡ್‌ನಂತಿರುವ ಒಮೇಗ ೩ ಕಂಪನಿಯಿಂದ ಕಡಿಮೆ ಬೆಲೆಗೆ ಮೊಟ್ಟೆ ಖರೀದಿಸಿ ಮೂಲ ಬ್ರಾಂಡ್‌ನ್ನು ಹೋಲುತ್ತಿರುವ ನಕಲಿ ಬ್ರಾಂಡ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಇದರಿಂದ ನಮಗೆ ನಷ್ಟ ಉಂಟಾಗಿದೆ, ಉಮರಬ್ಬ ಅವರು ಫಾರೂಕ್ ಅವರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ನವ್ಯಶ್ರೀ ಎಗ್ ಪಾರ್ಮ್ ನ ನವೀನ್ ಪೂಜಾರಿ ಆರೋಪಿಸಿದ್ದಾರೆ.

Kinnigoli-07121802

Comments

comments

Comments are closed.

Read previous post:
Kinnigoli-07121801
ಆಯುರ್ವೇದದಿಂದ ಆರೋಗ್ಯ

ಕಿನ್ನಿಗೋಳಿ: ಆರೋಗ್ಯಕ್ಕೆ ಪೂರಕವಾದ ಸಸ್ಯ ಸಂಪತ್ತು, ನೀರು, ಗಾಳಿ ಇತ್ಯಾದಿಗಳನ್ನು ನೀಡಿದ ಪರಿಸರವನ್ನು ನಾವು ಸಂರಕ್ಷಿಸಬೇಕಾಗಿದೆ ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದ ಆರೋಗ್ಯಕ್ಕೆ ಉತ್ತಮವಾಗಿದ್ದು ಔಷದೀಯ ಸಸ್ಯಸಂಪತ್ತನ್ನು ಬೆಳೆಸುವ...

Close