ಬಸ್ಸು ಚಾಲಕ- ನಿರ್ವಾಹಕ ಸಂಘದ ವಾರ್ಷಿಕೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ವಲಯ ಬಸ್ಸು ಚಾಲಕ- ನಿವಾರ್ಹಕರ ಸಂಘ ಕೇವಲ ವಾರ್ಷಿಕೋತ್ಸವ ಕ್ರೀಡೆಗೆ ಮಾತ್ರ ಸೀಮಿತವಾಗಿರದೆ ಸಾಧಕರಿಗೆ ಗೌರವ ಹಾಗೂ ಅರ್ಹರಿಗೆ ಆರ್ಥಿಕ ನೆರವಿನಂತಹ ಜನ ಪರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹೇಳಿದರು.
ಭಾನುವಾರ ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಕಿನ್ನಿಗೊಳಿ ಬಸ್ಸು ಚಾಲಕರ- ನಿರ್ವಾಹಕರ ಸಂಘ( ರಿ ) ಇದರ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಅಧ್ಯಕ್ಷತೆವಹಿಸಿ ಮಾತನಾಡಿ ಜನರೊಂದಿಗೆ ಉತ್ತಮ ಸಂಬಂಧ ಹೊಂದಿಕೊಂಡು ಉತ್ತಮ ಸೇವೆ ನೀಡುವುದರ ಜೊತೆಗೆ ಸಂಘಟನಾ ಶಕ್ತಿ ಬೆಳೆಸಬೇಕು ಎಂದು ಹೇಳಿದರು.

ಈ ಸಂದರ್ಭ ಉಡುಪಿ ನಗರ ವೃತ್ತ ವೃತ್ತ ನೀರೀಕ್ಷಕ ಮಂಜುನಾಥ, ಪೋಲೀಸ್ ಪೇದೆ ಮಾಧವ, ತಾರಾನಾಥ ಹಾಗೂ ಬಸ್ ಎಜಂಟ್ ಶ್ರೀಧರ ಶೆಟ್ಟಿ ಚಾಲಕ ನಿರ್ವಾಹಕರಾದ ಪ್ರಸಾದ್, ಅಬ್ದುಲ್ ರೆಹಮಾನ್, ವಾಸು ಎನ್ ಮೂಲ್ಯ, ರಾಜೇಶ್, ನಾಣಿಯಪ್ಪ ಕುಲಾಲ್ ಅವರನ್ನು ಸಮ್ಮಾನಿಸಲಾಯಿತು. ಹಾಗೂ 260 ಮಂದಿ ಚಾಲಕ ನಿರ್ವಾಹಕರಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಯಿತು. ಅನಾರೋಗ್ಯ ಪೀಡಿತ ಬಾಲಕ ಚೇತನ್ ಅವರಿಗೆ 22000ರೂ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು.
ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಮಂಗಳೂರು ಬರ್ಕೆ ಫ್ರೆಂಡ್ಸ್ ಸ್ಥಾಪಕ ಅಧ್ಯಕ್ಷ ಯಜ್ಞೇಶ್ವರ ಬರ್ಕೆ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕೆ. ಭುವನಾಭಿರಾಮ ಉಡುಪ, ಮೂಲ್ಕಿ ಠಾಣಾ ವೃತ್ತ ನೀರೀಕ್ಷಕ ಅನಂತಪದ್ಮನಾಭ, ಕಿನ್ನಿಗೊಳಿ ಬಸ್ಸು ಚಾಲಕರ- ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಭಾಸ್ಕರ ಪೂಜಾರಿ, ಸಂಘದ ಅಧ್ಯಕ್ಷ ಗುಲಾಂ ಹುಸೇನ್, ಪ್ರಧಾನ ಕಾರ್ಯದರ್ಶಿ ಅವಿನಾಶ್, ಉಪಾಧ್ಯಕ್ಷ ಶಿವರಾಮ, ಕಾರ್ಯದರ್ಶಿ ನಿಸಾರ್, ಲೆಕ್ಕ ಪರಿಶೋಧಕ ರಾಜೇಶ್ ದಾಮಸ್‌ಕಟ್ಟೆ ಉಪಸ್ಥಿತರಿದ್ದರು.
ಕ್ಯಾನೆಟ್ ಕ್ಯಾಸ್ತಲಿನೋ ವರದಿ ವಾಚಿಸಿದರು. ಪ್ರಕಾಶ್ ಆಚಾರ್, ಶಶಿಕಾಂತ್ ರಾವ್ ಸಮ್ಮಾನ ಪತ್ರ ವಾಚಿಸಿದರು. ಶರತ್ ಶೆಟ್ಟಿ ಕಿನ್ನಿಗೋಳಿ, ರಘುನಾಥ್ ಕಾಮತ್ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.

Kinnigoli-10121803

Comments

comments

Comments are closed.

Read previous post:
Kinnigoli-10121802
ಕಿನ್ನಿಗೋಳಿ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೮ ನೇ ವಾರ್ಡ್‌ನ ಕಿನ್ನಿಗೋಳಿ ಮಾರ್ಕೆಟ್ ಹಿಂದುಗಡೆಯ ರಸ್ತೆಗೆ ಪಂಚಾಯಿತಿ ಅನುದಾನದ ಕಾಂಕ್ರೀಟ್ ರಸ್ತೆಗೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ...

Close