ಈ ಹೊತ್ತಿಗೆ ಈ ಹೊತ್ತಗೆ ಕೃತಿ ವಿಮರ್ಶೆ ಸಂವಾದ

ಕಿನ್ನಿಗೋಳಿ: ಕಾಸರಗೋಡಿನ ಬದಲಿಗೆ ಮೈಸೂರು ಬೆಂಗಳೂರುಗಳಲ್ಲಿ ಅರ್ಧಕಥಾನಕದಂತಹ ಕೃತಿ ಪ್ರಕಟವಾಗುತ್ತಿದ್ದರೆ ಪ್ರಸಿದ್ಧಿಗೆ ಬರುತ್ತಿತ್ತು ಎಂದು ಸಾಹಿತಿ ಕವಿತಾ ಕೂಡ್ಲು ಹೇಳಿದರು.
ಕಿನ್ನಿಗೋಳಿಯ ಅಶೋಕ್ ಶೆಟ್ಟಿ ಸುಧಾರಾಣಿಯವರ ಮನೆಯಲ್ಲಿ ನಡೆದ ಈ ಹೊತ್ತಿಗೆ ಈ ಹೊತ್ತಗೆ ಕೃತಿ ವಿಮರ್ಶೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ಶ್ರೇಷ್ಟ ಪುಸ್ತಕಗಳ ಸುತ್ತ ಒಂದು ಪಯಣ ಈ ಹೊತ್ತಿಗೆ ಈ ಹೊತ್ತಗೆ ಎಂಬ ಕಲ್ಪನೆಯ ತಿಂಗಳಿಗೊಂದು ಮನೆಯಲ್ಲಿ ಒಂದು ಉತ್ತಮ ಕೃತಿಯ ಬಗ್ಗೆ ವಿಮರ್ಶೆ ಸಂವಾದ ನಡೆಸುವ ಸರಣಿ ಕಾರ್ಯಕ್ರಮ ಇದಾಗಿದೆ.
ಎಂ. ವ್ಯಾಸರ ಕುರಿತು ಅವರ ಮಗ ತೇಜಸ್ವಿಯವರು ಬರೆಸಿದ ಕೃತಿಯ ಬಗ್ಗೆ ಕವಿತಾ ಕೂಡ್ಲು ಮಾತನಾಡಿದರು.
ಸಾಹಿತ್ಯದಲ್ಲಿ ಪುರುಷ ಸ್ತ್ರೀ ಎಂಬ ವರ್ಗಿಕರಣ ಭೇದವಿರಬಾರದು. ಬರೆಯುವ, ಓದಿ ಮನನ ಹಾಗೂ ಉತ್ತಮವಾದುದನ್ನು ತಮ್ಮ ಜೀವನದಲ್ಲಿ ಅಳವಡಿಸುವ ಮನೋಭಾವ ಗುಣ ಜನರಲ್ಲಿ ಇರಬೇಕು. ಕಥೆಗಾರರೊಬ್ಬರು ಬರೆದ ಕಥೆಯಲ್ಲಿ ಕಥಾನಾಯಕ ವ್ಯಾಸ. ಓದುಗರು ವ್ಯಾಸರ ಬಗ್ಗೆಯೇ ಬರೆದದ್ದು ಅಂತ ಭಾವಿಸುವಂತೆ ವಿಮರ್ಶೆಯೂ ಬಂತು. ಇದನ್ನು ಎಷ್ಟೋ ಸಮಯಗಳ ಓದಿದ ಎಂ ವ್ಯಾಸರ ಮಗ ತೇಜಸ್ವಿ, ಎಂ. ವ್ಯಾಸರ ಬಗ್ಗೆ ಅನುಪಮಾ ಪ್ರಸಾದ್ ಅವರ ಮೂಲಕ ನಾಲ್ಕು ವರುಷಗಳ ಕಾಲ ಹೇಳುತ್ತ ಬರೆಸಿದ ಕೃತಿ ಅರ್ಧ ಕಥಾನಕ ಎಂದರು.
ಎಂ. ವ್ಯಾಸರು ಮಗ ತೇಜಸ್ವಿಯವರನ್ನು ಗೆಳೆಯನಂತೆ ಸದಾ ಜೊತೆಗೆ ನೋಡಿಕೊಂಡವರು ಅರ್ಧ ಕಥಾನಕದ ಮೂಲಕ ಎಂ,ವ್ಯಾಸರನ್ನೂ ಅವರ ಮಗ ತೇಜಸ್ವಿಯರವನ್ನೂ ಕಾಣಬಹುದಾಗಿದೆ ಎಂದು ಕವಿತಾ ಕೂಡ್ಲು ಹೇಳಿದರು.
ಟಿ.ಎ. ಎನ್. ಖಂಡಿಗೆ ಸ್ವಾಗತಿಸಿದರು. ಸುಧಾರಾಣಿ ವಂದಿಸಿದರು.

Kinnigoli-10121801

Comments

comments

Comments are closed.

Read previous post:
Kinnigoli-07121802
ಕಿನ್ನಿಗೋಳಿ ಕೋಳಿ ಮೊಟ್ಟೆ ರಾದ್ಧಾಂತ

ಕಿನ್ನಿಗೋಳಿ: ಪುನರೂರು ದೇವಳದ ಸಭಾಂಗಣದಲ್ಲಿ ಕಿನ್ನಿಗೋಳಿ ಪರಿಸರದ ಕೋಳಿ ಸಾಕಾಣಿಕೆ ಉದ್ಯಮದಾರರು ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಅಧಿಕಾರಿಗಳ ಮಧ್ಯೆ ಶುಕ್ರವಾರ ಉದ್ಯಮದ ಎಡವಟ್ಟುಗಳ ಬಗ್ಗೆ ಪರಸ್ಪರ ವಾಗ್ವಾದ...

Close