ಡಿ. 14 : ಪಾವಂಜೆ ಯಕ್ಷೋತ್ಸವ

ಕಿನ್ನಿಗೋಳಿ: ಉಜಿರೆಯ ಕುರಿಯ ವಿಠಲಶಾಸ್ತ್ರೀ ಯಕ್ಷಗಾನ ಪ್ರತಿಷ್ಠಾನದ ವಿಂಶತಿ ಯಕ್ಷೋತ್ಸವವು ಡಿ.14ರಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಪಾವಂಜೆ ಹರಿದಾಸ ಲಕ್ಷ್ಮೀ ನಾರ್ಣಪ್ಪಯ್ಯ ಸ್ಮಾರಕ ಕಲಾ ಪೋಷಕ ವೇದಿಕೆಯ ಸಹಕಾರದಲ್ಲಿ ಶಾರಧ್ವತ ಯಜ್ಞಾಂಗಣದಲ್ಲಿ ಜರಗಲಿದೆ.
ಡಿ.14ರಿಂದ 23ರವರೆಗೆ ತಾಳಮದ್ದಳೆ ಮತ್ತು ಯಕ್ಷಗಾನ ಪ್ರದರ್ಶನ ಸಪ್ತಾಹವನ್ನು ಹಮ್ಮಿಕೊಂಡಿದ್ದು, ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಹಿರಿಯ ಕಲಾವಿದರೊಂದಿಗೆ ಹವ್ಯಾಸಿ ಕಲಾವಿದರು ಹಾಗೂ ಬಾಲಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
2018ರ ಕುರಿಯ ವಿಠಲ ಶಾಸ್ತ್ರೀ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಮದ್ದಳೆಗಾರ ಪೆರುವಾಯಿ ನಾರಾಯಣ ಭಟ್ಟರಿಗೆ ನೀಡಿ ಗೌರವಿಸಲಿದೆ. ಕೊಲ ಮೋಹನರಾವ್, ಪಿ.ಮಧುಕರ ಭಾಗವತ, ಶಂಕರ ನಾರಾಯಣ ಮೈರ್ಪಾಡಿ ಅವರನ್ನು ಪುರಸ್ಕರಿಸಲಾಗುವುದು.
ಸಮಾರಂಭದಲ್ಲಿ ಡಾ.ಯಾಜಿ ಎಚ್. ನಿರಂಜನ್ ಭಟ್, ಹರಿಕೃಷ್ಣ ಪುನರೂರು, ಡಾ.ಎಂ. ಪ್ರಭಾಕರ ಜೋಶಿ, ಕುರಿಯ ಗೋಪಾಲಕೃಷ್ಣ ಭಟ್, ಯಕ್ಷಗಾನ ಅಕಾಡೆಮಿ ಸದಸ್ಯ ಜಬ್ಬಾರ್ ಸಮೋ ಸಂಪಾಜೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರಾದ ಎಂ.ಶಶೀಂದ್ರಕುಮಾರ್ ಹಾಗೂ ಉಜಿರೆ ಎನ್. ಅಶೋಕ್ ಭಟ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-13121804
ಹಳೆಯಂಗಡಿ : ಮಾಹಿತಿ 2018

ಕಿನ್ನಿಗೋಳಿ: ನಾಗರಿಕತೆ ಬೆಳೆದಂತೆ ಧರ್ಮದ ವಿಭಜನೆ ಆಗಿದೆ. ಪ್ರೀತಿ, ನಂಬಿಕೆ, ಸತ್ಯವನ್ನು ಪ್ರತಿಪಾದಿಸುವ ಧರ್ಮದಲ್ಲಿ ಕೇಸರಿ, ಹಸಿರು, ಬಿಳಿ ಬಣ್ಣದ ವಿಭಜನೆಯ ಮೂಲಕ ಅಧರ್ಮಕ್ಕೆ ಆಸ್ಪದ ನೀಡುವ ಆಚರಣೆ...

Close