ಭಜನೆಯಿಂದ ಧಾರ್ಮಿಕ ಶಕ್ತಿ

ಕಿನ್ನಿಗೋಳಿ: ಭಜನೆಯಿಂದ ಧಾರ್ಮಿಕ ಶಕ್ತಿಯನ್ನು ಪ್ರಚುರ ಪಡಿಸಲು ಸಾಧ್ಯವಿದೆ. ದೇವರ ಆರಾಧನೆಯನ್ನು ಮಾಡುವ ಮೂಲಕ ಸಾಮೂಹಿಕವಾಗಿ ಭಜಕ ಶಕ್ತಿ ವೃದ್ಧಿಸುತ್ತದೆ ಎಂದು ಉದ್ಯಮಿ ಜಗನ್ನಾಥ ವಿ. ಸನಿಲ್ ಕರಿತೋಟ ಹೇಳಿದರು.
ಹಳೆಯಂಗಡಿ ಬ್ರಹ್ಮಶ್ರಿ ನಾರಾಯಣಗುರು ಮಂದಿರದಲ್ಲಿ ನಡೆದ ವಾರ್ಷಿಕ ಭಜನಾ ಮಂಗಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ವಿಧಿ ವಿಧಾನಗಳನ್ನು ಮಹೇಶ್ ಶಾಂತಿ ಹಾಗೂ ಪ್ರವೀಣ್ ಶಾಂತಿ ನೆರವೇರಿಸಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಹಿರಿಯ ಕೃಷಿಕ ತಿಮ್ಮಪ್ಪ ಅಮೀನ್ ನಾನಿಲ್, ಸಂಘದ ಕಟ್ಟೋಣ ಸಮಿತಿ ಗೌರವಾಧ್ಯಕ್ಷ ಗುರುಪ್ರಸಾದ್ ಅರ್. ಸನಿಲ್, ಅಧ್ಯಕ್ಷ ಮೋಹನ್ ಎಸ್. ಸುವರ್ಣ, ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್, ಕೋಶಾಧಿಕಾರಿ ಯಶೋಧರ ಎಸ್. ಸಾಲ್ಯಾನ್, ಸಂಘದ ಗೌರವಾಧ್ಯಕ್ಷ ಗಣೇಶ್ ಜಿ. ಬಣಗೇರ, ಪ್ರಧಾನ ಕಾರ್ಯದರ್ಶಿ ಹಿಮಕರ್ ಟಿ. ಸುವರ್ಣ ಕಲ್ಲಾಡಿ, ಕೋಶಾಧಿಕಾರಿ ರಮೇಶ್ ಬಂಗೇರ, ಉಪಾಧ್ಯಕ್ಷರಾದ ಜಯ ಜಿ. ಸುವರ್ಣ, ಜೈಕೃಷ್ಣ ಕೋಟ್ಯಾನ್, ಸಹ ಕಾರ್ಯದರ್ಶಿಗಳಾದ ಬ್ರೀಜೇಶ್ ಕುಮಾರ್, ದೀಪಕ್ ನಾನಿಲ್, ಮತ್ತಿತರರು ಉಪಸ್ಥಿತರಿದ್ದರು.
ಭಜನಾ ಮಂಡಳಿಗಳಾದ ಪಂಜ ಕೊಕುಡೆ ಶ್ರಿ ಜಾರಂತಾಯ ಯುವಕ ಮಂಡಲ, ಹಳೆಯಂಗಡಿ ಶ್ರಿ ವಿಶ್ವಕರ್ಮ ಭಜನಾ ಮಂಡಳಿ, ಸಸಿಹಿತ್ಲು-ಲಚ್ಚಿಲ್ ಶ್ರಿ ರಾಮ ಭಜನಾ ಮಂದಿರ, ಅಗ್ಗಿದಕಳಿಯ ಬ್ರಹ್ಮಶ್ರಿ ನಾರಾಯಣಗುರು ಸೇವಾ ಸಂಘ, ಇಡ್ಯಾ ಸುರತ್ಕಲ್ ಬಿಲ್ಲವ ಸಮಾಜ ಸೇವಾ ಸಂಘ, ಮುಕ್ಕ ಶ್ರಿ ಸತ್ಯಧರ್ಮ ಭಜನಾ ಮಂಡಳಿ, ಹಳೆಯಂಗಡಿ ದಾಸಪ್ರಿಯ ಭಜನಾ ಮಂಡಳಿ, ಸುರತ್ಕಲ್ ಅಮೃತವರ್ಷಿಣಿ ತಂಡ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಹಳೆಯಂಗಡಿ ಘಟಕದಿಂದ ಭಜನಾ ಸೇವೆ ನಡೆಯಿತು.

Kinnigoli-13121803

Comments

comments

Comments are closed.

Read previous post:
Kinnigoli-13121802
ಷಷ್ಠಿ ಮಹೋತ್ಸವದಲ್ಲಿ ಸ್ವಚ್ಚತೆಯ ಪಾಠ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಳದಲ್ಲಿ ನಡೆಯಲಿರುವ ವರ್ಷಾವಧಿ ಷಷ್ಠಿ ಮಹೋತ್ಸವದ ಜಾತ್ರೆಯಲ್ಲಿ ಈ ಬಾರಿ ಸ್ವಚ್ಚತೆಗೆ ಆದ್ಯತೆ ನೀಡಿದ್ದು, ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳು ಪರಸ್ಪರ...

Close