ಹಳೆಯಂಗಡಿ : ಮಾಹಿತಿ 2018

ಕಿನ್ನಿಗೋಳಿ: ನಾಗರಿಕತೆ ಬೆಳೆದಂತೆ ಧರ್ಮದ ವಿಭಜನೆ ಆಗಿದೆ. ಪ್ರೀತಿ, ನಂಬಿಕೆ, ಸತ್ಯವನ್ನು ಪ್ರತಿಪಾದಿಸುವ ಧರ್ಮದಲ್ಲಿ ಕೇಸರಿ, ಹಸಿರು, ಬಿಳಿ ಬಣ್ಣದ ವಿಭಜನೆಯ ಮೂಲಕ ಅಧರ್ಮಕ್ಕೆ ಆಸ್ಪದ ನೀಡುವ ಆಚರಣೆ ಸರಿಯಲ್ಲ ಸಮಾಜದ ಹಿತವನ್ನು ಕಾಣುವ ನೈಜ ಧರ್ಮಾಚರಣೆ ನಡೆಯಬೇಕು, ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ ಹೇಳಿದರು.
ಹಳೆಯಂಗಡಿ ಕೊಳುವೈಲು ಇಂಡಿಯನ್ ಯೋಗ ಮಂದಿರದಲ್ಲಿ ಬುಧವಾರ ಭಾರತ ಕ್ರೈಸ್ತ ಚರ್ಚುಗಳ ಒಕ್ಕೂಟದ ಸಹಕಾರದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಅಂತರ್ ಕಾಲೇಜು ಚರ್ಚುಗಳ ಕ್ರಿಸ್ಮಸ್ ಹಾಡುಗಳ (ಗುಂಪು) ಸ್ಪರ್ಧೆ, ಕ್ರಿಸ್ಮಸ್ ಸೌಹಾರ್ದ ಕೂಟ ಹಾಗೂ ಕೋಮು ಸೌಹಾರ್ದ ಕಾನೂನು ಮಾಹಿತಿ 2018 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ಕ್ರೈಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷ ಡೇನಿಯಲ್ ದೇವರಾಜ್ ಹಳೆಯಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರಿಸ್ಮಸ್ ಹಬ್ಬ ಕೊಡುಗೆಯನ್ನು ನೀಡುವ ಸಂಭ್ರಮದ ಹಬ್ಬ ಸಮಾಜಕ್ಕೆ ಸೇವೆಯ ಕೊಡುಗೆ ನೀಡುವ ಪ್ರಯತ್ನ ನಿರಂತರ ನಡೆಯಬೇಕು ಎಂದರು.
ಧಾರ್ಮಿಕ ವಿದ್ವಾಂಸ ವಾದಿರಾಜ ಉಪಾಧ್ಯಾಯ ಕೊಲೆಕಾಡಿ ಮಾತನಾಡಿ ಏಸುಕ್ರಿಸ್ತರು ಜಗತ್ತಿಗೆ ಭಾವೈಕ್ಯತೆಯ ಸಂದೇಶವನ್ನು ನೀಡುವ ಮೂಲಕ ಜಗತ್ತಿಗೆ ಪರಿಚಿತರಾಗಿದ್ದಾರೆ. ಒಳ್ಳೆಯದನ್ನು ಬಯಸುವವರು ಮಾತ್ರ ಧರ್ಮರಕ್ಷಕರಾಗಿದ್ದಾರೆ. ಧರ್ಮ ಎನ್ನುವುದು ಭಗವಂತನನ್ನು ಕಾಣುವುದಕ್ಕಾಗಿ ಮಾತ್ರ ಮೀಸಲಾಗಿದೆಯೇ ಹೊರತು ಧರ್ಮವೇ ದೇವರಲ್ಲ ಎಂದರು.
ಸಾಗ್ ಮಸೀದಿಯ ಧರ್ಮಗುರು ಇ.ಎಮ್.ಅಬ್ದುಲ್ಲಾ ಮದನಿ ಮಾತನಾಡಿ ಸರ್ವ ಧರ್ಮದವರನ್ನು ಒಂದು ಗೂಡಿಸುವ ಪ್ರಯತ್ನ ನಡೆಸಬೇಕು ಎಂದರು.
ಮಂಗಳೂರು ನ್ಯಾಯಾಂಗ ಇಲಾಖೆಯ ಶಿರಸ್ತೇದಾರರಾದ ಪ್ರಕಾಶ್ ನಾಯಕ್ ಹಾಗೂ ಕೃಷ್ಣಾಪುರ ಸಿಎಸ್‌ಐ ಚರ್ಚ್‌ನ ಸಭಾಪಾಲಕ ರೆ. ಐಸನ್ ಪಾಲನ್ನ ಕಾನೂನು ಮಾಹಿತಿಯನ್ನು ನೀಡಿದರು.
ಮೂಲ್ಕಿ ಸಿಎಸ್‌ಐ ಚರ್ಚ್‌ನ ಧರ್ಮಗುರು ರೆ. ಎಡ್ವರ್ಡ್ ಎಸ್. ಕರ್ಕಡ, ಮೈಸೂರು ಸಿಎಸ್‌ಐ ಚರ್ಚ್‌ನ ಸಭಾಪಾಲಕ ರೆ. ಪುಟ್ಟರಾಜ್, ಹಳೆಯಂಗಡಿ ಸಿಎಸ್‌ಐನ ರೆ. ವಿನಯಲಾಲ್ ಬಂಗೇರ, ಪಕ್ಷಿಕೆರೆ ಸಂತ ಜೂದರ ಚರ್ಚ್ ಧರ್ಮಗುರು ಫಾ. ಮೆಲ್ವಿನ್ ನೋರೋನ್ಹಾ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಕೆ. ಸಾಹುಲ್ ಹಮೀದ್ ಕದಿಕೆ, ನ್ಯಾಯವಾದಿಗಳಾದ ಹರಿಶ್ಚಂದ್ರ, ಕೆ.ಕೆ.ಈಶ್ವರ ಪೂಜಾರಿ, ಹಳೆಯಂಗಡಿ ಶ್ರಿ ವೈದ್ಯನಾಥೇಶ್ವರ ದೈವಸ್ಥಾನದ ಆಡಳಿತ ಮೊಕ್ತೇಸರ ಭೋಜ ಅಮೀನ್, ಬಲ್ಮಠದ ಸಿಎಸ್‌ಐನ ರೆ. ದೀಪಕ್ ಆಡ್ರಿನ್, ಪುಷ್ಪಲತಾ, ಮಾರ್ಗರೇಟ್ ಮಸ್ಕರೇನಸ್, ಲೀಲಾವತಿ, ಜ್ಯೋತಿ, ಮೇರಿಸ್ವಪ್ನ ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ಪ್ರಸನ್ನಿ ಸ್ವಾಗತಿಸಿದರು. ಹರೀಶ್ ವಂದಿಸಿದರು. ಡೇನಿಯಲ್ ಜೋಶನಾ ಕಾರ್ಯಕ್ರಮ ನಿರೂಪಿಸಿದರು.

Kinnigoli-13121804

Comments

comments

Comments are closed.

Read previous post:
Kinnigoli-13121803
ಕಿಲೆಂಜೂರು : ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ: ಕಿಲೆಂಜೂರು ಶ್ರೀ ಸರಳ ಧೂಮಾವತಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಮಂಗಳವಾರ ನಡೆಯಿತು ಈ ಸಂದರ್ಭ ಶ್ರೀಮತಿ ಮತ್ತು ಶ್ರೀ ರಾಜೇಂದ್ರ ಕೆ ಶೆಟ್ಟಿ ಕುಡ್ತಿಮಾರುಗುತ್ತು ಅವರ...

Close