ಕಿನ್ನಿಗೋಳಿ ಮೇರಿವೇಲ್ ಶಾಲೆ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಕ್ಕಳಿಗೆ ಸುಭವಾಗಿ ಅರ್ಥವಾಗುವಂತಹ ಮಾನವೀಯ ಮೌಲ್ಯಯುಳ್ಳ ನೈತಿಕ ಶಿಕ್ಷಣದ ಅಗತ್ಯವಿದೆ ಎಂದು ಬೆಥನಿ ಶಿಕ್ಷಣ ಸಂಸ್ಥೆಯ ಪ್ರಾಂತೀಯ ಸಲಹೆಗಾರರಾದ ಭಗಿನಿ ಶುಭಾ ಬಿ. ಎಸ್ ಹೇಳಿದರು.
ಕಿನ್ನಿಗೋಳಿ ಮೇರಿವೇಲ್ ಆಂಗ್ಲಮಾಧ್ಯಮ ಪ್ರೌಢಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ವಿಜೇತ ಹಾಗೂ ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಶೇಷ ಸಾಧನೆಗೈದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಗರಿಷ್ಠ ಅಂಕ ಗಳಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಂಗಳೂರು ಎಂ. ಸಿ. ಸಿ ಬ್ಯಾಂಕ್‌ನ ಚೇರ್‌ಮೇನ್ ಅನಿಲ್ ಲೋಬೊ, ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಲಿಡಿಯಾ ಶಾಂತಿ ಬಿ.ಎಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಡಾ. ಪ್ರೀಡಾ ರೊಡ್ರಿಗಸ್, ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಬಿ.ಎಸ್ ಉಪಸ್ಥಿತರಿದ್ದರು.
ಶಾಲಾ ಸಹಶಿಕ್ಷಕಿ ಅನಿತಾ ಪಾಯಸ್ ಸ್ವಾಗತಿಸಿದರು. ಸ್ಟಿನಿಟ ವಂದಿಸಿದರು. ಫ಼್ಲೋಯ್ಡ್ ಹಾಗೂ ಲಿಝಾ ಕಾರ್ಯಕ್ರಮ ನಿರೂಪಿಸಿದರು.

Comments

comments

Comments are closed.

Read previous post:
Kinnigoli-13121802
ಮಹಾರಾಷ್ಟ್ರದ ಮಾನವ ಹಕ್ಕು ಭೇಟಿ

ಕಿನ್ನಿಗೋಳಿ: ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದು ನೊಂದ ಮನಸ್ಸುಗಳಿಗೆ ಸಾಂತ್ವನ ನೀಡುವ ಮೂಲಕ ಸೇವಾ ಸಂಸ್ಥೆಗಳು ಜನರ ವಿಶ್ವಾಸ ಗಳಿಸಬೇಕು ಎಂದು ಮಹಾರಾಷ್ಟ್ರದ ಮಾನವ ಹಕ್ಕು ಮತ್ತು ಭ್ರಷ್ಟಾಚಾರ...

Close