ಷಷ್ಠಿ ಮಹೋತ್ಸವದಲ್ಲಿ ಸ್ವಚ್ಚತೆಯ ಪಾಠ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಳದಲ್ಲಿ ನಡೆಯಲಿರುವ ವರ್ಷಾವಧಿ ಷಷ್ಠಿ ಮಹೋತ್ಸವದ ಜಾತ್ರೆಯಲ್ಲಿ ಈ ಬಾರಿ ಸ್ವಚ್ಚತೆಗೆ ಆದ್ಯತೆ ನೀಡಿದ್ದು, ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳು ಪರಸ್ಪರ ಕೈ ಜೋಡಿಸಿದ್ದು ಇದಕ್ಕೆ ಭಕ್ತರು ಸಹಕಾರ ನೀಡಬೇಕು ಎಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್ ಹೇಳಿದರು.
ಹಳೆಯಂಗಡಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ಕ್ಲಬ್‌ನ ಸಭಾಂಗಣದಲ್ಲಿ ಸೋಮವಾರ ಸ್ವಚ್ಚತೆಗಾಗಿ ವ್ಯವಸ್ಥೆಯನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆಯ ಜಾಗೃತಿಗಾಗಿ ಬಳಸಲ್ಪಡುವ ಕಸದ ಡಬ್ಬಿಗಳನ್ನು ಕ್ಲಬ್‌ನ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್ ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅವರಿಗೆ ಹಸ್ತಾಂತರಿಸಿದರು. ಸ್ವಚ್ಚತೆಗಾಗಿ ವಿವಿಧ ತಂಡಗಳನ್ನು ರಚಿಸಲಾಯಿತು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್‌ಕುಮಾರ್, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಉಪಾಧ್ಯಕ್ಷ ಮುಖೇಶ್ ಸುವರ್ಣ, ಕಾರ್ಯದರ್ಶಿ ಸಂತೋಷ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಜಗದೀಶ್ ಕುಲಾಲ, ಗೌತಮ್ ಬೆಲ್ಚಡ, ಕೋಶಾಧಿಕಾರಿ ದೀಪಕ್ ಸುವರ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಸುನಿಲ್ ದೇವಾಡಿಗ, ಕ್ರೀಡಾ ಕಾರ್ಯದರ್ಶಿ ಗಣೇಶ್ ದೇವಾಡಿಗ, ಕ್ರಿಕೇಟ್ ತಂಡದ ನಾಯಕ ಯೂನೂಸ್,ಸದಸ್ಯರಾದ ಜಯಂತ್ ಕುಂದರ್, ಪದ್ಮನಾಭ ಶೆಟ್ಟಿ, ದೀಪಕ್ ದೇವಾಡಿಗ, ಕಿರಣ್ ಬೆಲ್ಚಡ, ಮಹೇಶ್ ಬೆಲ್ಚಡ, ವಿಶಾಲ್ ಕಿರೋಡಿಯನ್, ನೀರಜ್ ಕಿರೋಡಿಯನ್, ಶಂಕರ್ ಪೂಜಾರಿ, ರಾಜೇಶ್ ಕುಲಾಲ್,ವಿಶ್ವನಾಥ್ ಕೋಟ್ಯಾನ್, ರಾಜ ಸಾಲಿಯನ್, ವೀಕ್ಷಿತ್ ದೇವಾಡಿಗ, ಸುರೇಶ್ ಶೆಟ್ಟಿ ,ಯಶ್ ಉಪಸ್ಥಿತರಿದ್ದರು.

Kinnigoli-13121802

Comments

comments

Comments are closed.

Read previous post:
Kinnigoli-13121801
ಬಾಯಾರು ರಘು ಶೆಟ್ಟರಿಗೆ ಮಂಡೆಚ್ಚ ಪ್ರಶಸ್ತಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಸೆಂಬರ್ 15ರ ಶನಿವಾರ ಬೆಳಿಗ್ಗೆ ಯಕ್ಷಝೇಂಕಾರ ಯಕ್ಷಗಾನ ಕೇಂದ್ರ ಹಾಗೂ ದಿ. ದಾಮೋದರ ಮಂಡೆಚ್ಚ ಸಂಸ್ಮರಣಾ ಸಮಿತಿಯ...

Close