ಡಿ.15 ಲಯನ್ಸ್ ಪ್ರಾಂತ್ಯ ಸಮ್ಮೇಳನ

ಕಿನ್ನಿಗೋಳಿ: ಹಳೆಯಂಗಡಿ ಲಯನ್ಸ್ ಕ್ಲಬ್‌ನ ಆತಿಥ್ಯದಲ್ಲಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಪ್ರಾಂತ್ಯ 5 ರ ಪ್ರಾಂತ್ಯ ಸಮ್ಮೇಳನ *ಸಂಕ್ರಾಂತಿ* ಡಿಸೆಂಬರ್ 15 ರ ಶನಿವಾರ ಸಂಜೆ ಹಳೆಯಂಗಡಿಯ ಕೆನರಾ ಬ್ಯಾಂಕ್ ಎದುರುಗಡೆಯ ಜಿ ಎಂ ಎಲ್ ಫ್ರಾಕಾನ್ ಗ್ರೌಂಡ್ ನಲ್ಲಿ ಜರಗಲಿದೆ. ಲಯನ್ಸ್ ಪ್ರಾಂತ್ಯಾಧ್ಯಕ್ಷ ಚಂದ್ರಶೇಖರ ನಾನಿಲ್ ಅಧ್ಯಕ್ಷತೆ ವಹಿಸಲಿದ್ದು ಸಮ್ಮೇಳನವನ್ನು ಪ್ರಾಂತ್ಯ 5 ರ ಪ್ರಥಮ ಮಹಿಳೆ ಜಯಶ್ರೀ ಚಂದ್ರಶೇಖರ ನಾನಿಲ್ ಉದ್ಘಾಟಿಸಲಿದ್ದಾರೆ. ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಉಪನ್ಯಾಸಕ ಡಾ. ನರೇಂದ್ರ ರ‍್ಯೆ ದೆರ್ಲ ದಿಕ್ಸೂಚಿ ಭಾಷಣಗ್ಯೆಯಲಿದ್ದಾರೆ.
ಹಿರಿಯ ಸಾಹಿತಿ ಆರ್ಯಭಟ ಪ್ರಶಸ್ತಿ ಪುರಸ್ಕ್ರತೆ ಶಕುಂತಳಾ ಭಟ್ ಮತ್ತು ಸಮಾಜ ಸೇವಕ ಪ್ರಕಾಶ್ ಎನ್ ಶೆಟ್ಟಿ ಹಳೆಯಂಗಡಿ ಅವರನ್ನು ಸನ್ಮಾನಿಸಲಾಗುವುದು.
ಕರ್ಣಾಟಕ ಬ್ಯಾಂಕಿನ ಉಪ ಮಹಾ ಪ್ರಬಂಧಕ ವಿನಯ ಭಟ್ ಪಿ ಜೆ,ಜಿ ಎಂ ಎಲ್ ಇನ್ ಫ್ರಾಕಾನ್ ನ ಆಡಳಿತ ನಿರ್ದೇಶಕ ಮೋಹನ್ ಆರ್ ಕೋಟ್ಯಾನ್, ಕ್ಯೆಗಾರಿಕೋದ್ಯಮಿ ಗುರುಪ್ರಸಾದ್ ಆರ್ ಅಮೀನ್ ನಾನಿಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-14121802
ತೋಕೂರು ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಗುರುವಾರ ಹಗಲು ರಥೋತ್ಸವ ನಡೆಯಿತು.

Close