ಕಟೀಲು ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ

ಕಿನ್ನಿಗೋಳಿ: ಈಗಿನ ಕಂಪ್ಯೂಟರ್ ಯುಗದಲ್ಲಿ ಶಿಕ್ಷಣ ಕ್ಷೇತ್ರವು ಮಹತ್ತರ ಬದಲಾವಣೆಗಳನ್ನು ಕಂಡಿದ್ದು ಸ್ಮಾರ್ಟ್ ಫೋನಿನ ಮುಖಾಂತರ ಎಲ್ಲಾ ವಿಷಯಗಳು ಬೆರಳ ತುದಿಯಲ್ಲೇ ಸಿಗುತ್ತದೆ ಎಂದು ವಿಜ್ಜಾನಿ ಖ್ಯಾತ ಚಿಂತಕ ನಾಡೋಜ ಕೆ.ಪಿ. ರಾವ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರು ಗುತ್ತು ಸನತ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಚನ ನೀಡಿದರು.
ಈ ಸಂದರ್ಭ ಕಾರ್ನಾಡು ಸಿವಿಲ್ ಇಂಜಿನೀಯರ್ ಜೀವನ್ ಶೆಟ್ಟಿ, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಜಯ ಶೆಟ್ಟಿ ಎಕ್ಕಾರು, ಎಚ್.ಡಿ.ಎಫ್.ಸಿ. ಬ್ಯಾಂಕ್ ಲೀಗಲ್ ಮ್ಯಾನೇಜರ್ ನವ್ಯ ಶೆಟ್ಟಿ, ವಿಧ್ಯಾರ್ಥಿ ನಾಯಕ ಅವಿನಾಶ್ ಆರ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ನಿರೇಂದ್ರ, ಶಂಕರನಾರಯಣ, ವಾದಿರಾಜ ಭಟ್, ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಕಾಲೇಜು ಪ್ರಿನ್ಸ್‌ಪಾಲ್ ವನಿತಾ ಜೋಷಿ ಸ್ವಾಗತಿಸಿದರು. ಉಪನ್ಯಾಸಕ ಗೋಪಿನಾಥ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Kinnigoli-15121801

Comments

comments

Comments are closed.

Read previous post:
Kinnigoli-14121803
ಕಿನ್ನಿಗೋಳಿ ಯಕ್ಷಗಾನ ಸನ್ಮಾನ

ಕಿನ್ನಿಗೋಳಿ: ಬುಧವಾರ ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಆಶ್ರಯದಲ್ಲಿ 51 ನೇ ವರ್ಷದ ಬಯಲಾಟದ ಸಂದರ್ಭ ಕಟೀಲು ದೇವಳದ ಅರ್ಚಕ ಕೆ....

Close