ತೋಕೂರು : ಸಾಧಕರ ಸನ್ಮಾನ

ಕಿನ್ನಿಗೋಳಿ: ಸಾಧಕರನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಇನ್ನಷ್ಟು ಸಾಸಲು ಪ್ರೇರಣೆಯಾಗುತ್ತದೆ. ಎಂದು ಮುಂಬಯಿ ಕರ್ನಾಟಕ ಪೆಸ್ತಮ್ ಸಂಘದ ಅಧ್ಯಕ್ಷ ರಾಮಣ್ಣ ದೇವಾಡಿಗ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವರ ಷಷ್ಠಿ ಉತ್ಸವದ ಪ್ರಯುಕ್ತ, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ 22 ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ್ ಕುಮಾರ್ ಕಟೀಲು, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಮಂಗಳೂರಿನ ಚಾಪರ‍್ಕ ತಂಡದ ಕಲಾವಿದ ಸದಾಶಿವ ಅಮೀನ್, ಜನಪದ ಕಲಾವಿದ ಗೋಪಾಲ್ ನಲ್ಕೆ ಶಿಬರೂರು ಹಾಗೂ ಪರಿಸರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕ್ಲಬ್ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನದಾಸ, ಸದಸ್ಯ ಸಂತೋಷ್ ಕುಮಾರ್, ಸುರತ್ಕಲ್ ಎನ್.ಐ.ಟಿ.ಕೆ. ನಿವೃತ್ತ ಅಕಾರಿ ಗೋಪಾಲ್ ಭಂಡಾರಿ ತೋಕೂರು, ಕ್ಲಬ್‌ನ ಗೌರವ ಅಧ್ಯಕ್ಷ ಯೋಗೀಶ್ ಕೋಟ್ಯಾನ್ , ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ ,ಕೋಶಾಕಾರಿ ದೀಪಕ್ ಸುವರ್ಣ, ನಿಕಟಪೂರ್ವ ಅಧ್ಯಕ್ಷ ರತನ್ ಶೆಟ್ಟಿ, ಹಿರಿಯ ಸದಸ್ಯ ಗಣೇಶ್ ಪೂಜಾರಿ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತ್ ಬೇಕಲ್, ಗಣೇಶ್ ಕುಮಾರ್, ಸಂತೋಷ್ ದೇವಾಡಿಗ, ದೀಪಕ್ ಸುವರ್ಣ ಸನ್ಮಾನಿತರ ಪತ್ರ ವಾಚಿಸಿದರು, ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-15121801

Comments

comments

Comments are closed.

Read previous post:
Kinnigoli-14121803
ಕಿನ್ನಿಗೋಳಿ ಯಕ್ಷಗಾನ ಸನ್ಮಾನ

ಕಿನ್ನಿಗೋಳಿ: ಬುಧವಾರ ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಆಶ್ರಯದಲ್ಲಿ 51 ನೇ ವರ್ಷದ ಬಯಲಾಟದ ಸಂದರ್ಭ ಕಟೀಲು ದೇವಳದ ಅರ್ಚಕ ಕೆ....

Close