ದಿಶಾ ಐ.ಇ.ಸಿ ಔಟ್ ರೀಚ್ ತರಬೇತಿ

ಕಿನ್ನಿಗೋಳಿ: ಸ್ವ ಉದ್ಯೋಗ ನಿರುದ್ಯೋಗ ಸಮಸ್ಯೆಯನ್ನು ದೂರ ಮಾಡಿ ಸ್ವಾವಲಂಬನೆಗೆ ಪ್ರೇರಣೆ ನೀಡುತ್ತದೆ. ಎಂದು ಕಿನ್ನಿಗೋಳಿ ಪಂಚಾಯಿತಿ ಅಭಿವೃದ್ದಿ ಅಕಾರಿ ಅರುಣ್ ಪ್ರದೀಪ್ ಡಿಸೋಜ ಹೇಳಿದರು
ಕೌಶ್ಯಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಯು.ಎನ್.ಡಿ.ಪಿ ಪ್ರಯೋಜಕತ್ವದಲ್ಲಿ ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರದ ವತಿಯಿಂದ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ದಿಶಾ ಐ.ಇ.ಸಿ ಔಟ್ ರೀಚ್ ತರಬೇತಿ ಶಿಬಿರದ ಉದ್ಘಟನಾ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರದ ಮ್ಯಾನೇಜರ್ ವಿನಾಯಕ ಪ್ರಭು ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರ್ತಿ, ಪಂಚಾಯಿತಿ ಸದಸ್ಯರಾದ ಸಂತೋಷ್, ಪೂರ್ಣಿಮ, ಜ್ಜಾನ ಜ್ಯೋತಿ ಸಿಂಡಿಕೇಟ್ ಬ್ಯಾಂಕ್ ನ ಸತೀಶ್ ಅತ್ತಾವರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-18121805

Comments

comments

Comments are closed.

Read previous post:
Kinnigoli-18121804
ಡಾ. ಎಂ.ರಾಮಣ್ಣ ಶೆಟ್ಟಿ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರು ಹಾಗೂ ಶಿಕ್ಷಕರ ಸಕಾರಾತ್ಮಕ ಸ್ಪಂದನೆ ಅತ್ಯಗತ್ಯ ಎಂದು ದೇರಳಕಟ್ಟೆ ಫಾರ್ಮಾಸ್ಯೂಟಿಕಲ್ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಡಾ.ಸಿ.ಆರ್.ಶಾಸ್ತ್ರಿ ಹೇಳಿದರು. ತೋಕೂರು ಡಾ. ಎಂ.ರಾಮಣ್ಣ...

Close