ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಶಿಸ್ತು, ಸಂಯಮ, ನಾಯಕತ್ವ ಹಾಗೂ ಶಿಕ್ಷಣದ ಬಗ್ಗೆ ಪ್ರೋತ್ಸಾಹ ನೀಡಿದಾಗ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ, ಯಶಸ್ಸು ಕಂಡುಕೊಳ್ಳುತ್ತಾರೆ ಎಂದು ಮುಲ್ಕಿ ಪೋಲೀಸ್ ಠಾಣಾ ಉಪ ನಿರೀಕ್ಷಕ ಶೀತಲ್ ಅಲಗೂರ್ ಹೇಳಿದರು.
ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್‌ನ ೭ನೇ ವರ್ಷದ ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಮಂಗಳೂರು ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ವಂ. ಮಾಕ್ಸಿಂ ನೊರೋನ್ಹಾ ಮಾತನಾಡಿ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣ ಪಡೆದು ಹೆತ್ತವರಿಗೆ ಹಾಗೂ ಸಮಾಜಕ್ಕೆ ಒಳಿತನ್ನು ಬಯಸಿ ಯಶಸ್ವಿ ಜೀವನ ಸಾಗಿಸಬೇಕು ಎಂದು ಹಿತ ನುಡಿದರು.
ಈ ಸಂದರ್ಭ ಕಿನ್ನಿಗೋಳಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸ್ಟೀವನ್ ಡಿಕುನ್ಹಾ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಹಾಗೂ ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ಮಾಥ್ಯೂ ವಾಸ್ ಸ್ವಾಗತಿಸಿದರು. ಶಾಲಾ ಪ್ರಿನ್ಸಿಪಾಲ್ ಫಾ. ಸುನಿಲ್ ಪ್ರವೀಣ್ ಪಿಂಟೊ ವಾರ್ಷಿಕ ವರದಿ ಮಂಡಿಸಿದರು. ನವೀನ್ ಡಿಸೋಜಾ ವಂದಿಸಿದರು. ಶಿಕ್ಷಕರಾದ ನಿರ್ಮಲಾ ಹಾಗೂ ಜೈಸನ್ ಕ್ಯಾಸ್ತಲಿನೋ ಕಾರ್ಯಕ್ರಮ ನಿರೂಪಿಸಿದರು.

Kinnigoli-18121801

Comments

comments

Comments are closed.

Read previous post:
Kinnigoli-15121801
ತೋಕೂರು : ಸಾಧಕರ ಸನ್ಮಾನ

ಕಿನ್ನಿಗೋಳಿ: ಸಾಧಕರನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಇನ್ನಷ್ಟು ಸಾಸಲು ಪ್ರೇರಣೆಯಾಗುತ್ತದೆ. ಎಂದು ಮುಂಬಯಿ ಕರ್ನಾಟಕ ಪೆಸ್ತಮ್ ಸಂಘದ ಅಧ್ಯಕ್ಷ ರಾಮಣ್ಣ ದೇವಾಡಿಗ ಹೇಳಿದರು. ತೋಕೂರು ಶ್ರೀ ಸುಬ್ರಹ್ಮಣ್ಯ...

Close