ಮೂಲ್ಕಿ : ಬಂಧುತ್ವ ಕ್ರಿಸ್‌ಮಸ್

ಮೂಲ್ಕಿ: ಕಷ್ಟದಲ್ಲಿರುವ ಜನರಿಗೆ ಬೆಳಕಾದ ದೇವಮಾನವ ಏಸುಕ್ರಿಸ್ತರ ಜೀವನದ ಆದರ್ಶವನ್ನು ಮೈಗೂಡಿಸಿಕೊಂಡು ಪರಸ್ಪರ ಭ್ರ್ರಾತತ್ವ ಹಂಚಿಕೆಯ ಮೂಲಕ ಕ್ರಿಸ್‌ಮಸ್ ಆಚರಿಸಬೇಕು ಎಂದು ಮೂಲ್ಕಿ ಕೊಸೆಸಾಂವ್ ಅಮ್ಮನವರ ಚರ್ಚಿನ ಧರ್ಮಗುರು ಫಾ.ಸಿಲ್ವೆಸ್ಟರ್ ಡಿಕೋಸ್ತಾ ಹೇಳಿದರು.
ಮೂಲ್ಕಿಯ ಸೈಂಟ್ ಜೋಸೆಫ್ ಹಾಲ್‌ನಲ್ಲಿ ಚರ್ಚು ಪಾಲನಾ ಪರಿಷತ್ ವತಿಯಿಂದ ನಡೆದ ಬಂಧುತ್ವ ಕ್ರಿಸ್‌ಮಸ್ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶುಭಾಶಂಸನೆ ಗೈದ ಹಿರಿಯ ಧಾರ್ಮಿಕ ವಿದ್ವಾಂಸ ಕೊಲೆಕಾಡಿ ವಾದಿರಾಜ ಉಪಾಧ್ಯಾಯ ಮಾತನಾಡಿ ಧರ್ಮ ಯಾವತ್ತೂ ದೇವರಲ್ಲ ಆದರೆ ದೇವರ ಬಗ್ಗೆ ಅರಿವು ಪಡೆಯಲು ಮಾರ್ಗವಷ್ಟೆ ಆಗಿದೆ. ಧರ್ಮಮಾರ್ಗದಿಂದ ಪರಸ್ಪರ ಸಹಕಾರ ನೀಡುವ ಮೂಲಕ ಬದುಕುವ ಮೂಲಕ ಸರ್ವವ್ಯಾಪಿಯಾದ ಏಕೈಕ ಭಗವಂತನ ಸಾನಿಧ್ಯ ಗಳಿಸಲು ಸಾಧ್ಯ ಎಂದರು.
ಮೂಲ್ಕಿ ಸಿಎಸ್.ಐ ಯುನಿಟಿ ಚರ್ಚು ಸಭಾಪಾಲಕ ರೆ.ಎಡ್ವರ್ಡ್ ಎಸ್ ಕರ್ಕಡ ಕ್ರಿಸ್ಮಸ್ ಸಂದೇಶ ನೀಡಿದರು. ಫಾ.ಸಿಲ್ವೆಸ್ಟರ್ ಡಿಕೋಸ್ತಾ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಮೂಲ್ಕಿ ಡಿವೈನ್ ಕಾಲ್ ಸೆಂಟರ್ ನಿರ್ದೇಶಕ ಫಾ.ಸಿಪ್ರಿಯನ್ ಲೂವಿಸ್, ಮೆಡಲಿನ್ ಕೋನ್ವೆಂಟ್ ಸುಪೀರಿಯರ್ ಸಿ.ನಂದಿತಾ ಬಿಎಸ್, ಚರ್ಚು ಪಾಲನಾ ಪರಿಷತ್ ಉಪಾಧ್ಯಕ್ಷೆ ಜೀನ್ ಮೊಲಿನ್ ಡಿಸೋಜಾ, ಕಾರ್ಯದರ್ಶಿ ಪ್ರಕಾಶ್ ಮೊಂತೇರೊ ಉಪಸ್ಥಿತರಿದ್ದರು.
ಜೀನ್ ಮೋಲಿನ್ ಡಿಸೋಜಾ ಸ್ವಾಗತಿಸಿದರು. ಪ್ರದೀಪ್ ಫೆರಾಓ ನಿರೂಪಿಸಿದರು. ಪ್ರಕಾಶ್ ಮೊಂತೇರೋ ವಂದಿಸಿದರು. ಬಳಿಕ ಬೆಥನಿ ಶಾಲಾ ವಿದ್ಯಾರ್ಥಿಗಳಿಂದ ಕ್ರಿಸ್ಮಸ್ ಹಾಡು ನೃತ್ಯ ರೂಪಕಗಳು ಹಾಗೂ ಯುವಿ ಶೋ ನಡೆಯಿತು.

Mulki-11231802

Mulki-11231803

Comments

comments

Comments are closed.

Read previous post:
Sasihithlu-11231801
ಸಸಿಹಿತ್ಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ

  ಸಸಿಹಿತ್ಲು : ನಮ್ಮ ಹಿರಿಯರು ಗರಡಿಗಳ ಮೂಲಕ ಯುವಕರನ್ನು ಕುಸ್ತಿ ಪಂದ್ಯಾಟಕ್ಕೆ ಪ್ರೋತ್ಸಾಹ ನೀಡುತ್ತಿರುವ ಕಾಲಘಟ್ಟದಲ್ಲಿ ಅವರ ದೇಹ ಸೌಂದರ್ಯ ಆಕರ್ಷಣೀಯವಾಗಿ ಕಾಣುತ್ತಿತ್ತು. ಇಂದು ಅತ್ಯಾಧುನಿಕ ವ್ಯವಸ್ಥೆಯಲ್ಲಿ...

Close