ಸಸಿಹಿತ್ಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ

 

ಸಸಿಹಿತ್ಲು : ನಮ್ಮ ಹಿರಿಯರು ಗರಡಿಗಳ ಮೂಲಕ ಯುವಕರನ್ನು ಕುಸ್ತಿ ಪಂದ್ಯಾಟಕ್ಕೆ ಪ್ರೋತ್ಸಾಹ ನೀಡುತ್ತಿರುವ ಕಾಲಘಟ್ಟದಲ್ಲಿ ಅವರ ದೇಹ ಸೌಂದರ್ಯ ಆಕರ್ಷಣೀಯವಾಗಿ ಕಾಣುತ್ತಿತ್ತು. ಇಂದು ಅತ್ಯಾಧುನಿಕ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾಟಕ್ಕೆ ವಿಶೇಷವಾಗಿ ಪ್ರೋತ್ಸಾಹ ನೀಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಮೂಲ್ಕಿ ಬಳಿಯ ಸಸಿಹಿತ್ಲು ಬೀಚ್ ಪ್ರದೇಶದಲ್ಲಿ ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಸಂಯೋಜನೆಯಲ್ಲಿ ಎರಡು ದಿನಗಲ್ಲಿ ನಡೆಯುವ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕುಸ್ತಿ ಪಂದ್ಯಾಟದಲ್ಲಿ ರಾಜ್ಯದ ವಿವಿಧೆಡೆಯಿಂದ 55 ಮಂದಿ, ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು 165 ಮಂದಿ ಹಾಗೂ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು 58 ಮಂದಿ ಭಾಗವಹಿಸಿದ್ದರು. ತುಳುನಾಡ ಕೇಸರಿ, ತುಳುನಾಡ ಕುಮಾರ, ಮಾಸ್ಟರ್ ಶಿವಾಜಿ ಪ್ರಶಸ್ತಿಗಳನ್ನು ಸ್ಪರ್ಧಾ ಕೂಟದಲ್ಲಿ ನೀಡಿ ಗೌರವಿಸಲಿದೆ. ಕಡಲಿನ ಪಕ್ಕದಲ್ಲಿಯೇ ಬೃಹತ್ ವೇದಿಕೆಯನ್ನು ನಿರ್ಮಿಸಿ ಕುಸ್ತಿ ಪಂದ್ಯಾಟವನ್ನು ಸಂಯೋಜಿಸಲಾಗಿದೆ. ಕರ್ನಾಟಕ ಕುಸ್ತಿ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಮೇಚೂರು ಕುಸ್ತಿ ಸಂಘದ ಜಂಟಿ ಸಹಕಾರದಲ್ಲಿ ಕುಸ್ತಿ ಪಂದ್ಯಾಟ ನಡೆಯುತ್ತಿದೆ.
ಮುಂಬೈ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ, ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಮಹಾಬಲ ಪೂಜಾರಿ ಕಡಂಬೋಡಿ, ಮಂಗಳೂರಿನ ಮಾಜಿ ಮೇಯರ್ ದಿವಾಕರ್ ಕದ್ರಿ, ಶ್ರೀಕರ ಪ್ರಭು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ವಕೀಲರಾದ ಆಶಾ ನಾಯಕ್, ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಸಾರಂತಾಯ ಗರೋಡಿಯ ಯಾದವ ಜಿ. ಬಂಗೇರ ಯಾನೆ ಕಾಂತು ಲಕ್ಕಣ್ಣ ಗುರಿಕಾರ, ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಕರ್ಕೇರ, ಕದಿಕೆ ಮೊಗವೀರ ಸಭಾದ ಅಧ್ಯಕ್ಷ ವಾಸುದೇವ ಸಾಲ್ಯಾನ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಿತ್ರಾ ಸುಕೇಶ್, ಅಶೋಕ್ ಬಂಗೇರ, ವಿನೋದ್‌ಕುಮಾರ್ ಕೊಳುವೈಲು, ಶ್ರೀ ಆಂಜನೇಯ ವ್ಯಾಯಾಮ ಶಾಲೆಯ ಗೌರವ ಅಧ್ಯಕ್ಷ ವಿಠಲ ಬಂಗೇರ, ಸ್ಥಾಪಕ ಸದಸ್ಯ ಕೇಶವ ಸಾಲ್ಯಾನ್, ಮುಂಬಯಿ ಸಂಚಾಲಕ ಅನಿಲ್‌ಕುಮಾರ್, ಉಪಾಧ್ಯಕ್ಷ ಸಂತೋಷ್‌ಕುಮಾರ್ ಮತ್ತಿತರರು ಇದ್ದರು.
ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆಯ ಅಧ್ಯಕ್ಷ ವಿನೋದ್‌ಕುಮಾರ್ ಸ್ವಾಗತಿಸಿದರು, ಶೋಭೇಂದ್ರ ಸಸಿಹಿತ್ಲು ವಂದಿಸಿದರು, ಸುರೇಶ್‌ಕುಮಾರ್ ಸೂರಿಂಜೆ ಕಾರ್ಯಕ್ರಮ ನಿರೂಪಿಸಿದರು.

Sasihithlu-11231801 Sasihithlu-11231802 Sasihithlu-11231803

 

Comments

comments

Comments are closed.

Read previous post:
Mulki-11231801
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ ಪ್ರತಿಷ್ಠಾ ಹುಣ್ಣಿಮೆ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಹುಣ್ಣಿಮೆ ಪ್ರಯುಕ್ತ ಶ್ರೀ ಕಾಶೀ ಮಠಾದೀಶ ಶ್ರೀಮತ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಶ್ರೀ ಉಗ್ರನರಸಿಂಹ ದೇವರಿಗೆ ಅರ್ಚನೆ ಪಂಚಾಮೃತ...

Close