ಗುತ್ತಕಾಡು ಪರಿಸರ ಕಸದ ಬುಟ್ಟಿ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಮ್ಮಿಕೊಂಡ ಸ್ವಚ್ಚ ಗ್ರಾಮ ಯೋಜನೆಯನ್ನು ಜನರು ಸ್ವಯಂಪ್ರೇರಿತರಾಗಿ ಯೋಜನೆಯನ್ನು ಯಶಸ್ವಿಗೊಳಿಸಿ ಇತರ ಗ್ರಾಮಗಳಿಗೆ ಮಾದರಿಯಾಗಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು.
ಗುತ್ತಕಾಡು ಸೊಸೈಟಿ ವಠಾರದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಾಗೂ ಗುತ್ತಕಾಡು ರಾಜೀವ ಗಾಂಧಿ ಕುಡಿಯುವ ನೀರು ಬಳಕೆದಾರರ ಸಂಘ (ರಿ) ನೀಡಲಿರುವ ಒಣ ಹಾಗೂ ಹಸಿ ಕಸದ ವಿಲೇವಾರಿಗೆಗಾಗಿ ಉಚಿತ ಬುಟ್ಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಮಾತನಾಡಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ಹಾಗೂ ದ್ರವ ಸಂಪನ್ಮೂಲಗಳ ನಿರ್ವಹಣೆ ಪ್ರಾರಂಭವಾಗಲಿದ್ದು ಸರಕಾರದ ಆದೇಶದಂತೆ ಬಯಲು ಪ್ರದೇಶ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಸುಡುವುದನ್ನು ಹಾಗೂ ಎಸೆಯುವುದನ್ನು ನಿಷೇದಿಸಲಾಗಿದೆ ಈ ಯೋಜನೆಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಮಾತನಾಡಿ ಸ್ವಚ್ಚ ಗ್ರಾಮ ಯೋಜನೆಯಡಿಯಲ್ಲಿ ಗುತ್ತಕಾಡು ಪ್ರದೇಶದಲ್ಲಿ 300 ಕುಟುಂಬಗಳಿಗೆ ಕಸದ ತ್ಯಾಜ್ಯದ ಉಚಿತ ಬುಟ್ಟಿ ವಿತರಣೆ ಮಾಡಲಾಗುವುದು. ಮುಂದಿನ ಹಂತದಲ್ಲಿ ಪಂಚಾಯಿತಿಯ ಇತರ ವಾರ್ಡ್‌ಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು. ಮಂಗಳೂರು ಎಪಿಎಂಸಿ ಅಧ್ಯಕ್ಷ ಹಾಗೂ ಗುತ್ತಕಾಡು ನೀರು ಸರಬರಾಜು ಸಮಿತಿಯ ಅಧ್ಯಕ್ಷ ಪ್ರಮೋದ್ ಕುಮಾರ್, ತಾ. ಪಂ. ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ. ಎಚ್ ಮಯ್ಯದ್ದಿ, ಶ್ಯಾಮಲ ಪಿ. ಹೆಗ್ಡೆ, ವಾಣಿ ಸುವರ್ಣ, ಗುತ್ತಕಾಡು ಶಾಂತಿನಗರ ಮೂಕಾಂಬಿಕ ದೇವಳ ಧರ್ಮದರ್ಶಿ ವಿವೇಕಾನಂದ ಮತ್ತಿತರರು ಉಪಸ್ಥಿತರಿದ್ದರು.
ನೀರು ಸಮಿತಿಯ ಕಾರ್ಯದರ್ಶಿ ಟಿ. ಎ. ಮಹಮ್ಮದ್ ನಝೀರ್ ಸ್ವಾಗತಿಸಿದರು. ಪ್ರಕಾಶ್ ಆಚಾರ್ ವಂದಿಸಿದರು. ಭವಾನಿ ಕಾರ್ಯಕ್ರಮ ನಿರೂಪಿಸಿದರು.
ವಿತರಣೆ ನಡೆಯಿತು.

Kinnigoli-25121804

Comments

comments

Comments are closed.

Read previous post:
Kinnigoli-25121803
ಗುತ್ತಕಾಡು ಬ್ಯಾಂಕಿಂಗ್ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ: ಬ್ಯಾಂಕ್ ಯೋಜನೆಗಳು ಗ್ರಾಹಕರ ಮನೆ ಬಾಗಿಲಿಗೆ ಬರುತ್ತಿದ್ದು ಇದರಿಂದಾಗಿ ನಿಮ್ಮ ಹಣದ ಸುರಕ್ಷೆ ಹಾಗೂ ಭದ್ರತೆಯಿಂದಿದ್ದು ಗ್ರಾಮೀಣ ಭಾಗದ ಜನರಿಗೆ ವಿಮಾ ಯೋಜನೆ ಸಾಲ ಯೋಜನೆಗಳ ಸದುಪಯೋಗ...

Close