ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ

ಕಿನ್ನಿಗೋಳಿ: ಶಿಕ್ಷಣದ ಪ್ರತಿಯೊಂದು ಹಂತದಲ್ಲಿ ಕಲಿಯುವ ವಿಷಯಗಳಿರುತ್ತದೆ. ಮಕ್ಕಳು ಕೇವಲ ಶಿಕ್ಷಣ ಒತ್ತು ಕೊಡದೆ ಸೇವಾ ಕಾರ್ಯಗಳಿಗೂ ಸಮಯ ನೀಡಬೇಕು ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ವಿಶ್ವೇಶ್ವರ ಭಟ್ ಹೇಳಿದರು.
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಮಂಗಳೂರು ಶಾರದಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸುರಗಿರಿ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ದುರ್ಗಾದಯಾ ಮಾತನಾಡಿ ಮಕ್ಕಳು ಶಿಕ್ಷಣದ ಜೊತೆ ಸಂಸ್ಕ್ರತಿ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಬಿ ಪುರಾಣಿಕ್ ಮಾತನಾಡಿ ಮಕ್ಕಳಿಗೆ ಈ ಪರಿಸರದಲ್ಲಿ ಕೃಷಿಯೇ ಜೀವನಾಧಾರದ ಪೂರಕ ವಾತವರಣ ಕಲ್ಪಿಸಲಿದೆ ಎಂದರು. ಶಾರದಾ ಕಾಲೇಜು ಪ್ರಿನ್ಸಿಪಾಲ್ ಕಬ್ಬಿನಾಲೆ ಬಾಲಕೃಷ್ಣ ಭಾರದ್ವಜ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ದೇವಳದ ಮೊಕ್ತೇಸರ ವೈ ಬಾಲಚಂದ್ರ ಭಟ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಸುರಗಿರಿ ಯುವಕ ಮಂಡಳದ ಅಧ್ಯಕ್ಷ ಧೀರಜ್ ಶೆಟ್ಟಿ, ಮಮ್ಮೆಟ್ಟು ಯುವತಿ ಮತ್ತು ಮಹಿಳಾ ಮಂಡಳದ ಅಧ್ಯಕ್ಷೆ ನಿರ್ಮಲ ನಾಯಕ್, ವಿನಾಯಕ ಮಿತ್ರ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿಗಾರ್, ಶಿಬಿರದ ಯೋಜನಾಧಿಕಾರಿ ಸೂರಜ್, ಸಹ ಯೋಜನಾಧಿಕಾರಿ ಅನುಪಮ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರಾರ್ಥಿ ಯಶ್ವಿನಿ ಸ್ವಾಗತಿಸಿ ಗುರುಪ್ರಸಾದ್ ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-25121801

Comments

comments

Comments are closed.

Read previous post:
Mulki-11231804
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ ಶತ ಕುಂಭಾಭಿಶೇಕ

ಮೂಲ್ಕಿ : ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ರಮಗಳ ಪ್ರಯುಕ್ತ ಸೋಮವಾರ ಶ್ರೀ ಕ್ಷೇತ್ರದ ಆರಾಧ್ಯ ಮೂರ್ತಿಗಳಿಗೆ ಶ್ರೀ ಕಾಶೀ ಮಠಾದೀಶ ಶ್ರೀಮತ್ ಸಯಮೀಂದ್ರ ತೀರ್ಥ ಸ್ವಾಮೀಜಿಯವರು...

Close