ಹಳೆಯಂಗಡಿ : ತುಳು ನಾಟಕ ಸ್ಪರ್ಧೆ

ಕಿನ್ನಿಗೋಳಿ: ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವ ಮಂಡಲದ ನೂತನ ಕಟ್ಟಡ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಅಂಗವಾಗಿ 2019ರ ಫೆಬ್ರವರಿ ಕೊನೆಯ ವಾರದಲ್ಲಿ 6 ದಿನಗಳ ಮುಕ್ತ ತುಳು ಸಾಮಾಜಿಕ ನಾಟಕ ಸ್ಪರ್ಧೆ ಯನ್ನು ಏರ್ಪಡಿಸಲಾಗಿದೆ.
ಗರಿಷ್ಠ ಎರಡೂವರೆ ಗಂಟೆಗಳ ಅವಧಿಯ, ಸಾಮಾಜಿಕ ಹಾಸ್ಯವನ್ನೊಳಗೊಂಡ ನಾಟಕ ಪ್ರದರ್ಶಿಸಬೇಕಾಗಿದ್ದು ಕನಿಷ್ಠ ಬೆಳಕು ಹಾಗೂ ಧನಿವರ್ಧಕ ನೀಡಲಾಗುವುದು. ನಾಟಕದ ಕಥೆ, ಸಾರಾಂಶ, ಸಂದೇಶಗಳನ್ನು ಆಧರಿಸಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಬಹುಮಾನ ಮಾತ್ರವಲ್ಲದೆ ಕಥಾನಾಯಕ, ನಾಯಕಿ, ನಿರ್ದೇಶಕ, ಖಳನಾಯಕ, ಹಾಸ್ಯನಟ, ಸಂಗೀತ ಹೀಗೆ ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಗುವುದು. ವಿಜೇತ ತಂಡಗಳನ್ನು ಹೊರತು ಪಡಿಸಿ ಮೂರು ತಂಡಗಳಿಗೆ ಪ್ರೋತ್ಸಾಹಕ ನಗದು ಬಹುಮಾನವಿದೆ. ಆಸಕ್ತರು ತಂಡದ ಹೆಸರು ವಿಳಾಸ, ನಾಟಕದ ವಿವರಗಳನ್ನು ವಿದ್ಯಾವಿನಾಯಕ ಯುವಕ ಮಂಡಲ, ಹಳೆಯಂಗಡಿ, ಮಂಗಳೂರು ತಾಲೂಕು ಇಲ್ಲಿಗೆ ಜನವರಿ 10ರ ಒಳಗೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಪದಾಧಿಕಾರಿಗಳನ್ನು 9741979491, 9972410618, 9449388209, 9980769762 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-27121803
ಕಿನ್ನಿಗೋಳಿ: ಬ್ಯಾರಿ ಸೌಹಾರ್ದ ಸಾಂಸ್ಕೃತಿಕ ಮೇಳ

ಕಿನ್ನಿಗೋಳಿ: ಬ್ಯಾರಿ ಸಮುದಾಯ ಕಷ್ಟದ ದುಡಿಮೆಯಿಂದ ಸಮಾಜದಲ್ಲಿ ಬದುಕು ಕಟ್ಟಿಕೊಂಡಿದೆ. ಶ್ರಮ ಜೀವಿಗಳಾದ ಬ್ಯಾರಿ ಸಮುದಾಯದ ಮಂದಿ ಈ ನಾಡಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಮಾಜಿ...

Close