ಕಿನ್ನಿಗೋಳಿ: ಬ್ಯಾರಿ ಸೌಹಾರ್ದ ಸಾಂಸ್ಕೃತಿಕ ಮೇಳ

ಕಿನ್ನಿಗೋಳಿ: ಬ್ಯಾರಿ ಸಮುದಾಯ ಕಷ್ಟದ ದುಡಿಮೆಯಿಂದ ಸಮಾಜದಲ್ಲಿ ಬದುಕು ಕಟ್ಟಿಕೊಂಡಿದೆ. ಶ್ರಮ ಜೀವಿಗಳಾದ ಬ್ಯಾರಿ ಸಮುದಾಯದ ಮಂದಿ ಈ ನಾಡಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು.
ಕಿನ್ನಿಗೋಳಿಯ ಶಾಂತಿನಗರ ಗುತ್ತಕಾಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಬ್ಯಾರಿ ಸೌಹಾರ್ದ ಸಾಂಸ್ಕೃತಿಕ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರು ಮುಹಮ್ಮದ್ ಅವರು ದಫ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಸಾಹಿತ್ಯ ಉಳಿಸಿ ಬೆಳೆಸುವ ಜೊತೆಯಲ್ಲಿ ಬ್ಯಾರಿ ಸಮುದಾಯದ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕೆಲಸ ನಡೆಯುತ್ತಿರುವುದು ಅಭಿನಂದನೀಯ. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗೂ ಹೆಚ್ಚು ಒತ್ತು ನೀಡಬೇಕು.ಈ ನಿಟ್ಟಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಜಿಲ್ಲೆಯಾದ್ಯಂತ ಇಂತಹ ಕಾರ್ಯಕ್ರಮ ಮಾಡುವಂತಾಗಲಿ ಎಂದರು.
ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯರಾದ ಟಿ.ಎಚ್.ಮಯ್ಯದ್ದಿ ಅವರನ್ನು ಸನ್ಮಾನಿಸಲಾಯಿತು.
ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಉಪನ್ಯಾಸ ನೀಡಿದರು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಸದಸ್ಯೆ ವಾಣಿ, ಶ್ರೀಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ಗುತ್ತಕಾಡು ನಾಗರಿಕ ಹಿತರಕ್ಷಣ ವೇದಿಕೆ ಅಧ್ಯಕ್ಷ ಟಿ.ಎ.ಹನೀಫ್, ಗುತ್ತಕಾಡು ಸ.ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಗುತ್ತಿಗೆದಾರ ಬಿ.ಸೈದಾಲಿ, ಖಿಲ್ರಿಯಾ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್ ಸಂಚಾಲಕ ಟಿ.ಕೆ. ಅಬ್ದುಲ್ ಖಾದರ್ ಉಪಸ್ಥಿತರಿದ್ದರು.
ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಹುಸೇನ್ ಕಾಟಿಪಳ್ಳ ನಿರೂಪಿಸಿದರು. ಬಳಿಕ ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಶಿಷ್ಟಾಚಾರ ನೆನಪಿಸಿದ ಮಾಜಿ ಸಚಿವ
ಕಾರ್ಯಕ್ರಮ ಪಟ್ಟಿ ಪ್ರಕಾರ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಉದ್ಘಾಟನೆ ಮಾಡಬೇಕಿತ್ತು. ಅವರ ಅನುಪಸ್ಥಿತಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಅವರಲ್ಲಿ ಕಾರ್ಯಕ್ರಮ ಉದ್ಘಾಟನೆಗೆ ಕೋರಲಾಯಿತು. ಆದರೆ ತಾನು ಜನಪ್ರತಿನಿಧಿ ಅಲ್ಲ ಅನ್ನೋ ಕಾರಣಕ್ಕೆ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರಲ್ಲಿ ಉದ್ಘಾಟಿಸುವಂತೆ ತಿಳಿಸಿದರು. ಬಳಿಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೇ ದಫ್ ಬಾರಿಸುವ ಮೂಲಕ ಉದ್ಟಾಟಿಸಿದರು. ಶಿಷ್ಟಾಚಾರ ಪ್ರಕಾರ ಸರಕಾರಿ ಕಾರ್ಯಕ್ರಮವನ್ನು ಸರಕಾರಿ ಪ್ರತಿನಿಧಿಗಳೇ ಉದ್ಘಾಟಿಸಬೇಕು ಎಂದು ಅಭಯಚಂದ್ರ ಜೈನ್ ಭಾಷಣದಲ್ಲಿ ನೆನಪಿಸಿಕೊಂಡರು.

Kinnigoli-27121803

Comments

comments

Comments are closed.

Read previous post:
Kinnigoli-27121801
ಕೊಡೆತ್ತೂರು: ಕೆಂಡ ಸೇವೆ

ಕಿನ್ನಿಗೋಳಿ: ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ಚೌತಿ ಹಬ್ಬದ ಪ್ರಯುಕ್ತ ಕೆಂಡ ಸೇವೆ ನಡೆಯಿತು.

Close