ಕೊಡೆತ್ತೂರು : ಧಾರ್ಮಿಕ ಸಭೆ

ಕಿನ್ನಿಗೋಳಿ: ಜನರ ಪ್ರೀತಿಯೇ ನನಗೆ ಸನ್ಮಾನ ಬೇರೆ ಯಾವುದೇ ಸನ್ಮಾನದ ಅಗತ್ಯ ಇಲ್ಲ. ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದಲ್ಲಿ ನಡೆದ ಚೌತಿ ಹಬ್ಬದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೊಡೆತ್ತೂರು ವೇದವ್ಯಾಸ ಉಡುಪ ಮಾತನಾಡಿ ಧಾರ್ಮಿಕ ನಂಬಿಕೆಗಳು ಆಚಾರ ವಿಚಾರಗಳು ಸಂಸ್ಕ್ರತಿ ಮತ್ತು ಸಂಸ್ಕಾರವನ್ನು ಬೆಳೆಸುತ್ತದೆ ಎಂದರು.
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬರ್ಕೆ ಪ್ರೆಂಡ್ಸ್ ಮತ್ತು ಯುವ ಶಕ್ತಿ ಪ್ರೆಂಡ್ಸ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಕುಸುಮ ಉಲ್ಲಂಜೆ ಅವರಿಗೆ ವೈದ್ಯಕೀಯ ಚಿಕಿತ್ಸೆಗೆ ೨೫ ಸಾವಿರ ರೂಪಾಯಿ ಧನ ಸಹಾಯ ನೀಡಲಾಯಿತು.
ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ಶೆಟ್ಟಿ ಮೂಡು ದೇವಸ್ಯ, ವಿಜಯ ಶೆಟ್ಟಿ ಅಜಾರಗುತ್ತು, ವಿಶ್ವನಾಥ ಶೆಟ್ಟಿ ಮೂಡು ದೇವಸ್ಯ, ಬಾಸ್ಕರದಾಸ್ ಎಕ್ಕಾರು, ಕಲ್ಪೇಶ್ ಶೆಟ್ಟಿ ಮಲ್ಲಿಗೆಯಂಗಡಿ, ಸುಶೀಲ ಶೆಟ್ಟಿ ಮುಕಾಲ್ದಿ ಬೆನ್ನಿ, ದಿವಾಕರ ಶೆಟ್ಟಿ ಕೆ,ಜಿ. ಬೆಟ್ಟು, ಮಹಾಬಲ ಶೆಟ್ಟಿ ಕೊಡೆತ್ತೂರು ಭಂಡಾರ ಮನೆ, ಬರ್ಕೆ ಪ್ರೆಂಡ್ಸ್ ನ ಲೋಕೇಶ್ ಶೆಟ್ಟಿ ಬರ್ಕೆ, ಪ್ರೇಮ್ ರಾಜ್ ಶೆಟ್ಟಿ, ರಾಜೇಶ್ ಕುಂದರ್, ಪ್ರತೀಕ್ ಶೆಟ್ಟಿ, ವಿಜಯ್, ಪ್ರಮೋದ್, ದಿನೇಶ್ ಚಂದ್ರ ಶೆಟ್ಟಿ, ಆನಂದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರಾಜೇಶ್ ಶೆಟ್ಟಿ ಕೆಳಗಿನ ಮನೆ ಸನ್ಮಾನ ಪತ್ರ ವಾಚಿಸಿದರು. ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-28121803

Comments

comments

Comments are closed.

Read previous post:
Kinnigoli-28121802
ಭಾರತ ಮಾತಾ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಮೌಲ್ಯಧಾರಿತ ಶಿಕ್ಷಣ ನೀಡಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿಸಬೇಕು ಎಂದು ಶಾಲಾ ಸಂಚಾಲಕ ವಿನೋಭನಾಥ್ ಐಕಳ ಹೇಳಿದರು. ಪುನರೂರು ಭಾರತ ಮಾತಾ ಪ್ರೌಢ ಶಾಲೆ ಹಾಗೂ...

Close