ಯೇಸು ಕ್ರಿಸ್ತರ ತತ್ವ ಸಿದ್ಧಾಂತಕ್ಕೆ ಬದ್ದರಾಗಬೇಕು

ಕಿನ್ನಿಗೋಳಿ: ಪ್ರಭು ಯೇಸು ಕ್ರಿಸ್ತರ ತತ್ವ ಸಿದ್ಧಾಂತಕ್ಕೆ ಬದ್ದರಾಗಿ ನೆಮ್ಮದಿಯ ಜೀವನ ಕಂಡುಕೊಳ್ಳಬೇಕು ಎಂದು ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಧರ್ಮಗುರು ಫಾ. ಮ್ಯಾಥ್ಯೂ ವಾಸ್ ಹೇಳಿದರು.
ಕಿನ್ನಿಗೋಳಿಯ ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಭಾಂಗಣದಲ್ಲಿ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಪದ್ಮನೂರು- ಕಿನ್ನಿಗೋಳಿ ಆಶ್ರಯದಲ್ಲಿ ನಡೆದ 53 ನೇ ವರ್ಷದ ಸಾರ್ವಜನಿಕ ಕ್ರಿಸ್‌ಮಸ್ ದಿನಾಚರಣೆಯಲ್ಲಿ ಮಾತನಾಡಿದರು.
ಈ ಸಂದರ್ಭ ಕೃಷಿಕ ರೊನಾಲ್ಡ್ ತಾವ್ರೋ ಹಾಗೂ ಸೈನಿಕ ಪದ್ಮನಾಭ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಪಿ. ಸತೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಪೊಂಪೈ ಜ್ಯೂನಿಯರ್ ಕಾಲೇಜು ಇತಿಹಾಸ ಉಪನ್ಯಾಸಕ ಲಕ್ಷ್ಮೀಶ ಹೆಗಡೆ ಸೋದೆ, ಮಂಜನಾಡಿ ಆಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಪ್ರಿನ್ಸಿಪಾಲ್ ಮುನೀರ್ ಅಹ್ಮದ್ ಕಮಿಲ್ ಸಖಾಫಿ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

Kinnigoli-28121804

Comments

comments

Comments are closed.

Read previous post:
Kinnigoli-28121803
ಕೊಡೆತ್ತೂರು : ಧಾರ್ಮಿಕ ಸಭೆ

ಕಿನ್ನಿಗೋಳಿ: ಜನರ ಪ್ರೀತಿಯೇ ನನಗೆ ಸನ್ಮಾನ ಬೇರೆ ಯಾವುದೇ ಸನ್ಮಾನದ ಅಗತ್ಯ ಇಲ್ಲ. ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಮೂಲ್ಕಿ...

Close