ಭಾರತ ಮಾತಾ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಮೌಲ್ಯಧಾರಿತ ಶಿಕ್ಷಣ ನೀಡಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿಸಬೇಕು ಎಂದು ಶಾಲಾ ಸಂಚಾಲಕ ವಿನೋಭನಾಥ್ ಐಕಳ ಹೇಳಿದರು.
ಪುನರೂರು ಭಾರತ ಮಾತಾ ಪ್ರೌಢ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉದ್ಯಮಿ ಸುರೇಶ್ ರಾವ್, ಪದ್ಮನೂರು ಕ್ಲಸ್ಟರ್ ಸಿಆರ್‌ಪಿ. ರಾಮದಾಸ ಭಟ್, ತೋಕೂರು ಯುವಕ ಸಂಘ ಅಧ್ಯಕ್ಷ ಹೇಮಂತ್ ಅಮೀನ್, ಪ್ರೌಢ ಶಾಲಾ ಪೋಷಕ ಸಮಿತಿ ಅಧ್ಯಕ್ಷೆ ಫ್ಲೋರಿನ್ ಪಿರೇರಾ, ಗಿರಿಜಾ, ಪ್ರಾಥಮಿಕ ಶಾಲಾ ಪೋಷಕ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಅಂಗನವಾಡಿ ಶಿಕ್ಷಕಿ ಕಸ್ತೂರಿ, ವಿದ್ಯಾರ್ಥಿ ನಾಯಕರಾದ ಗ್ಲೆನ್ ಸಿಕ್ವೇರಾ, ದೀಪಕ್ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣ ಮೂರ್ತಿ ರಾವ್ ಸ್ವಾಗತಿಸಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್ ಶಾಲಾ ವರದಿ ವಾಚಿಸಿದರು.

Kinnigoli-28121802

 

Comments

comments

Comments are closed.

Read previous post:
Kinnigoli-28121801
ಕಿನ್ನಿಗೋಳಿ ರೋಟರಿ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಹೆತ್ತವರು, ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಿ ಪ್ರೋತ್ಸಾಹ ನೀಡಿದಾಗ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದು ಪಲಿಮಾರು ಸರಕಾರಿ...

Close