ಮೂಲ್ಕಿ ಸೀಮೆಯ ಅರಸು ಕಂಬಳ ಮಾದರಿ

ಮುಲ್ಕಿ: ನಾಲ್ಕು ದಶಕದ ಇತಿಹಾಸ ಇರುವ ಮೂಲ್ಕಿ ಸೀಮೆಯ ಅರಸು ಕಂಬಳವು ಮಾದರಿಯಾಗಿದ್ದು, ಶ್ರದ್ಧೆ , ಶಿಸ್ತು ಹಾಗೂ ಪರಂಪರೆಯನ್ನು ಉಳಿಸುವಲ್ಲಿ ಕೊಡುಗೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಪಡುಪಣಂಬೂರು ಬಾಕಿಮಾರು ಗದ್ದೆಯಲ್ಲಿ ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ನೇತೃತ್ವದಲ್ಲಿ ನಡೆದ ಮೂಲ್ಕಿ ಸೀಮೆ ಅರಸು ಕಂಬಳದ ಸಮಾರಂಭದಲ್ಲಿ ಮಾತನಾಡಿದರು.
ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಭಟ್ ಅಧ್ಯಕ್ಷತೆಯನ್ನು ವಹಿಸಿ ಕಂಬಳದಿಂದ ಕೃಷಿ ಚಟುವಟಿಕೆಗೆ ಪೂರಕವಾದ ಕ್ರೀಡೆಯನ್ನು ಕರಾವಳಿಯ ಜನತೆ ಉಳಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನಿಸ್ವಾರ್ಥವಾಗಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸಾಧಕರ ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮನೋಹರ ಶೆಟ್ಟಿ, ಸೀತಾರಾಮ್ ಕುಮಾರ್ ಕಟೀಲು, ಚಂದ್ರಶೇಖರ ನಾನಿಲ್, ಕ್ರೀಡಾ ರತ್ನ ಪ್ರಶಸ್ತಿ ಪಡೆದ ನಾರಾವಿ ಯುವರಾಜ ಜೈನ್, ಕೃಷಿ ಕ್ಷೇತ್ರದ ಪಿ.ಸತೀಶ್ ರಾವ್ ಹೊಗೆಗುಡ್ಡೆ, ಗಡಿಗಾರರಾದ ಗೋಪಾಲ ನಾಯ್ಗರು, ಸಾಹಿತಿ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಮೂಲ್ಕಿ ಅರಮನೆಯ ಗೌತಮ್ ಜೈನ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ, ಉದ್ಯಮಿ ಪುಷ್ಪರಾಜ್ ಜೈನ್, ಯುವ ಕಾಂಗ್ರೇಸ್‌ನ ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಯದುನಾರಾಯಣ ಶೆಟ್ಟಿ, ಕರ್ನಾಟಕ ಬ್ಯಾಂಕ್‌ನ ಶ್ರಿನಿವಾಸ ದೇಶಪಾಂಡೆ, ಪ್ರವೀಣ ಭೋಜ ಶೆಟ್ಟಿ ಎಡ್ಮೆಮಾರ್, ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಚರಣ್ ಶೆಟ್ಟಿ ಪಕ್ಷಿಕೆರೆ, ಸಿನಿಮಾ ಕಲಾವಿದರಾದ ಭೋಜರಾಜ್ ವಾಮಂಜೂರು, ಕರಿಶ್ಮಾ ಅಮೀನ್, ಮಂಜು ರೈ ಮೂಳೂರು, ಕಂಬಳ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್.ಶೆಟ್ಟಿ, ಮಾರ್ಗದರ್ಶಕ ಗುಣಪಾಲ ಕಡಂಬ, ಕೆಪಿಸಿಸಿ ಸದಸ್ಯ ಎಚ್.ವಸಂತ ಬೆರ್ನಾಡ್, ಕೊಲ್ನಾಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ, ಶಶೀಂದ್ರ ಎಂ. ಸಾಲ್ಯಾನ್, ಪಂಜಗುತ್ತು ಶಾಂತಾರಾಮ ಶೆಟ್ಟಿ ಹಳೆಯಂಗಡಿ, ಎಂ.ಎಚ್.ಅರವಿಂದ ಪೂಂಜಾ, ನವೀನ್ ಶೆಟ್ಟಿ ಎಡ್ಮೆಮಾರ್, ಚಂದ್ರಶೇಖರ್ ಜಿ. ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಸುಂದರ್ ದೇವಾಡಿಗ, ದಿನೇಶ್ ಶೆಟ್ಟಿ, ದಿನೇಶ್ ಸುವರ್ಣ, ಶುಭ್ರತ್ ದೇವಾಡಿಗ, ಉಮೇಶ್ ಪೂಜಾರಿ, ಹರ್ಷಿತ್ ಡಿ. ಸಾಲ್ಯಾನ್, ನವೀನ್‌ಕುಮಾರ್ ಬಾಂದಕೆರೆ, ಕಿರಣ್ ಹೊಗೆಗುಡ್ಡೆ, ರಂಜಿತ್ ಪುತ್ರನ್, ಮನ್ಸೂರ್ ಹೆಚ್ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಸ್ವಾಗತಿಸಿ, ಪ್ರಸ್ತಾವನೆಗೈದರು, ಕೋಶಾಧಿಕಾರಿ ಕೆ.ವಿಜಯಕುಮಾರ್ ಶೆಟ್ಟಿ ಕೊಲ್ನಾಡು ವಂದಿಸಿದರು, ಶರತ್ ಶೆಟ್ಟಿ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ :
ಕನೆಹಲಗೆ:
ಬಾರ್ಕೂರು ಶಾಂತಾರಾಮ ಶೆಟ್ಟಿ (ಪ್ರ), ಓಡಿಸಿದವರು : ಮಂದಾರ್ತಿ ಶಿರೂರು ಗೋಪಾಲನಾಯ್ಕ.
ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ (ದ್ವಿ) ಬೈಂದೂರು ಭಾಸ್ಕರ ದೇವಾಡಿಗ.

ಹಗ್ಗ ಹಿರಿಯ :
ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಪ್ರ) ಇರ್ವತ್ತೂರು ಆನಂದ. ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ ಬಜಗೋಳಿ (ದ್ವಿ) ಜೋಗಿಬೆಟ್ಟು ನಿಶಾಂತ್ ಶೆಟ್ಟಿ.

ಹಗ್ಗ ಕಿರಿಯ :
ಕಾಂತಾವರ ಅಂಬೋಡಿಮಾರ್ ರಘನಾಥ ದೇವಾಡಿಗ (ಪ್ರ) ನಕ್ರೆ ಮಂಜುನಾಥ ಭಂಡಾರಿ. ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ (ದ್ವಿ) ಮರೋಡಿ ಶ್ರೀಧರ್.

ನೇಗಿಲು ಹಿರಿಯ :
ಇರುವೈಲು ಪಾನಿಲ ಬಾಡ ಪೂಜಾರಿ (ಪ್ರ) ಮಿಜಾರು ಅಶ್ವಥಪುರ ಶ್ರಿನಿವಾಸ ಗೌಡ.
ಬೋಳದ ಗುತ್ತು ಸತೀಶ್ ಶೆಟ್ಟಿ (ದ್ವಿ) ಹೊಕ್ಕಾಡಿಗೋಳಿ ಹಕ್ಕೋರಿ ಸುರೇಶ್ ಎಂ. ಶೆಟ್ಟಿ.

ನೇಗಿಲು ಕಿರಿಯ :
ಹೊಕ್ಕಾಡಿಗೋಳಿ ಹಕ್ಕೇರಿ ಸನತ್ ಕುಮಾರ್ ಶೆಟ್ಟಿ (ಪ್ರ) ಹೊಕ್ಕಾಡಿಗೋಳಿ ಹಕ್ಕೋರಿ ಸುರೇಶ್ ಎಂ. ಶೆಟ್ಟಿ.
ದೊಡ್ಡರಂಗಡಿ ಸೇನರಬೆಟ್ಟು ರವಿ ಸುವರ್ಣ (ದ್ವಿ) ಬಂದೂರು ಮಂಜುನಾಥ ನಾಯ್ಕ .

ಅಡ್ಡಹಲಗೆ :
ಬೋಳಾರ ತ್ರಿಶಾಲ್ ಕೆ. ಪೂಜಾರಿ (ಪ್ರ) ಮಂದಾರ್ತಿ ಶಿರೂರು ಗೋಪಾಲನಾಯ್ಕ.
ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ (ದ್ವಿ) ನಾರಾವಿ ಯುವರಾಜ್ ಜೈನ್.

Comments

comments

Comments are closed.

Read previous post:
Kinnigoli-29121801
ಕಿನ್ನಿಗೋಳಿ : ಅಭಿನಂದನಾ ಕಾರ್ಯಕ್ರಮ

ಕಿನ್ನಿಗೋಳಿ: ಇಂಡಿಯನ್ ವರ್ಚುವಲ್ ವಿ. ವಿ ಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ನಿಡ್ಡೋಡಿ ಚಾವಡಿ ಮನೆ ಡಾ. ಜಗನ್ನಾಥ ಶೆಟ್ಟಿ ಹಾಗೂ ಪತ್ನಿ ಹಾಗೂ ಸುಚೇತಾ...

Close