ಗುತ್ತಕಾಡು ಹಿತರಕ್ಷಣಾ ವೇದಿಕೆ ವಾರ್ಷಿಕೋತ್ಸವ

ಕಿನ್ನಿಗೋಳಿ: ನನ್ನ ಸೇವಾವಧಿಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದೇನೆ ಎಂಬ ತೃಪ್ತಿ ನನಗಿದೆ ಸರಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಸೇವೆ ಸಲ್ಲಿಸಿದ್ದೇನೆ ಎಂದು ನಿವೃತ್ತ ಪೋಸ್ಟ್‌ಮ್ಯಾನ್ ಎಲಿಯಾಸ್ ಡಿಸೋಜ ಹೇಳಿದರು
ತಾಳಿಪಾಡಿ ಬಿಲ್ಲವ ಸಂಘದ ವೇದಿಕೆಯಲ್ಲಿ ನಡೆದ ನಾಗರಿಕಾ ಹಿತರಕ್ಷಣಾ ವೇದಿಕೆ ಗುತ್ತಕಾಡು ಶಾಂತಿನಗರ ಇದರ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಳಿಪಾಡಿ ಬಿಲ್ಲವ ಸಂಘದ ಅಧ್ಯಕ್ಷ ಕುಶಲ ಪೂಜಾರಿ ಮಾತನಾಡಿ ಯಾವುದೇ ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭ ಆದರೆ ಮುಂದುವರಿಸುವುದು ಕಷ್ಟ. ನಾಗರಿಕಾ ಹಿತರಕ್ಷಣಾ ವೇದಿಕೆ ಸಕ್ರಿಯವಾಗಿ ಕಾರ್ಯನಿರ್ವಹಿಸುತಿರುವುದು ಅಭಿನಂದನೀಯ ಎಂದರು.
ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ ಹನೀಪ್ ಅಧ್ಯಕ್ಷತೆ ವಹಿಸಿದ್ದರು.
ಗುತ್ತಕಾಡು ಹಿರಿಯ ಪ್ರಾರ್ಥಮಿಕ ಶಾಲೆಯ ಶಿಕ್ಷಕಿ ಯಶೋಧ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿಲೋಮಿನಾ ಸಿಕ್ವೇರ, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯೆ ವಾಣಿ, ಂಊಕಾಂಬಿಕ ದೇವಳದ ಧರ್ಮದರ್ಶಿ ವಿವೇಕಾನಂದ, ಕೇಶವ ದೇವಾಡಿಗ ಉಪಸ್ಥಿತರಿದ್ದರು.
ನಾಗರಿಕ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಟಿ.ಎ. ನಜೀರ್ ಸನ್ಮಾನಪತ್ರ ವಾಚಿಸಿದರು, ಅಬ್ದುಲ್ ರಜಾಕ್ ವರದಿ ವಾಚಿಸಿದರು, ಚಂದ್ರಶೇಖರ್ ವಂದಿಸಿದರು. ದಿವಾಕರ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

Kinnigoli-01011902

Comments

comments

Comments are closed.

Read previous post:
Kinnigoli-01011901
ಎನ್.ಎಸ್.ಎಸ್. ವಾರ್ಷಿಕ ಶಿಬಿರ ಸಮಾರೋಪ

ಕಿನ್ನಿಗೋಳಿ: ವಿದ್ಯಾರ್ಥಿಗಳು ಶಿಸ್ತುಬದ್ಧ ವ್ಯಕ್ತಿತ್ವವನ್ನು ರೂಪಿಸಿಕೊಂಡು ಶಿಕ್ಷಣದ ಜೊತೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜದ ಅಭಿವೃದ್ದಿಗಾಗಿ ಕೈ ಜೋಡಿಸಬೇಕು ಎಂದು ಧನಂಜಯ ಶೆಟ್ಟಿಗಾರ್ ಹೇಳಿದರು. ಸುರಗಿರಿ ಶ್ರೀ ಮಹಾಲಿಂಗೇಶ್ವರ...

Close