ಅಂತರ್ ಕಾಲೇಜು ಕ್ರಿಸ್ಮಸ್ ಹಾಡುಗಳ ಸ್ಪರ್ಧೆ

ಕಿನ್ನಿಗೋಳಿ : ಹಳೆಯಂಗಡಿಯ ಭಾರತದ ಕ್ರ್ಯೆಸ್ತ ಚರ್ಚುಗಳ ಒಕ್ಕೂಟ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ.ಕ ಜಿಲ್ಲೆಯ ಸಂಯೋಜನೆಯಲ್ಲಿ ಕ್ರಿಸ್‌ಮಸ್ ಹಬ್ಬ ಪ್ರಯುಕ್ತ ಹಳೆಯಂಗಡಿಯ ಕೊಳುವ್ಯೆಲುನಲ್ಲಿರುವ ಇಂಡಿಯನ್ ಯೋಗ ಮಂದಿರದಲ್ಲಿ ಜರಗಿದ ಕ್ರಿಸ್‌ಮಸ್ ಹಾಡುಗಳ ಅಂತರ್ ಕಾಲೇಜು ಗುಂಪು ಸ್ವರ್ಧೆಯಲ್ಲಿ ಐಕಳ ಪೊಂಪೈ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ಸ್ಪರ್ಧೆಯಲ್ಲಿ ಒಟ್ಟು ಹದಿನ್ಯೆದು ಕಾಲೇಜುಗಳು ಭಾಗವಹಿಸಿದ್ದು ಹಳೆಯಂಗಡಿಯ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವೀತಿಯ ಸ್ಥಾನ ಹಾಗೂ ಮೂಲ್ಕಿಯ ಸೈಂಟ್ ಆನ್ಸ್ ನರ್ಸಿಂಗ್ ಕಾಲೇಜು ತೃತೀಯ ಬಹುಮಾನ ಪಡೆದಿದೆ. ಭಾರತದ ಕ್ರ್ಯೆಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷ ವಕೀಲ ಡೇನಿಯಲ್ ದೇವರಾಜ್ ವಿಜೇತರಿಗೆ ನಗದು ಸಹಿತ ಪ್ರಶಸ್ತಿ ಫಲಕ ವಿತರಿಸಿದರು. ತೀರ್ಪುಗಾರರಾಗಿ ಜೋಯ್ಸ್ ಶೆರ್ಲಿ, ಸಿಸ್ಟರ್ ಜಾಯಿಸ್ಲಿನ್, ಜಯ ಪ್ರಕಾಶ್ ಕೋಣಾಜೆ, ಹರಿಣಿ ಸುಶಾಂತಿ ಬಂಗೇರ ಸಹಕರಿಸಿದ್ದು ಮೂಲ್ಕಿ ಯುನಿಟಿ ಸಿ.ಎಸ್.ಐ ಚರ್ಚಿನ ಸಭಾಪಾಲಕ ರೆವರೆಂಡ್ ಎಡ್ವರ್ಡ್ ಎಸ್ ಕರ್ಕಡ, ಸಾಹುಲ್ ಹಮೀದ್, ರೆವರೆಂಡ್ ಐಸನ್ ಪಾಲನ್ನ, ಸಭಾಪಾಲಕರು ಸಿ.ಎಸ್.ಐ ಚರ್ಚು ಕೃಷ್ಣಾಪುರ, ರೆವರೆಂಡ್ ವಿನಯಲಾಲ್ ಬಂಗೇರಾ, ಸಭಾಪಾಲಕರು ಸಿ.ಎಸ್.ಐ ಚರ್ಚು ಹಳೆಯಂಗಡಿ, ವಕೀಲರುಗಳಾದ ಭೋಜ ಅಮೀನ್, ಹರಿಶ್ಚಂದ್ರ, ಪ್ರಕಾಶ್ ನಾಯಕ್ ಶಿರಸ್ತೆದಾರರು ನ್ಯಾಯಾಂಗ ಇಲಾಖೆ ಮಂಗಳೂರು, ರೆವರೆಂಡ್ ಪುಟ್ಟುರಾಜ್ ಸಭಾಪಾಲಕರು, ಸಿ.ಎಸ್.ಐ ಚರ್ಚು ಮೈಸೂರು, ಲೀಲಾವತಿ ಕುಮಟಾ ಮತ್ತಿತರು ಉಪಸ್ಥಿತರಿದ್ದರು.

Kinnigoli-01011908

Comments

comments

Comments are closed.

Read previous post:
Kinnigoli-01011907
ಏಳಿಂಜೆ ಅಯ್ಯಪ್ಪ ಭಕ್ತ ವೃಂದ ಸನ್ಮಾನ

ಕಿನ್ನಿಗೋಳಿ: ಏಳಿಂಜೆಯಲ್ಲಿ ನಡೆದ ಏಳಿಂಜೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ೯ ನೇ ವರ್ಷದ ಮಹಾ ಪೂಜೆಯ ಸಂದರ್ಭದಲ್ಲಿ ದುಬ್ಯೆನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ...

Close