ಕಿಲ್ಪಾಡಿ : ಸ್ವಚ್ಚತಾ ಕಾರ್ಯಾಗಾರ

ಕಿನ್ನಿಗೋಳಿ: ಮನೆ ಮನಸ್ಸಿನಿಂದ ಸ್ವಚ್ಚತೆ ಬಗ್ಗೆ ಅರಿವು ಮೂಡಬೇಕು. ಜನರು ಸ್ವಯಂ ಪ್ರೇರಿತರಾಗಿ ಸ್ವಚ್ಚತಾ ಅಂದೋಲನದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಕಿಲ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಧ್ಯಕ್ಷ ಕೆನ್ಯೂಟ್ ಅರಾಹ್ನ ಹೇಳಿದರು.
ಕೆಂಚನಕೆರೆ ಕಿಲ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆದ ಸ್ವಚ್ಚತಾ
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಒಕ್ಕೂಟದ ವಿಸ್ತರಣಾಧಿಕಾರಿ ದೇವರಾಜ್ ಸ್ವಚ್ಚತೆ, ಆರೋಗ್ಯ ಹಾಗು ಪರಿಸರ ಕಾಳಜಿಯ ಬಗ್ಗೆ ಉಪಯುಕ್ತ ಮಾಹಿತಿ ನೀಡಿ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಸಂಘದ ಉಪಾಧ್ಯಕ್ಷ ಮುರಳೀದರ ಭಂಡಾರಿ, ನಿರ್ದೇಶಕರಾದ ವಾಲ್ಟರ್ ಫೆರಾವೊ, ಸರೋಜಿನಿ ಶೆಟ್ಟಿ, ಶೇಖರ ಪೂಜಾರಿ, ಉಪೇಂದ್ರ ಆಚಾರ್ಯ ಕೆರೆಕಾಡು, ಸದಸ್ಯರಾದ ಅಪ್ಪಿ ಕೆರೆಕಾಡು, ಜಯಕುಮಾರ್ ಕುಬೆವೂರು, ವಸಂತ್ ಕಾರ್ನಾಡ್, ಗಂಗಾಧರ ಶೆಟ್ಟಿ ಪುನರೂರು, ಪ್ರವೀಣ್ ಪುನರೂರು, ಭಾಸ್ಕರ ಶೆಟ್ಟಿ, ದೀಕ್ಷಿತ್ ಕುಬೆವೂರು, ಸುಪ್ರಭಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಮಾಧುರಿ ಬಿ. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-01011906

Comments

comments

Comments are closed.

Read previous post:
Kinnigoli-01011905
ಕೆಂಚನಕರೆ: ಮನೆ ಹಸ್ತಾಂತರ

ಕಿನ್ನಿಗೋಳಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಸತಿ ಯೋಜನೆಯಡಿಯಲ್ಲಿ ಕೆಂಚನಕರೆ ಅಂಗರಗುಡ್ಡೆಯಲ್ಲಿ ರಘುರಾಮ ಶೆಟ್ಟಿ ಅವರಿಗೆ ಹೊಸ ಮನೆ ನಿರ್ಮಾಣಕ್ಕೆ ನೀಡಲಾದ ಸಹಾಯಧನದಿಂದ ನಿರ್ಮಿಸಲಾದ ಮೊದಲ ನೂತನ...

Close