ಕಿನ್ನಿಗೋಳಿ: ಸಂಘಟನಾ ಶಕ್ತಿ ಹಾಗು ಸೇವಾ ಮನೋಭಾವನೆಯಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಯಶೋಧರ ಸಾಲ್ಯಾನ್ ಹೇಳಿದರು.
ಫೇಮಸ್ ಯೂತ್ ಕ್ಲಬ್ (ರಿ) 10ನೇ ತೋಕೂರು ಇದರ 31ನೇ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪುರಸ್ಕೃತ ಸೀತಾರಾಮ್ ಕುಮಾರ್ ಕಟೀಲು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾನಿಲ್, ಉಚಿತ ಆಂಬುಲೆನ್ಸ್ ಸೇವೆಯನ್ನು ನೀಡುತ್ತಿರುವ ಪೂಜಾ ಫ್ರೆಂಡ್ಸ್ ಹಳೆಯಂಗಡಿ ಇದರ ಮಾಲೀಕ ಜೈ ಕ್ರಷ್ಣ ಕೋಟ್ಯಾನ್, ಸ್ಯಾಕ್ಸೊಫೋನ್ ವಾದನದ ಪ್ರತಿಭೆ ಓಂಕಾರೇಶ್ವರಿ ನಗರದ ಕುಮಾರಿ ವೀಣಾ, ವಕೀಲ ಹಾಗೂ ತಾಲೂಕು ಯುವ ಜನ ಒಕ್ಕೂಟ, ಮಂಗಳೂರು ಇದರ ಅಧ್ಯಕ್ಷ ಟಿ. ಗಿರೀಶ್ ಶೆಟ್ಟಿ ಅವರ ಸಾಧನೆ ಮತ್ತು ಸೇವೆಗಾಗಿ ಸನ್ಮಾನಿಸಲಾಯಿತು.
ಕುಮಾರಿ ಗೌತಮಿ ಡಿ. ಶೆಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುಜೀತ್, ಪಕ್ಷಿಕೆರೆ ಚೇತನ್, ಸಾಕ್ಷಿ, ಭಾಸ್ಕರ ಪದಕಣ್ಣಾಯ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯ ನೀಡಲಾಯಿತು.
ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಗುರುರಾಜ ಎಸ್. ಪೂಜಾರಿ, ಅಧ್ಯಕ್ಷ ಸುಧೀರ್ ಎಂ. ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಮೋಹನ್ ದಾಸ್ ದೇವಾಡಿಗ ಸ್ವಾಗತಿಸಿ, ಶರತ್ ಆಚಾರ್ಯ ವಾರ್ಷಿಕ ವರದಿ ವಾಚಿಸಿದರು. ಭಾಸ್ಕರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.