ಧಾರ್ಮಿಕತೆಯಿಂದ ಸಮಾಜ ಸಂಘಟನೆ

ಕಿನ್ನಿಗೋಳಿ: ಧಾರ್ಮಿಕತೆಯಿಂದ ಸಮಾಜವನ್ನು ಸಂಘಟಿಸಬಹುದು ಎಂಬುದನ್ನು ಪದ್ಮಶಾಲಿ ಸಮಾಜ ಸಾಧಿಸಿ ತೋರಿಸಿದೆ. ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಿದಲ್ಲಿ ಸಮಾಜವು ಬೆಳೆಯುವ ಸಂಕೇತವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಮಾಜಿ ಅಧ್ಯಕ್ಷ ಪುರಂದರ ಡಿ. ಶೆಟ್ಟಿಗಾರ್ ಹೇಳಿದರು.
ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಳದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ದೇವಳದ ವಠಾರದಲ್ಲಿ ಅನಾವರಣಗೊಳಿಸಿ ಮಾತನಾಡಿದರು.
ಕ್ಷೇತ್ರದ ತಂತ್ರಿಗಳಾದ ಶಿಬಿರೂರು ವೇ.ಮೂ. ವೇದವ್ಯಾಸ ತಂತ್ರಿಗಳು ಆಶೀರ್ವಚನ ನೀಡಿ ಪ್ರಾರ್ಥಿಸಿದರು.
ಆಶಾ ಪುರಂದರ ಶೆಟ್ಟಿಗಾರ್, ಪ್ರಧಾನ ಅರ್ಚಕ ಕೆ.ಎಂ.ಕೃಷ್ಣ ಭಟ್, ಗುರಿಕಾರರಾದ ರಾಮ ಗುರಿಕಾರ್, ಬಿ.ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್, ಅಪ್ಪು ಗುರಿಕಾರ್, ಲಕ್ಷ್ಮಣ ಗುರಿಕಾರ್, ಆಡಳಿತ ಮಂಡಳಿಯ ಅಧ್ಯಕ್ಷ ವೀರಪ್ಪ ಓ. ಶೆಟ್ಟಿಗಾರ್, ಉಪಾಧ್ಯಕ್ಷರಾದ ಹೆಚ್. ಶ್ರೀಧರ ಶೆಟ್ಟಿಗಾರ್, ಕೃಷ್ಣ ಎಸ್. ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಉಮಾನಾಥ ಜೆ. ಶೆಟ್ಟಿಗಾರ್, ಸಹ ಕಾರ್ಯದರ್ಶಿಗಳಾದ ಮೋಹನ್ ಶೆಟ್ಟಿಗಾರ್, ರಾಮಚಂದ್ರ ಶೆಟ್ಟಿಗಾರ್, ವಾಮನ ಶೆಟ್ಟಿಗಾರ್, ಡಿ.ಹರಿಶ್ಚಂದ್ರ ಶೆಟ್ಟಿಗಾರ್, ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಶಂಕರ್ ಶೆಟ್ಟಿಗಾರ್ ಸ್ವಾಗತಿಸಿದರು, ಮಹಿಳಾ ವೇದಿಕೆಯ ಅಧ್ಯಕ್ಷೆ ವಿಪುಲ ಡಿ. ಶೆಟ್ಟಿಗಾರ್ ವಂದಿಸಿದರು.

Kinnigoli-04011902

Comments

comments

Comments are closed.

Read previous post:
Kinnigoli-04011901
ಫೇಮಸ್ ಯೂತ್ ಕ್ಲಬ್ (ರಿ) ವಾರ್ಷಿಕೋತ್ಸವ

ಕಿನ್ನಿಗೋಳಿ: ಸಂಘಟನಾ ಶಕ್ತಿ ಹಾಗು ಸೇವಾ ಮನೋಭಾವನೆಯಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಯಶೋಧರ ಸಾಲ್ಯಾನ್ ಹೇಳಿದರು. ಫೇಮಸ್ ಯೂತ್ ಕ್ಲಬ್...

Close