ಮೂಲ್ಕಿ 96 ಫಲಾನುಭವಿಗಳಿಗೆ ಹಕ್ಕುಪತ್ರ

ಮೂಲ್ಕಿ: ಮೂಲ್ಕಿ ಮತ್ತು ಮೂಡಬಿದಿರೆ ಕ್ಷೇತ್ರ ವ್ಯಾಪ್ತಿಯಲ್ಲಿ 4 ಸಾವಿರಕ್ಕೂ ಅಧಿಕ ಹಕ್ಕು ಪತ್ರ ವಿತರಿಸಿ ಬಡ ಜನರಿಗೆ ಸರಕಾರದ ಸವಲತ್ತುಗಳು ಶೀಘ್ರ ಲಭ್ಯವಾಗುವಂತೆ ಮಾಡಲಾಗಿದ್ದು ಇನ್ನುಳಿದ ಅರ್ಹ ಫಲಾನುಭವಿಗಳ ಹಕ್ಕುಪತ್ರ ಶೀಘ್ರ ವಿತರಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿ ನಪಂ ಸಮುದಾಯ ಭವನದಲ್ಲಿ ಶನಿವಾರ ನಗರ ವ್ಯಾಪ್ತಿಯ 96 ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದದವರ ಪೈಕಿ ಶೇ.90 ರಷ್ಟು ಮಂದಿಗೆ ಹಕ್ಕು ಪತ್ರ ನೀಡಲಾಗಿದೆ. ಹಿಂದೆ ಚುಣಾವಣೆಯ ಹಿನ್ನಲೆಯಲ್ಲಿ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿತ್ತು ಜನರಿಗೆ ಸಿಗಬೇಕಾದ ಸರಕಾರಿ ಸವಲತ್ತುಗಳು ಕ್ಲಪ್ತ ಸಮಯದಲ್ಲಿ ದೊರಕಿದರೆ ಮಾತ್ರ ಪ್ರಯೋಜನ.ಈ ಹಿನ್ನೆಲೆಯಲ್ಲಿ ಶಾಸಕನಾದ ತಕ್ಷಣ ಎಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿ ಸವಲತ್ತುಗಳನ್ನು ಅತೀ ಶೀಘ್ರ ದೊರಕಿಸಿಕೊಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿದ್ದಾರೆ ಅವರೆಲ್ಲರಿಗೂ ಅಭಿನಂದನೆಗಳು ಎಂದರು.
ನಪಂ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ,ಸರ್ವರಿಗೂ ಸ್ವಂತ ಸೂರನ್ನು ನೀಡಬೇಕೆನ್ನುವ ಉದ್ದೇಶದಿಂದ ಮೂಲ್ಕಿ ನಪಂ ವ್ಯಾಪ್ತಿಯಲ್ಲಿ ಎಲ್ಲಾ ಸದಸ್ಯರು ಸ್ಪಂದಿಸಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸುಮಾರು 545 ಹಕ್ಕುಪತ್ರಗಳನ್ನು ನೀಡಲಾಗಿದೆ.ಹಕ್ಕುಪತ್ರ ದೊರಕಿದವರು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ನಪಂ ಕಛೇರಿಗೆ ಬಂದಲ್ಲಿ ವಾರದೊಳಗೆ ಖಾತಾ ವಿತರಿಸಲಾಗುವುದು.ಅದೇ ರೀತಿ ಮನೆ ಕಟ್ಟುವವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಅನುದಾನ ದೊರಕಿಸಿಕೊಡಲು ಸೂಕ್ತವಾಗಿ ಸ್ಪಂದಿಸಲಾಗುವುದು.ಅದೇ ರೀತಿ ಕಡಿಮೆ ಬಡ್ಡಿ ದರದ ಸಾಲ ಒದಗಿಸಿಕೊಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಮೂಲ್ಕಿ ವಿಶೇಷ ತಹಶೀಲ್ದಾರ್ ಪ್ರಸ್ತಾವಿಕ ಮಾತನಾಡಿ,ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಹಕ್ಕುಪತ್ರಕ್ಕಾಗಿ ಈವರೆಗೆ 733 ಅರ್ಜಿಗಳು ಬಂದಿದ್ದು,ಈ ಪೈಕಿ 545 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ.ಉಳಿದ ಅರ್ಜಿಗಳಲ್ಲಿ ಕೆಲವರು ಎರಡು ಕಡೆ ಅರ್ಜಿ ಸಲ್ಲಿಸಿದ್ದಾರೆ ಅಂತವರನ್ನು ಬಿಟ್ಟು ತಾಂತ್ರಿಕ ತೊಂದರೆಗಳಿದ್ದ್ದ ಕೆಲವನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.ಇದೇ ರೀತಿ ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ಸಿಗಬೇಕಾದ ಎಲ್ಲಾ ಸರಕಾರಿ ಸೌಲಭ್ಯಗಳನ್ನು ಶೀಘ್ರವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ನಪಂ ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್,ಸ್ಥಾಯೀ ಸಮಿತಿಯ ಅಧ್ಯಕ್ಷ ಶೈಲೇಶ್ ಕುಮಾರ್,ಸದಸ್ಯರಾದ ಪುತ್ತುಬಾವ,ಪುರುಷೋತ್ತಮ ರಾವ್,ಉಮೇಶ್ ಮಾನಂಪಾಡಿ,ಹಸನ್‌ಬಶೀರ್ ಕುಳಾಯಿ,ಶಂಕರವ್ವ ಉಪಸ್ಥಿತರಿದ್ದರು.
ಮೂಲ್ಕಿ ನಪಂ ಮುಖ್ಯಾಧಿಕಾರಿ ಇಂದು ಎಮ್.ಸ್ವಾಗತಿಸಿದರು.ಗ್ರಾಮ ಕರಣಿಕ ಪ್ರದೀಪ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.ಕಂದಾಯ ನಿರೀಕ್ಷಕ ದಿಲೀಪ್ ರೋಡ್ಕರ್ ವಂದಿಸಿದರು.

Mulki-05011901

Comments

comments

Comments are closed.

Read previous post:
Kinnigoli-04011904
ಶ್ರೀ ಲಲಿತಾ ಸಹಸ್ರ ನಾಮಾರ್ಚನೆ

ಕಿನ್ನಿಗೋಳಿ : ಸಸಿಹಿತ್ಲು ಶ್ರೀ ಭಗವತೀ ದೇವಳದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಲಲಿತಾ ಸಹಸ್ರ ನಾಮಾರ್ಚನೆ ದೇವಳದ ವಠಾರದಲ್ಲಿ ನಡೆಯಿತು.  

Close