ಪುನರೂರು ಗುರುಬ್ರಹ್ಮ ಫ್ರೆಂಡ್ಸ್ ದಶಮಾನೋತ್ಸವ

ಕಿನ್ನಿಗೋಳಿ: ಯುವಜನತೆ ದೇಶದ ಶಕ್ತಿ. ಯುವ ಜನತೆ ಮನಸ್ಸು ಮಾಡಿದಾಗ ಬೇಕಾದಾದ್ದನ್ನು ಸಾಧಿಸಬಹುದು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಪುನರೂರು ಗುರುಬ್ರಹ್ಮ ಫ್ರೆಂಡ್ಸ್ ಇದರ ದಶಮಾನೋತ್ಸವ ಹಾಗೂ ಶ್ರೀ ಬ್ರಹ್ಮಮುಗೇರ ದೈವಸ್ಥಾನದ ನೇಮದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ಪಟೇಲ್ ವಾಸುದೇವರಾವ್ ಪುನರೂರು ಮಾತನಾಡಿ ಹತ್ತು ವರ್ಷಗಳಲ್ಲಿ ಅನೇಕ ಸಾಮಾಜಿಕ ಧಾರ್ಮಿಕ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಗುರು ಬ್ರಹ್ಮ ಪ್ರೆಂಡ್ಸ್ ಮಾದರಿ ಸಂಸ್ಥೆಯಾಗಿ ಬೆಳೆದಿದೆ, ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ ಆದರೆ ಅದನ್ನು ಮುಂದುವರಿಕೊಂಡು ಹೋಗುವುದು ಕಷ್ಟದ ಕೆಲಸ ಆದರೆ ಈ ಸಂಸ್ಥೆ ನಿರಂತರ ಒಂದಲ್ಲ ಒಂದು ಕಾರ್ಯಗಳನ್ನು ಮಾಡುತ್ತ ಸಕ್ರೀಯವಾಗಿದೆ ಎಂದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಕಾರ್ಯಕ್ರಮ ಉದ್ಘಟಿಸಿದರು.
ಈ ಸಂದರ್ಭ ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ವಿಶ್ವನಾಥ ರಾವ್ ಪುನರೂರು ಅವರನ್ನು ಸನ್ಮಾನಿಸಲಾಯಿತು.
ದ.ಕ. ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ, ಸದಸ್ಯ ದಿವಾಕರ ಕರ್ಕೇರ, ಮುಲ್ಕಿ ಮೂಡಬಿದಿರೆ ಬಿಜೆಪಿ ಮಂಡಲಾಧ್ಯಕ್ಷ ಈಶ್ವರ್ ಕಟೀಲು, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲು, ಕಿನ್ನಿಗೋಳಿ ಪಂಚಾಯಿತಿ ಸದಸ್ಯ ರವೀಂದ್ರ ದೇವಾಡಿಗ, ಉದ್ಯಮಿ ಸ್ಟೇನಿ ಪಿಂಟೋ, ರಮೇಶ್ ಸಾಲಿಯಾನ್, ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪುನರೂರು ಮತ್ತಿತರರು ಉಪಸ್ಥಿತರಿದ್ದರು. ನಿಶಾಂತ್ ಸ್ವಾಗತಿಸಿ, ಚೇತನ್‌ಕುಮಾರ್ ಶೆಟ್ಟಿಗಾರ್ ವಂದಿಸಿದರು. ದುರ್ಗಾಪ್ರಸಾದ್ ಕಟೀಲು ಕಾರ್ಯಕ್ರಮ ನಿರೂಪಿಸಿದರು.

Kinnigoli-07011904

Comments

comments

Comments are closed.

Read previous post:
Kinnigoli-07011903
ಜನರ ಆಶೋತ್ತರಗಳಿಗೆ ಸ್ಪಂದನೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ಜನರ ಆಶೋತ್ತರಗಳಿಗೆ ಸ್ಪಂದನೆಗಳಿಗೆ ಪ್ರಥಮ ಆದ್ಯತೆ ತನ್ನದು, ಮೂಲಭೂತ ಸೌಕರ್ಯದಲ್ಲಿ ರಸ್ತೆಯ ಅಭಿವೃದ್ಧಿಯನ್ನು ಆರಂಭಿಕವಾಗಿ ಮಾಡಿ ಉಳಿದ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು...

Close