ತೋಕೂರು : ಉಚಿತ ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಸೇವೆ ಎಂಬ ಧ್ಯೇಯವನ್ನು ಸಂಘ ಸಂಸ್ಥೆಗಳು ಅಳವಡಿಸಿದಲ್ಲಿ ಮಾತ್ರ ಜನಉಪಯೋಗಿ ಕಾರ್ಯಕ್ರಮಗಳನ್ನು ನೀಡಬಹುದು ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ಮಂಗಳೂರು ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಈಶ್ವರಾಂಭ ಟ್ರಸ್ಟ್, ಹಳೆಯಂಗಡಿ ಪೂಜಾ ಫ್ರೆಂಡ್ಸ್, ತೋಕೂರು ಕುಲಾಲ ಜವನೆರ್, ಎಸ್‌ಕೋಡಿ ಶ್ರೀ ದೇವಿ ಮಹಿಳಾ ಮಂಡಲ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಹಾಗೂ ದೇರಳಕಟ್ಟೆ ಯೆನೆಪೋಯ ದಂತ ವೈದ್ಯರ ಸಹಕಾರದಲ್ಲಿ ಭಾನುವಾರ ಕ್ಲಬ್‌ನ ಸಭಾಂಗಣದಲ್ಲಿ ನಡೆದ ಬೃಹತ್ ಉಚಿತ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದರು.
ಚೇಳ್ಯಾರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯಾನಂದ ಎನ್. ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ರಕ್ತದಾನ ಶಿಬಿರ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ದಂತ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದರು.
ಪಡುಪಣಂಬೂರು ಪಂಚಾಯಿತಿ ಸದಸ್ಯರಾದ ಲೀಲಾ ಬಂಜನ್, ಸಂತೋಷ್ ಕುಮಾರ್, ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಕಾರ್ಯದರ್ಶಿ ಸಂತೋಷ್‌ಕುಮಾರ್ ದೇವಾಡಿಗ, ಸುರೇಶ್ ಶೆಟ್ಟಿ, ಪೂಜಾ ಫ್ರೇಂಡ್ಸ್‌ನ ಅಧ್ಯಕ್ಷ ಮಿಥುನ್ ಸುವರ್ಣ, ಕುಲಾಲ ಜವನೆರ್‌ನ ಅಧ್ಯಕ್ಷ ಉಮೇಶ್ ಬಂಗೇರ, ಶ್ರೀ ದೇವಿ ಮಹಿಳಾ ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್, ಕೆ.ಎಂ.ಸಿ ಯ ವೈದ್ಯರಾದ ಡಾ.ತಿಷ್ಯ, ಸತ್ಯ ಸಾಯಿ ಸೇವಾ ಸಮಿತಿಯ ಸುರೇಶ್ ಬೈಂದೂರು, ಯೆನಪೋಯ ಆಸ್ಪತ್ರೆಯ ಪಿಆರ್‌ಓ ಭರತ್ ಕುಮಾರ್, ದಂತ ವೈದ್ಯರಾದ ಡಾ.ಇಮ್ರಾನ್ ಉಪಸ್ಥಿತರಿದ್ದರು.
ಶಿಬಿರದಲ್ಲಿ 32 ಮಂದಿ ರಕ್ತ ದಾನ ಮಾಡಿದರು, 53 ಮಂದಿ ಕಣ್ಣಿನ ಚಿಕಿತ್ಸೆಯಲ್ಲಿ ಕನ್ನಡಕ ಪಡೆದರು. 42 ಮಂದಿ ದಂತ ಚಿಕತ್ಸೆ ಪಡೆದರು, 210 ಮಂದಿ ವೈದ್ಯಕೀಯ ತಪಾಸಣೆ ನಡೆಸಿದರು. 12 ಮಂದಿ ನೇತ್ರದಾನ ಪ್ರಕಟಿಸಿದರು.

Kinnigoli-07011905

Comments

comments

Comments are closed.

Read previous post:
Kinnigoli-07011904
ಪುನರೂರು ಗುರುಬ್ರಹ್ಮ ಫ್ರೆಂಡ್ಸ್ ದಶಮಾನೋತ್ಸವ

ಕಿನ್ನಿಗೋಳಿ: ಯುವಜನತೆ ದೇಶದ ಶಕ್ತಿ. ಯುವ ಜನತೆ ಮನಸ್ಸು ಮಾಡಿದಾಗ ಬೇಕಾದಾದ್ದನ್ನು ಸಾಧಿಸಬಹುದು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು ಪುನರೂರು ಗುರುಬ್ರಹ್ಮ ಫ್ರೆಂಡ್ಸ್ ಇದರ...

Close