ಜನರ ಆಶೋತ್ತರಗಳಿಗೆ ಸ್ಪಂದನೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ಜನರ ಆಶೋತ್ತರಗಳಿಗೆ ಸ್ಪಂದನೆಗಳಿಗೆ ಪ್ರಥಮ ಆದ್ಯತೆ ತನ್ನದು, ಮೂಲಭೂತ ಸೌಕರ್ಯದಲ್ಲಿ ರಸ್ತೆಯ ಅಭಿವೃದ್ಧಿಯನ್ನು ಆರಂಭಿಕವಾಗಿ ಮಾಡಿ ಉಳಿದ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರು ಶ್ರಿ ಸುಬ್ರಹ್ಮಣ್ಯ ದೇವಳದಿಂದ ಲೈಟ್‌ಹೌಸ್ ಸಂಪರ್ಕಿಸುವ ಡಾಮರೀಕರಣ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಮಾತನಾಡಿ ಕಳೆದ 30 ವರ್ಷದ ಹಿಂದೆ ಈ ರಸ್ತೆ ಡಾಮರೀಕರಣಗೊಂಡಿದ್ದು, ಆ ಬಳಿಕ ಹಲವು ಬಾರಿ ದುರಸ್ಥಿಯ ಹೆಸರಿನಲ್ಲಿ ಪ್ಯಾಚ್ ವರ್ಕ್ ನಡೆದಿತ್ತೇ ವಿನಹ ಶಾಶ್ವತ ಪರಿಹಾರ ಕಂಡಿರಲಿಲ್ಲ ಶಾಸಕರು ಸ್ಥಳೀಯರ ಮನವಿಗೆ ಸ್ಪಂದಿಸಿ 7.5 ಲಕ್ಷ ರೂ. ವೆಚ್ಚದಲ್ಲಿ ಡಾಮರೀಕರಣಗೊಳಿಸಿದ್ದಾರೆ ಎಂದರು.
ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯರಾದ ದಿವಾಕರ ಕರ್ಕೇರ, ಜೀವನ್ ಪ್ರಕಾಶ್ ಕಾಮೆರೊಟ್ಟು, ಶರತ್ ಕುಬೆವೂರು, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಸಂತೋಷ್‌ಕುಮಾರ್, ಹೇಮಂತ್ ಅಮೀನ್, ದಿನೇಶ್ ಕುಲಾಲ್, ಮಂಜುಳಾ, ಸಂಪಾವತಿ, ಪುಷ್ಪಾವತಿ, ವನಜಾ, ಉಮೇಶ್ ಪೂಜಾರಿ, ವಿನೋದ್ ಎಸ್. ಸಾಲ್ಯಾನ್, ಹಳೆಯಂಗಡಿ ಬಿಲ್ಲವ ಸಂಘದ ಗೌರವಾಧ್ಯಕ್ಷ ಗಣೇಶ್ ಜಿ.ಬಂಗೇರ, ತೋಕೂರು ಯುವಕ ಸಂಘದ ಗೋಪಾಲ ಭಂಡಾರಿ, ಪಿ.ಎಸ್.ಕೋಟ್ಯಾನ್, ಪಕ್ಷಿಕೆರೆ ಶ್ರಿ ವಿನಾಯಕ ಮಿತ್ರಮಂಡಳಿಯ ಸ್ಥಾಪಕಾಧ್ಯಕ್ಷ ರಾಜೇಶ್ ದಾಸ್, ಪಿಸಿಎ ಬ್ಯಾಂಕ್‌ನ ನಿರ್ದೇಶಕ ಹಿಮಕರ್ ಕದಿಕೆ, ಫೇಮಸ್ ಯೂತ್ ಕ್ಲಬ್‌ನ ಅಧ್ಯಕ್ಷ ಸುಽರ್ ಭಂಡಾರಿ, ಕೆರೆಕಾಡು ಪೂಪಾಡಿಕಟ್ಟೆ ಪೂಜೋತ್ಸವ ಸಮಿತಿಯ ಅಧ್ಯಕ್ಷ ಕರುಣಾಕರ್ ಬೆಳ್ಳಾಯರು, ಸಮಾಜ ಸೇವಕರಾದ ಸಂತೋಷ್ ಶೆಟ್ಟಿ, ಮನೋಜ್‌ಕುಮಾರ್, ಗ್ರಾಮಸ್ಥರಾದ ರಮಣಿ, ಯಶೋದಾ, ಲೋಹಿತ್ ತೋಕೂರು, ಕುಸುಮಾ, ಹರೀಶ್, ರತ್ನಾವತಿ, ಅನುಪಮಾ ಭಟ್, ಗುತ್ತಿಗೆದಾರ ಶ್ರೀಧರ್, ಇಂಜಿನಿಯರ್ ಪ್ರಶಾಂತ್‌ಕುಮಾರ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಪಡುಪಣಂಬೂರು ಗ್ರಾ.ಪಂ. ಪಿಡಿಒ ಅನಿತಾ ಕ್ಯಾಥರಿನ್ ಸ್ವಾಗತಿಸಿದರು, ಕಾರ್ಯದರ್ಶಿ ಲೋಕನಾಥ ಭಂಡಾರಿ ಪ್ರಸ್ತಾವನೆಗೈದರು, ಸಿಬ್ಬಂದಿಗಳಾದ ಅಭಿಜಿತ್ ವಂದಿಸಿದರು, ದಿನಕರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07011903

Comments

comments

Comments are closed.

Read previous post:
Kinnigoli-07011902
ಯುಕೋ ಬ್ಯಾಂಕ್ 78 ನೇ ವರ್ಷಾಚರಣೆ

ಕಿನ್ನಿಗೋಳಿ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದಾಗ ಸಂಸ್ಥೆ ಉತ್ತಮವಾಗಿ ಬೆಳೆಯಲು ಸಾಧ್ಯ. ಗ್ರಾಹಕರ ಪ್ರೋತ್ಸಾಹದಿಂದ ಯುಕೋ ಬ್ಯಾಂಕ್ ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಕಿನ್ನಿಗೋಳಿ ಯುಕೋ ಬ್ಯಾಂಕ್ ನ ಪ್ರಬಂಧಕ...

Close