ಕಿನ್ನಿಗೋಳಿ : ಟಿಪ್ಪರ್ ವಿದ್ಯುತ್ ಕಂಬಕ್ಕೆ ಡಿಕ್ಕಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ನಡುಗೋಡು ಕುದ್ಕೋಳಿ ಯಲ್ಲಿ ಟಿಪ್ಪರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು 12 ವಿದ್ಯುತ್ ಕಂಬಗಳಿಗೆ ಹಾನಿ ಆದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಪಕ್ಷಿಕೆರೆ ಕಡೆಯಿಂದ ಶಿಬರೂರು ಕಡೆಗೆ ಸಂಚರಿಸುತ್ತಿದ್ದ ಟಿಪ್ಪರ್ ಕುದ್ಕೋಳಿ ಬಳಿ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿ ಎಳೆಯಲ್ಪಟ್ಟು ೧೨ ಕಂಬಗಳು ಬಿದ್ದಿದೆ. ಈ ಸಂಧರ್ಭ ಸಮೀಪದಲ್ಲೇ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ವಾಹನ ಜಖಂಗೊಂಡಿದೆ, ಟಿಪ್ಪರ್ ಚಾಲಕ ಮತ್ತು ದ್ವಿಚಕ್ರ ವಾಹನ ಸವಾರ ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ. ತಡರಾತ್ರಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು ಮೆಸ್ಕಾಂ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯರು ರಸ್ತೆಯಲ್ಲಿ ಬಿದ್ದ ಕಂಬಗಳನ್ನು ತೆರವುಗೊಳಿಸಿದರು.

Kinnigoli-12011901

Comments

comments

Comments are closed.

Read previous post:
Kinnigoli-12011902
ಸಂಕಲಕರಿಯ ವಾಹನ ಅಪಘಾತ

ಕಿನ್ನಿಗೋಳಿ: ಬೊಲೇರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಗಡಿ ಪ್ರದೇಶ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕಲಕರಿಯ ಬಳಿಯ ಶಾಂಭವಿ ನದಿಗೆ ಬಿದ್ದ...

Close