ಜ. 23-28 ಕಟೀಲು ದೇವಳ ಅಷ್ಟಬಂಧ ಮತ್ತು ಸಾನಿಧ್ಯ ಕಲಶ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜನವರಿ 23 ರಿಂದ 28 ರವರೆಗೆ ಅಷ್ಟಬಂಧ ಮತ್ತು ಸಾನಿಧ್ಯ ಕಲಶ ನಡೆಯಲಿದೆ ಎಂದು ಕಟೀಲು ದೇವಳದ ಮೊಕ್ತೇಸರಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ, 2020 ರಲ್ಲಿ ದೇವಳದಲ್ಲಿ ಬ್ರಹ್ಮಕಲಶ ನಡೆಯಲಿದ್ದು ಅದಕ್ಕಿಂತ ಮುಂಚಿತವಾಗಿ ಈ ಬಾರಿ ಅಗತ್ಯ ಕೆಲಸಕಾರ್ಯಗಳು ನಡೆಯುತ್ತಿದೆ ದಾನಿಗಳ ನೆರವಿನಿಂದ ನೂತನ ಧ್ವಜಸ್ತಂಭ, ನಾಗದೇವರ ಗುಡಿ, , ರಕ್ತೇಶ್ವರೀ ಸನ್ನಿದಿ, ಶಾಸ್ತಾರ ಗುಡಿ, ಗರ್ಭಗುಡಿ ಮೇಲ್ಚಾವಣಿ ತಾಮ್ರಹೊದಿಕೆ, ತೀರ್ಥಮಂಟಪದ ನಾಸ್ತಿಕ ರಜತಕಲಶ, ರಕ್ತೆಶ್ವರೀ ಸನ್ನಿಧಿ ಜೀರ್ಣೋದ್ದಾರ, ದ್ವಜಸ್ತಂಭಕ್ಕೆ ತಾಮ್ರದ ಕೊಳವೆ ರಥಬೀದಿಯಲ್ಲಿರುವ ಅಶ್ವತ್ಥ ಕಟ್ಟೆಯ ನವೀಕರಣ ಮತ್ತಿತರ ಕೆಲಸಗಳು ನಡೆಯುತ್ತಿದೆ. ದೇವಳದ ಗರ್ಭಗುಡಿಯ ಮುಂಭಾಗದಲ್ಲಿನ 6 ದೊಡ್ದಗಾತ್ರದ ಕಂಬಗಳನ್ನು ತೆಗೆದಿದ್ದು ಇದರಿಂದ ದೇವಳದ ಒಳಭಾಗದಲ್ಲಿ ಭಕ್ತರಿಗೆ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನೋಡಲು ಅನುಕೂಲವಾಗಲಿದೆ. ಧ್ವಜಸ್ತಂಭ 2013 ರಂದು ದೇವಳಕ್ಕೆ ತಂದ ನಂತರ ದೀರ್ಘಬಾಳಿಕೆಗಾಗಿ ಎಳ್ಳೆಣ್ಣೆಯಲ್ಲಿ ಹಾಕಿ ಇಡಲಾಗಿದ್ದು ಇದೀಗ ಸ್ಥಾಪನೆಗೊಂಡಿದ್ದು ಜನವರಿ 25 ರಂದು ಪ್ರತಿಷ್ಟೆಗೊಳ್ಳಲಿದೆ. ದ್ವಜಸ್ತಂಭಕ್ಕೆ ತಾಮ್ರದ ಕೊಳವೆ ಹಾಕಿ ನಂತರ 50 ಕಿ.ಲೋ ಗಾಂ ಚಿನ್ನದಿಂದ ಲ್ಯಾಮೀನೆಶನ್ ಗೊಳ್ಳಲಿದೆ. ನೂತನ ಧ್ವಜಸ್ತಂಭ 42 ಅಡಿ ಉದ್ದ ಇದೆ. ಗಣಪತಿ ಗುಡಿಯ ಮುಂಭಾಗದಲ್ಲಿ ಭಕ್ತರಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಕಿಂಡಿಯನ್ನು ನಿರ್ಮಿಸಲಾಗಿದ್ದು ಚೌತಿ ಮುಂತಾದ ವಿಶೇಷ ದಿನಗಳಿಗೆ ತೆರೆಯುವಂತೆ ಬಾಗಿಲನ್ನು ಅಳವಡಿಸಲಾಗಿದೆ ಎಂದರು. ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಜನವರಿ 23 ರಂದು ಸಾಮೂಹಿಕ ಪ್ರಾರ್ಥನೆ, ತೋರಣ ಮೂಹೂರ್ತ, 108 ತೆಂಗಿನಕಾಯಿ ಗಣಯಾಗ ಮತ್ತಿತರರ ಧಾರ್ಮಿಕ ಕಾರ್ಯಕ್ರಮಗಳು 24 ರಂದುನಾಗ ಮತ್ತು ಬ್ರಹ್ಮ ಸನ್ನಿಧಿಯಲ್ಲಿ ಕಲಶಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು, 25 ರಂದು ಪೂರ್ವಾಹ್ನ 8.13ಕ್ಕೆ ಕುಂಭಲಗ್ನದಲ್ಲಿ ಶ್ರೀ ದೇವರಿಗೆ ಆಷ್ಟಬಂಧ ಲೇಪನ, ಗಣಪತಿ ಪುನಃ ಪ್ರತಿಷ್ಟೆ, ದ್ವಜಕಲಶಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು 27 ಮತ್ತು 28 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, 28 ರಂದು ಬೆಳಿಗ್ಗೆ ಗಣಪತಿ ದೇವರಿಗೆ ದ್ರವ್ಯಕಲಶಾಭಿಷೇಕ, ಪೂರ್ವಾಹ್ನ 9.30 ಕ್ಕೆ ಕುಂಭಲಗ್ನದಲ್ಲಿ ಶ್ರೀ ದೇವರಿಗೆ ಕಲಶಾಭಿಷೇಕ ನವೀಕೃತ ಅಶ್ವಥಕಟ್ಟೆಯ ಸಮರ್ಪಣೆ ಮಹಾಪೂಜೆ ಪಲ್ಲಪೂಜೆ ಸಾಯಂಕಾಲ ಶ್ರೀ ದೇವರಿಗೆ ರಂಗಪೂಜೆ ಸುವರ್ಣ ರಥೋತ್ಸವ, ಮಂತ್ರಾಕ್ಷತೆ ಒಕುಳಿ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ದೇವಳದ ಮುಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಬಿಪಿನ್ ಪ್ರಸಾದ್ ಕೊಡೆತ್ತೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು.

IMG_8578

Comments

comments

Comments are closed.

Read previous post:
Kinnigoli-21011906
ಮೆನ್ನಬೆಟ್ಟು ಗ್ರಾಮ ಸಭೆ ಮುಂದೂಡಿಕೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯನ್ನು ಗ್ರಾಮಸ್ಥರು 94 ಸಿಸಿ ಹಾಗೂ 9-11 ಇನ್ನೂ ಸಿಗದಿರುವ ಬಗ್ಗೆ ಹಾಗೂ ಮೇಲಾಧಿಕಾರಿಗಳು ಗ್ರಾಮ...

Close