ಮೆನ್ನಬೆಟ್ಟು ಗ್ರಾಮ ಸಭೆ ಮುಂದೂಡಿಕೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯನ್ನು ಗ್ರಾಮಸ್ಥರು 94 ಸಿಸಿ ಹಾಗೂ 9-11 ಇನ್ನೂ ಸಿಗದಿರುವ ಬಗ್ಗೆ ಹಾಗೂ ಮೇಲಾಧಿಕಾರಿಗಳು ಗ್ರಾಮ ಸಭೆಗೆ ಆಗಮಿಸದಿರುವ ಬಗ್ಗೆ ಆಕ್ರೋಶಗೊಂಡು ಹಾಗೂ ಜನಪ್ರತಿನಿಧಿಗಳು ಗ್ರಾಮ ಸಭೆ ಮುಂದೂಡಲು ಆಗ್ರಹಿಸಿದ ಕಾರಣ ಮೆನ್ನಬೆಟ್ಟು ಗ್ರಾಮ ಸಭೆ ಮುಂದೂಡಲ್ಪಟ್ಟಿತು.
ಗ್ರಾಮದ ಪಂಚಾಯಿತಿ ಸಭಾಭವನದಲ್ಲಿ ಗ್ರಾಮ ಸಭೆ ಪ್ರಾರಂಭವಾಗುವ ಮೊದಲೇ ಗ್ರಾಮಸ್ಥರು ಇಲಾಖಾ ಅಧಿಕಾರಿಗಳು ಎಲ್ಲಿದ್ದಾರೆ? ಕಾಟಾಚಾರಕ್ಕೆ ಸಭೆ ನಡೆಸುತ್ತೀರಾ, ಯಾವ ಇಲಾಖೆ ಅಧಿಕಾರಿ ಬಂದಿದ್ದಾರೆ, ಗ್ರಾಮದ ಸಮಸ್ಯೆ ಯಾರ ಮುಂದೆ ಹೇಳೋಣ, ಪರಿಹರಿಸುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
94 ಸಿಸಿ ವಾಸ್ತವ್ಯದ ಮನೆಗೆ ಹಕ್ಕುಪತ್ರ ಹಾಗೂ 9-11 ಬಗ್ಗೆ ವಿವರಿಸಿದ ಪಿಡಿಒ ರಮ್ಯಾ ಉತ್ತರಿಸಿ 507 ಅರ್ಜಿಗಳು ಬಂದಿದ್ದು 233 ಅರ್ಜಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. 274 ಅರ್ಜಿಗಳು ಬಾಕಿ ಉಳಿದಿವೆ. ಬಾಕಿ ಇರುವ ಅರ್ಜಿಗಳಲ್ಲಿ 135 ಅರ್ಜಿಗಳು ಕಂದಾಯ ನಿರೀಕ್ಷಕರ ಮೂಲಕ ತನಿಖೆಯಾಗಿದ್ದು 139 ತನಿಖೆಗಳು ಬಾಕಿ ಉಳಿದಿವೆ ಎಂದರು.
ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ನೋಡೆಲ್ ಅಧಿಕಾರಿ ಪ್ರದೀಪ್ ಡಿಸೋಜ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಮತ್ತಿತರರು ಉಪಸ್ಥಿತರಿದ್ದರು.

Kinnigoli-21011906

Comments

comments

Comments are closed.

Read previous post:
Kinnigoli-21011905
ಕಿನ್ನಿಗೋಳಿ : ಮಾಹಿತಿ ಕಾರ್ಯಗಾರ

ಕಿನ್ನಿಗೋಳಿ:ಪಂಚಾಯಿತಿ ಹಾಗು ಸರಕಾರಗಳಿಂದ ಸಿಗುವ ಸವಲತ್ತುಗಳನ್ನು ತಿಳಿ ಹೇಳುವ ಕಾರ್ಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದಿಂದ ಗಳಿಂದ ಕಾಲ ಕಾಲಕ್ಕೆ ಆಗಬೇಕು ಹಾಗಾದಾಗ ಗ್ರಾಮದ ಅಭ್ಯುಧ್ಯಯ ಸಾಧ್ಯ...

Close