ಕಿನ್ನಿಗೋಳಿ: ಕುಲಾಲ ಸಮುದಾಯದವರು ಶ್ರಮ ಜೀವಿಗಳು. ಜನರ ಸಹಕಾರದಿಂದ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿ ಜನರ ಏಳಿಗೆಗಾಗಿ ಶ್ರಮಿಸಬೇಕು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು
ಭಾನುವಾರ ಪಕ್ಷಿಕೆರೆಯಲ್ಲಿ ಸ್ವರ್ಣಕುಂಭ ವಿವಿದ್ದೋದ್ದೇಶ ಸಹಕಾರಿ ಸಂಘದ ನಾಲ್ಕನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಕುಲಾಲ ಸಂಘದ ಅಡಿಪಾಯದಲ್ಲಿ ಈ ಸಂಘ ಪ್ರಾರಂಭವಾದರೂ ಸಂಸ್ಥೆಯ ಬೆಳವಣಿಗೆಗೆ ಸರ್ವಧರ್ಮದವರ ಸಹಕಾರ ಅಗತ್ಯ ಎಂದರು.
ಸುರಗಿರಿ ದೇವಳದ ಪ್ರಧಾನ ಅರ್ಚಕ ವಿಶ್ವೇಶ್ ಭಟ್, ಪಕ್ಷಿಕೆರೆ ಚರ್ಚ್ ಧರ್ಮಗುರು ಮೆಲ್ವಿನ್ ನೊರೊನ್ಹಾ, ಪಕ್ಷಿಕೆರೆ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಯು ಮಹಮದ್ ಅಶೀರ್ವಚನಗೈದರು.
ಸಂಸ್ಥೆಯ ಅಧ್ಯಕ್ಷ ನಾಗೇಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನ ವಿನಯಕುಮಾರ್ ಸೂರಿಂಜೆ, ಸಹಕಾರ ಸಂಘಗಳ ಉಪನಿರ್ದೇಶಕ ಬಿ.ಕೆ.ಸಲೀಂ, ಸಹಾಯಕ ನಿಬಂಧಕ ಮಂಜುನಾಥ್, ಮುಂಬೈ ಜ್ಯೋತಿ ಕೋ ಅಪರೇಟ್ ವ್ ಸೊಸೈಟಿಯ ಗೌರವ ಕಾರ್ಯದರ್ಶಿ ದೇವದಾಸ್ ಕುಲಾಲ್, ಕುಳಾಯಿ ಕುಂಬಾರ ಗುಡಿ ಕೈಗಾರಿಕೆಯ ಸಂಘದ ನಿರ್ದೇಶಕ ಸುಂದರ ಸಾಲಿಯಾನ್, ಸಮಾಜ ಸೇವಕ ಬಾಲದಿತ್ಯ ಆಳ್ವ, ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಸುಧಾಕರ ಕುಲಾಲ್, ತೋಕೂರು ಕುಲಾಲ ಸಂಘದ ಅಧ್ಯಕ್ಷ ಲೀಲಾ ಬಂಜನ್, ಎಸ್ಕೋಡಿ ನಾರಾಯಣ ಗುರು ಸಂಘದ ಅಧ್ಯಕ್ಷ ಅಶೋಕ್ ಕರ್ಕೇರ, ಐಕಳ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಉಮೇಶ್ ಬಂಗೇರ, ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಸಾಗರಿಕಾ, ಉದ್ಯಮಿ ಅಬ್ದುಲ್ ಹಮೀದ್, ಕೋಡಿಕೆರೆ ಶಾಖಾ ವ್ಯವಸ್ಥಾಪಕ ರವಿರಾಜ್, ಸೂರಿಂಜೆಯ ಶಾಖೆಯ ಮಂಜುಳ, ಸುರತ್ಕಲ್ ಶಾಖೆಯ ವೈಶಾಲಿ, ಸಂಸ್ಥೆಯ ಉಪಾಧ್ಯಕ್ಷ ಮಾಧವ ಬಂಗೇರ, ನಿರ್ದೇಶಕರಾದ ಮುದ್ದು ಮೂಲ್ಯ, ಗಂಗಾಧರ ಬಂಜನ್, ತಿಮ್ಮಯ್ಯ ತೋಕೂರು, ಉಷಾ ಆರ್ ಬಂಗೇರ, ಮೋಹನ್ ಐ ಮೂಲ್ಯ, ಕೆ.ಭೋಜ ಬಂಗೇರ, ಮುರಳೀಧರ್ ಕುಲಾಲ್ ರತ್ನಾವತಿ ಚೊಕ್ಕಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ನಾಗೇಶ್ ಕುಲಾಲ್ ಸ್ವಾಗತಿಸಿ, ಸಂಜೀವ ಮೂಲ್ಯ ವಂದಿಸಿದರು. ರವೀಂದ್ರ ಕುಮಾರ್ ಮತ್ತು ತೇಜಸ್ವಿ ಕಾರ್ಯಕ್ರಮ ನಿರೂಪಿಸಿದರು.