ಪೊಂಪೈ ಕಾಲೇಜು : ಯುವ ಸುವರ್ಣ ಸಂಭ್ರಮ

ಕಿನ್ನಿಗೋಳಿ: ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿ ಸನ್ನಡತೆಯ ಜೀವನ ನಡೆಸಿ ಉತ್ತಮವಾದ ಬದುಕು ರೂಪಿಸಬೇಕು ಎಂದು ಕಿನ್ನಿಗೋಳಿ ವಲಯ ಬಸ್ ಚಾಲಕ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಹೇಳಿದರು.
ಐಕಳ ಪೊಂಪೈ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಪೊಂಪೈ ಸಭಾಂಗಣದಲ್ಲಿ ಹಮ್ಮಿಕೊಂಡ ಯುವ ಸುವರ್ಣ ಸಂಭ್ರಮ ಪಾಕ್ಷಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಹೊಳ್ಳ ಮಾತನಾಡಿ ಸ್ವಾಮಿ ವಿವೇಕಾನಂದರ ಉದಾತ್ತ ಆಲೋಚನೆಗಳು ಯಾವುದೇ ಒಂದು ಧರ್ಮದ ಅಂಗವಲ್ಲ ಬದಲಾಗಿ ಸಮಸ್ತ ಯುವಜನತೆಯ ಆಸ್ತಿ ಎಂದರು.
ಈ ಸಂದರ್ಭ ಯುವ ಸುವರ್ಣ ಸಂಭ್ರಮ ಪಾಕ್ಷಿಕ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ಸ್ಫರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾಲೇಜು ನ್ಯಾಕ್ ಘಟಕದ ಸಂಚಾಲಕ ಪ್ರೊ. ಯೋಗಿಂದ್ರ ಬಿ., ರಾಷ್ಟ್ರೀಯ ಸೇವಾ ಯೋಜನೆಯ ನಾಯಕರಾದ ಶ್ರವಣ್ ಶೆಟ್ಟಿ, ಕ್ಲೀಟ ಫೆರ್ನಾಂಡಿಸ್ ಮತ್ತು ಯೂತ್ ರೆಡ್ ಕ್ರಾಸ್‌ನ ನಾಯಕಿ ತ್ರಿಶ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಕಾರ್ಯಕ್ರಮಾಧಿಕಾರಿ ಡಾ.ವಿಕ್ಟರ್ ವಾಜ್ ಇ. ಸ್ವಾಗತಿಸಿ, ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿ ಸಿಲ್ವಿಯ ಪಾಯ್ಸ್ ವಂದಿಸಿದರು. ಬಹುಮಾನಿತರ ಪಟ್ಟಿಯನ್ನು ಪೃಥ್ವಿ ವಾಚಿಸಿದರು. ಯೂತ್ ರೆಡ್ ಕ್ರಾಸ್‌ನ ಸ್ವಯಂಸೇವಕಿ ರೆಹಮತ್ ಬಾನು, ಕಾರ್ಯಕ್ರಮ ನಿರೂಪಿಸಿದರು.

Kinnigoli-22011901

Comments

comments

Comments are closed.

Read previous post:
Kinnigoli-21011906
ಮೆನ್ನಬೆಟ್ಟು ಗ್ರಾಮ ಸಭೆ ಮುಂದೂಡಿಕೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯನ್ನು ಗ್ರಾಮಸ್ಥರು 94 ಸಿಸಿ ಹಾಗೂ 9-11 ಇನ್ನೂ ಸಿಗದಿರುವ ಬಗ್ಗೆ ಹಾಗೂ ಮೇಲಾಧಿಕಾರಿಗಳು ಗ್ರಾಮ...

Close