ಐಕಳಬಾವ ಕಾಂತಾಬಾರೆ- ಬೂದಾಬಾರೆ ಕಂಬಳ

ಕಿನ್ನಿಗೋಳಿ: ಕಂಬಳವು ಕರಾವಳಿಯ ಜನಪದ ಹಿನ್ನೆಲೆಯನ್ನು ಹೊಂದಿರುವ ಕ್ರೀಡೆ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಮಹತ್ವವನ್ನು ಹೊಂದಿದೆ ಎಂದು ಅದಾನಿ ಸಂಸ್ಥೆಯ  ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು.
ಐಕಳ ಭಾವ ಕಾಂತಾಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಕಂಬಳದ ಕರೆಗಳನ್ನು ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕ ಜೋತಿಷ್ಯ ಮತ್ತು ಅಂತರಾಷ್ಟ್ರೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮಿಜಿ ಮಾತನಾಡಿ ಕಂಬಳಗಳು ಆಧುನಿಕರಣ ಹೊಂದಿದ್ದು ಅಭಿನಂದನೀಯ ಆದರೆ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು ಎಂದರು.
ವೈಜ್ಞಾನಿಕ ಜೋತಿಷ್ಯ ಮತ್ತು ಅಂತರಾಷ್ಟ್ರೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮಿಜಿ ಜೋಡು ಕರೆಗೆ ಪ್ರಸಾದ ಹಾಕುವ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು.
ಗಣೇಶ್ ಭಟ್ ಏಳಿಂಜೆ ಮತ್ತು ವರುಣ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭ ಅಂತರಾಷ್ಟ್ರೀಯ ವೈಜ್ಞಾನಿಕ ಜೋತಿಷ್ಯ ಮತ್ತು ಅಂತರಾಷ್ಟ್ರೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮಿಜಿ, ರಜನಿ ಚಂದ್ರ ಶೇಖರ ಸ್ವಾಮಿಜಿ, ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು, ಮುಂಬಯಿ ಉದ್ಯಮಿ ಕೃಷ್ಣ ಶೆಟ್ಟಿ ದಂಪತಿಯರನ್ನು ಕಂಬಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಐಕಳ ಬಾವ ಯಜಮಾನರಾದ ದೋಗಣ್ಣ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ , ಯುಗಪುರುಷ ಪ್ರಧನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಂಬಳ ಸಮಿತಿಯ ಕಾರ್ಯದರ್ಶ ಚಿತ್ತರಂಜನ್ ಭಂಡಾರಿ, ಶಾರಾದಮ್ಮ, ಜ್ಯೊತಿಷಿ ವಿಶ್ವನಾಥ ಭಟ್, ಉಷಾ ವಿಶ್ವನಾಥ ಭಟ್, ಶ್ರೀಧರ್ ಮಡಿಗೇರಿ, ಅದಾನಿ ಸಂಸ್ಥೆಯ ಗಿರೀಶ್ ಉಡುಪ, ರವಿ ಜಿರೆ, ಐಕಳ ಕಂಬಳ ಸಮಿತಿಯ ಸಂಚಾಲಕ ಮುರಳೀಧರ ಶೆಟ್ಟಿ, ಕೃಷ್ಣ ಮಾರ್ಲ, ಯೋಗೀಶ್ ರಾವ್, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ಸದಾನಂದ ಕುಂದರ್, ಆನಂದ ಗೌಡ, ಶಶಿಧರ ಐಕಳ, ಹರೀಶ್ ಶೆಟ್ಟಿ ತಾಮಣಿಗುತ್ತು, ಗಣನಾಥ ಜೆ ಶೆಟ್ಟಿ ಐಕಳ ಬಾವ, ತಿಲಕ್ ರಾಜ್ ಬಲ್ಲಾಳ್ ಐಕಳ ಬಾವ, ಪುರಂಧರ ಶೆಟ್ಟಿ ಐಕಳಬಾವ, ವೇಣುಗೋಪಾಲ ಶೆಟ್ಟಿ ಐಕಳ ಬಾವ, ಸ್ವರಾಜ್ ಶೆಟ್ಟಿ, ಮನಮೋಹನ ಕೊಂಡೆ ಐಕಳ ಬಾವ, ಸಚಿನ್ ಕೆ ಶೆಟ್ಟಿ ಐಕಳ ಬಾವ, ಸಚಿನ್ ಶೆಟ್ಟಿ ಐಕಳ ಬಾವ, ಜಯಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮುಂಬೈ ಸಮಿತಿಯ ಅಧ್ಯಕ್ಷ ಕುಶಲ್ ಭಂಡಾರಿ ಐಕಳ ಬಾವ ಸ್ವಾಗತಿಸಿದರು. ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಪ್ರಸ್ತಾವೆನೆಗೈದರು. ಮುಂಬಯಿ ಸಮಿತಿಯ ಗಣನಾಥ ಶೆಟ್ಟಿ ಐಕಳ ಬಾವ ವಂದಿಸಿದರು, ಶ್ರೀಶ ಸರಾಫ್ ಐಕಳ ಕಾರ್ಯಕ್ರಮ ನಿರೂಪಿಸಿದರು.

Kinnigoli-26011902 Kinnigoli-26011903 Kinnigoli-26011904 Kinnigoli-26011905 Kinnigoli-26011906 Kinnigoli-26011907 Kinnigoli-26011908 Kinnigoli-26011909 Kinnigoli-260119010 Kinnigoli-260119011 Kinnigoli-260119012 Kinnigoli-260119013

Comments

comments

Comments are closed.