ದೇಶ ಸೇವೆ ಮಾಡುವ ಹೆಮ್ಮೆ ನಮ್ಮದಾಗಬೇಕು

ಕಿನ್ನಿಗೋಳಿ: ಸೈನ್ಯಕ್ಕೆ ಸೇರಲು ಮುಂದಾಗುವವರನ್ನು ಪ್ರೋತ್ಸಾಹಿಸಬೇಕು. ದೇಶ ಸೇವೆ ಮಾಡುವ ಹೆಮ್ಮೆ ನಮ್ಮದಾಗಬೇಕು ಎಂದು ನಿವೃತ್ತ ಸೈನಿಕ, ಮುಳುಗುತಜ್ಞ ಕಮಲಾಕ್ಷ ಬಂಗೇರ ಹೇಳಿದರು.
ಕೊಡೆತ್ತೂರು ಕೋರ‍್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಂದರ್ಭ ಆದರ್ಶ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ ನಲ್ಕೆ, ಶಿಕ್ಷಣದಲ್ಲಿ ಸಾಧನೆಗೈದ ಸ್ವಾತಿ ಶೆಟ್ಟಿ, ಕ್ರೀಡಾ ಸಾಧಕಿ ಭವ್ಯಶ್ರೀ ಪೂಜಾರಿ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪುರುಷೋತ್ತಮ ಶೆಟ್ಟಿ, ಗಣೇಶ ಶೆಟ್ಟಿ, ಸುಚೀಂದ್ರ ಶೆಟ್ಟಿ, ಪ್ರಶಾಂತ ಶೆಟ್ಟಿ, ಕೆ. ವಿ. ಶೆಟ್ಟಿ, ಜಯರಾಮ ಮುಕ್ಕಾಲ್ದಿ, ಗುತ್ತಿನಾರ್ ಸಂಜೀವ ಶೆಟ್ಟಿ, ಆದರ್ಶ ಬಳಗದ ಸೂರಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜಿತೇಂದ್ರ ಶೆಟ್ಟಿ ಸ್ವಾಗತಿಸಿದರು. ನಾಗರಾಜ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಪ್ರತೀಕ್ ಬಹುಮಾನ ಪಟ್ಟಿ ವಾಚಿಸಿದರು. ತಾರಾನಾಥ ಶೆಟ್ಟಿ ವಂದಿಸಿದರು. ಕೇಶವ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

Kinnigoli-30011904

Comments

comments

Comments are closed.

Read previous post:
Kinnigoli-30011903
ಪಂಜ ರೂ. 5 ಲಕ್ಷ ವಿಟ್ರಿಫೈಡ್‌ಟೈಲ್ಸ್‌ ಅಳವಡಿಕೆ

ಕಿನ್ನಿಗೋಳಿ: ಪಂಜ ದ. ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಒಳಾಂಗಣಕ್ಕೆ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಇವರ ಶಿಫಾರಸ್ಸಿನ ಮೇರೆಗೆ ಎಮ್‌ಆರ್‌ಪಿಎಲ್...

Close