ಕಿನ್ನಿಗೋಳಿ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ೨೦೧೮-೧೯ ರ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಹೆದ್ದಾರಿಯ ಎಸ್ ಕೋಡಿಯಲ್ಲಿ ಡಾಂಬರು ಮಾಡಲಾಗಿ ರಸ್ತೆಯನ್ನು ಅಗಲಮಾಡಲಾಗಿದೆ ಆದರೆ ಹೊಸ ಮೋರಿಯ ನಿರ್ಮಾಣ ಮಾಡಿಲ್ಲ ಶಾಲಾ ಮಕ್ಕಳು ಸಂಚರಿಸಲು ತೊಂದರೆ ಆಗಿದೆ, ಹೆದ್ದಾರಿ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನ ಇಲ್ಲ ಎಂದು ಪುನರೂರು ಶಾಲಾ ಶಿಕ್ಷಕಿ ಉಷಾ ಕೆ ಹೇಳಿದರು. ಹೆದ್ದಾರಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಇಲಾಖೆಗೆ ಪತ್ರ ಮುಖೇನ ತಿಳಿಸಲಾಗುವುದು ಎಂದು ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಹೇಳಿದರು.
ಪಂಚಾಯಿತಿ ೩ನೇ ವಾರ್ಡ್ ಹಿಲ್ ಟಾಪ್ ಪರಿಸರದಲ್ಲಿ ಕಳೆದ ಹಲವು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಇದೆ, ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಗುತ್ತಕಾಡು ಪರಿಸರಕ್ಕೆ ಬರುತ್ತಿದೆ ಅದರ ಸಂಪರ್ಕವನ್ನಾದರೂ ನಮಗೆ ನೀಡಿ ಎಂದು ಗ್ರಾಮಸ್ಥ ಪೌಲ್ ನಝರತ್ ಸಮಸ್ಯೆ ಹೇಳಿಕೊಂಡರು. ಪಿಡಿಒ ಉತ್ತರಿಸಿ ಗುತ್ತಕಾಡಿನಲ್ಲಿ ಹೊಸ ಕೊಳವೆ ಬಾವಿ ಪೈಪ್‌ಲೈನ್ ಮಾಡುವ ಯೋಜನೆ ಇದೆ. ಮುಂದಿನ ತಿಂಗಳು ಕಾಮಗಾರಿ ನಡೆಯಬಹುದು ಎಂದು ಮಾಹಿತಿ ನೀಡಿದರು.
ಗೋಳಿಜೋರ ರಸ್ತೆಯ ಬಿತ್ತುಲ್ ಪ್ರದೇಶದಲ್ಲಿ ಹಲವು ಮನೆಗಳಿದ್ದು ರಸ್ತೆ ಸಂಪರ್ಕ, ಮೋರಿ ರಚನೆ ಆಗಬೇಕೆಂದು ಪಂಚಾಯಿತಿಗೆ ಮನವಿ ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಮರಿಯನ್ ಲೋಬೋ ಹೇಳಿದರು. ಈಬಗ್ಗೆ ಮುಂದಿನ ಹಣಕಾಸು ಯೋಜನೆಯಲ್ಲಿ ಕ್ರಿಯಾ ಯೋಜನೆ ಮಾಡಲಾಗುವುದು ಎಂದು ವಾರ್ಡ್ ಸದಸ್ಯ ಚಂದ್ರಶೇಖರ್ ಮಾಹಿತಿ ನೀಡಿದರು.
ಎಸ್ ಕೋಡಿಯಲ್ಲಿ ಬಸ್ ನಿಲ್ದಾಣದ ಪಕ್ಕದಲ್ಲಿ ಚರಂಡಿ ಇಲ್ಲ, ರಸ್ತೆ ಪುಟ್ ಪಾತ್‌ನಲ್ಲಿ ವಾಹನ ನಿಲುಗಡೆ ಹಾಗೂ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಿತು.
ಶಿಕ್ಷಣ ಇಲಾಖೆಯ ಸಂತೋಷ್ ನಾಯ್ಕ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ನಾಗರತ್ನ, ಆರೋಗ್ಯ ಇಲಾಖೆಯ ಪ್ರದೀಪ್ ಕುಮಾರ್, ಕೃಷಿ ಇಲಾಖೆಯ ಯಲ್ಲಣ್ಣ ಗೌಡ, ಕಂದಾಯ ಇಲಾಖೆಯ ಸುಜೀತ್ ಮಾಹಿತಿ ನೀಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಸದಸ್ಯರಾದ ರವೀಂದ್ರ, ಸೇವಂತಿ, ಶಾಲಿನಿ, ಸುಲೋಚನಾ ಶೆಟ್ಟಿಗಾರ್, ದೇವಪ್ರಸಾದ್ ಪುನರೂರು, ಹೇಮಲತಾ, ಪೂರ್ಣಿಮ, ಶರತ್, ಚಂದ್ರಶೇಖರ್, ಟಿ. ಎಚ್ ಮಯ್ಯದ್ದಿ, ಜೋನ್ಸನ್ ಡಿಸೋಜ, ಸುನೀತಾ, ಶ್ಯಾಮಲ ಹೆಗ್ಡೆ, ವಾಣಿ, ಸಂತಾನ್ ಡಿಸೋಜ, ಅರುಣ್, ಸಂತೋಷ್, ಕಾರ್ಯದರ್ಶಿ ಶ್ರೀಕಾಂತ್ ಸಿಂಪಿಗೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-06021901

Comments

comments

Comments are closed.

Read previous post:
Kinnigoli-03021902
ಅಮ್ಮನೆಡೆ ನಮ್ಮ ನಡಿಗೆ

ಕಿನ್ನಿಗೋಳಿ: ಮಳವೂರು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಆರನೇ ವರ್ಷದ ಅಮ್ಮನೆಡೆಗೆ ನಮ್ಮ ನಡಿಗೆ ಎಂಬ ಘೋಷ ವಾಕ್ಯದಡಿಯಲ್ಲಿ ಕಟೀಲು ದೇವಳಕ್ಕೆ ಪಾದಯಾತ್ರೆಯ ಸಂಕಲ್ಪಕ್ಕೆ ಮಳವೂರು ಕ್ಷೇತ್ರದಲ್ಲಿ ಬೆಳಿಗ್ಗೆ ಏಳು...

Close